SRK Fitness; ಕಿಂಗ್ ಖಾನ್ ಫಿಟ್ನೆಸ್ ಸೀಕ್ರೆಟ್: ವಯಸ್ಸು 60 ಆದ್ರು ಶಾರುಖ್ ಎನರ್ಜಿ ಹಿಂದಿದೆ ಒಂದು ಸರಳ ಸೂತ್ರ

ಬಾಲಿವುಡ್ ಅಂಗಳದಲ್ಲಿ 'ಬಾದ್‌ಷಾ' ಎನಿಸಿಕೊಂಡಿರುವ ಶಾರುಖ್ ಖಾನ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ದಶಕಗಳು ಕಳೆದರೂ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಎನರ್ಜಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಂದಿಗೂ ಯುವ ನಟರಿಗೆ ಪೈಪೋಟಿ ನೀಡುವಂತೆ ಅವರು ಕಾಣಿಸಿಕೊಳ್ಳುತ್ತಾರೆ.

ಸಿನಿಮಾ ರಂಗದಲ್ಲಿ ನಟರು ತಮ್ಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಶಾರುಖ್ ಖಾನ್ ಅವರ ವಿಚಾರಕ್ಕೆ ಬಂದರೆ ಅವರ ಫಿಟ್ನೆಸ್ ಹಿಂದೆ ಯಾವುದೇ ವಿಚಿತ್ರ ಅಥವಾ ದುಬಾರಿ ಪ್ರಯೋಗಗಳಿಲ್ಲ. ಅವರು ಪಾಲಿಸುವ ಹಾದಿಯೇ ಬೇರೆ.

Shah Rukh Khan s fitness secret No fancy foods Just pure simplicity for ageless energy

ಅಭಿಮಾನಿಗಳು ಸದಾ ಕಾಲ ಶಾರುಖ್ ಹೇಗೆ ಇಷ್ಟು ಯಂಗ್ ಆಗಿ ಕಾಣುತ್ತಾರೆ ಎಂದು ಕೇಳುತ್ತಲೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಸಿಕ್ಸ್ ಪ್ಯಾಕ್ ಆಬ್ಸ್ ನೋಡಿ ಎಲ್ಲರೂ ದಂಗಾಗಿದ್ದರು. ಈಗ ಅವರ ಈ ಅದ್ಭುತ ಬದಲಾವಣೆ ಮತ್ತು ಶಕ್ತಿಯ ಮೂಲ ಯಾವುದು ಎಂಬುದು ಬಹಿರಂಗವಾಗಿದೆ.

ಸರಳ ಆಹಾರದ ಗುಟ್ಟು...

ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ತಮ್ಮ ಡಯಟ್ ಬಗ್ಗೆ ಕುತೂಹಲಕಾರಿ ವಿಷಯ ಹಂಚಿಕೊಂಡಿದ್ದಾರೆ. ಅವರು ದಿನಕ್ಕೆ ಕೇವಲ 2 ಬಾರಿ ಮಾತ್ರ ಆಹಾರ ಸೇವಿಸುತ್ತಾರಂತೆ. ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ನಡುವೆ ಯಾವುದೇ ಸಣ್ಣ ತಿಂಡಿ ಅಥವಾ ಸ್ನ್ಯಾಕ್ಸ್ ತಿನ್ನುವುದಿಲ್ಲ.

Shah Rukh Khan s fitness secret No fancy foods Just pure simplicity for ageless energy

ವಿಶೇಷವೆಂದರೆ ಶಾರುಖ್ ತಮಗೆ ಯಾವುದೇ ಫ್ಯಾನ್ಸಿ ಪದಾರ್ಥಗಳು ಇಷ್ಟವಾಗಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮನೆಯಲ್ಲಿ ತಯಾರಿಸಿದ ಸರಳ ಆಹಾರವೇ ಅವರಿಗೆ ಪಂಚಪ್ರಾಣ. ಅವರ ತಟ್ಟೆಯಲ್ಲಿ ಸದಾ ಕಾಣಿಸಿಕೊಳ್ಳುವ ಮೂರು ಮುಖ್ಯ ಪದಾರ್ಥಗಳೆಂದರೆ ಮೊಳಕೆ ಭರಿತ ಕಾಳುಗಳು, ಗ್ರಿಲ್ಡ್ ಚಿಕನ್ ಮತ್ತು ಬ್ರೊಕೊಲಿ.

ರಾತ್ರಿ 2 ಗಂಟೆಗೆ ವರ್ಕೌಟ್

ಶಾರುಖ್ ಖಾನ್ ಜೀವನಶೈಲಿ ಸಾಮಾನ್ಯರಿಗಿಂತ ಭಿನ್ನವಾಗಿದೆ. ಅವರು ಪ್ರತಿದಿನ ಬೆಳಗಿನ ಜಾವ 5 ಗಂಟೆಗೆ ಮಲಗಿ ಬೆಳಗ್ಗೆ 9 ಗಂಟೆಗೆ ಏಳುತ್ತಾರೆ. ಶೂಟಿಂಗ್ ಮುಗಿಸಿ ಮನೆಗೆ ಬಂದ ನಂತರ ಅಂದರೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ವರ್ಕೌಟ್ ಮಾಡುತ್ತಾರೆ.

ಕಿಂಗ್ ಖಾನ್ ಅವರಿಗೆ ಸಿಹಿಯೆಂದರೆ ಅಷ್ಟಕ್ಕಷ್ಟೆ. ಅವರು ಸಕ್ಕರೆ ಅಂಶವಿರುವ ಪದಾರ್ಥಗಳಿಂದ ಸಂಪೂರ್ಣವಾಗಿ ದೂರವಿರುತ್ತಾರೆ. ಬಿಳಿ ಅಕ್ಕಿ, ಮೈದಾ ಮತ್ತು ಮದ್ಯಪಾನವನ್ನು ಅವರು ಬಹಳ ಮಿತವಾಗಿ ಬಳಸುತ್ತಾರೆ ಅಥವಾ ಸಂಪೂರ್ಣ ತ್ಯಜಿಸುತ್ತಾರೆ. ಪ್ರೋಟೀನ್ ಸಮೃದ್ಧವಾಗಿರುವ ದಾಲ್ ಮತ್ತು ತರಕಾರಿಗಳು ಅವರ ದೈನಂದಿನ ಶಕ್ತಿಯ ಮೂಲವಾಗಿದೆ.

ಡಯಟ್ ಕಟ್ಟುನಿಟ್ಟು...

ಮನೆ ಊಟ: ಶೂಟಿಂಗ್ ಸೆಟ್‌ಗಳಲ್ಲಿನ ಊಟಕ್ಕಿಂತ ಮನೆಯಿಂದ ತಂದ ಊಟವನ್ನೇ ಅವರು ಹೆಚ್ಚಾಗಿ ಇಷ್ಟಪಡುತ್ತಾರೆ.

ಆಹಾರದ ಮಿತಿ: ಹೆಚ್ಚು ತಿನ್ನುವುದಕ್ಕಿಂತ ಎಷ್ಟು ಬೇಕೋ ಅಷ್ಟನ್ನೇ ತಿನ್ನುವ ಶಿಸ್ತು ಅವರಿಗಿದೆ.

ಹೈಡ್ರೇಶನ್: ದಿನವಿಡೀ ಸಾಕಷ್ಟು ನೀರು ಮತ್ತು ಎಳನೀರು ಸೇವಿಸುವ ಮೂಲಕ ದೇಹವನ್ನು ಫ್ರೆಶ್ ಆಗಿ ಇಟ್ಟುಕೊಳ್ಳುತ್ತಾರೆ.

ಹಿತಮಿತ ಆಹಾರ: ಯಾವುದೇ ಫ್ಯಾನ್ಸಿ ಡಯಟ್ ಪ್ಲಾನ್ ಇಲ್ಲದೆ, ನೈಸರ್ಗಿಕವಾಗಿ ಸಿಗುವ ಆಹಾರಗಳ ಮೇಲೆ ಅವರಿಗೆ ನಂಬಿಕೆ ಹೆಚ್ಚು.

ಒಟ್ಟಾರೆಯಾಗಿ ಹೇಳುವುದಾದರೆ ಶಾರುಖ್ ಖಾನ್ ಅವರ ಈ 'ಏಜ್‌ಲೆಸ್ ಎನರ್ಜಿ'ಗೆ ಯಾವುದೇ ಶಾರ್ಟ್ಕಟ್ ಇಲ್ಲ. ಶಿಸ್ತುಬದ್ಧ ಜೀವನ ಮತ್ತು ಸರಳ ಆಹಾರವೇ ಅವರ ಯೌವನದ ರಹಸ್ಯ. ವಯಸ್ಸು 60 ಆದ್ರು ಅವರು ಇಷ್ಟು ಫಿಟ್ ಆಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ. 'ಪಠಾಣ್', 'ಜವಾನ್', 'ಡಂಕಿ' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದ ಶಾರುಖ್ ಮುಂದೆ 'ಕಿಂಗ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

More from Filmibeat

Read more about: shahrukh khan bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X