ಶುಗರ್ ಹಾಗೂ ಬಿಪಿ ಇದ್ರೂ ನಟ ಸಿಹಿಕಹಿ ಚಂದ್ರು ಧೈರ್ಯವಾಗಿ ಸ್ಟೀಟ್ ತಿನ್ನೋದು ಹೇಗೆ?

ಶುಗರ್ ಹಾಗೂ ಬಿಪಿ ಕಂಟ್ರೋಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ನಿಜಕ್ಕೂ ಸವಾಲು. ಸಿಹಿ ತಿನಿಸುಗಳನ್ನು ಕಂಡಾಗ ತಿನ್ನಬೇಕು ಎನಿಸುತ್ತದೆ. ಆದರೆ ಮಧುಮೇಹಿಗಳು ಸಿಹಿ ಕಂಡರೂ ತಿನ್ನದೇ ಇರಲು ಬಹಳ ಪ್ರಯತ್ನಿಸುತ್ತಾರೆ. ಒಂದೊಮ್ಮೆ ತಿಂದರೂ ಬಹಳ ಭಯಭೀತರಾಗುತ್ತಾರೆ.

ಹಿರಿಯ ನಟ ಸಿಹಿಕಹಿ ಚಂದ್ರು ತಮ್ಮ ಅಭಿನಯದಿಂದ ಮಾತ್ರವಲ್ಲ ಭೋಜನ ಪ್ರೀತಿ, ಬಾಣಸಿಗನಾಗಿಯೂ ಚಿರಪರಿಚಿತ. 'ಬೊಂಬಾಟ್ ಭೋಜನ' ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆಯೇ ಈ ಕಾರ್ಯಕ್ರಮ 850 ಸಂಚಿಕೆಗಳನ್ನು ಪೂರೈಸಿ ದಾಖಲೆ ಬರೆದಿತ್ತು. ಸಾವಿರಾರು ಖಾದ್ಯಗಳ ರೆಸಿಪಿಯನ್ನು ಈ ಶೋನಲ್ಲಿ ತೋರಿಸಲಾಗಿತ್ತು.

Sihikahi Chandru Reveals How He Manages Diabetes and BP While Hosting a Food Show

ಸಾಕಷ್ಟು ಸಿಹಿ ಪದಾರ್ಥಗಳ ರೆಸಿಪಿಗಳನ್ನು ಕಾರ್ಯಕ್ರಮದಲ್ಲಿ ಮಾಡಿ ತೋರಿಸಲಾಗುತ್ತದೆ. ಬಳಿಕ ಸಿಹಿಕಹಿ ಚಂದ್ರು ಅದನ್ನು ಟೇಸ್ಟ್ ಮಾಡಿ ಹೇಗಿದೆ ಎಂದು ವಿವರಿಸುತ್ತಾರೆ. ಅವರು ಟೇಸ್ಟ್ ಮಾಡುವ ಅದನ್ನು ಆಸ್ವಾದಿಸುವ ಶೈಲಿಯೇ ಬಹಳ ಸೊಗಸು. ಅದನ್ನು ವೀಕ್ಷಕರು ಬಹಳ ಎಂಜಾಯ್ ಮಾಡುತ್ತಾರೆ. ಸಿಹಿಕಹಿ ಚಂದ್ರು ಅವರಿಗೆ ಶುಗರ್ ಹಾಗೂ ಬಿಪಿ ಇದೆ. ಆದರೂ ಅಷ್ಟು ಚೆನ್ನಾಗಿ ಸಿಹಿ ಪದಾರ್ಥಗಳನ್ನು ತಿನ್ನುತ್ತಾರಲ್ಲಪ್ಪ ಅದು ಹೇಗೆ? ಎಂದು ವೀಕ್ಷಕರು ಅಚ್ಚರಿಗೊಳ್ಳುವುದು ಉಂಟು. ಈ ಬಗ್ಗೆ ಸ್ವತಃ ಸಿಹಿಕಹಿ ಚಂದ್ರು Happiest Health Kannada ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಿಹಿ ಪದಾರ್ಥ ತಿಂದರೂ ಅದನ್ನು ಬ್ಯಾಲೆನ್ಸ್ ಮಾಡುವುದು ಮುಖ್ಯ ಎಂದಿದ್ದಾರೆ.

ಸಿಹಿಕಹಿ ಚಂದ್ರು ಹೊರಗಡೆ ಅಷ್ಟು ತಿಂತಾರೆ. ಅವರಿಗೆ ಏನು ಆಗಲ್ವಾ? ಎನ್ನುವ ಪ್ರಶ್ನೆಗೆ "ಸತ್ಯ ಹೇಳಬೇಕು ಅಂದ್ರೆ, ನಾನು ಹೆಚ್ಚು ತಿನ್ನಲ್ಲ. ರುಚಿ ನೋಡುತ್ತೇನೆ. ತಿನ್ನುವುದು ಬೇರೆ, ರುಚಿ ನೋಡುವುದು ಬೇರೆ. ನಾನು ಸಾಮಾನ್ಯವಾಗಿ 3 ಚಮಚ ಟೇಸ್ಟ್ ಮಾಡುತ್ತೇನೆ. ಅದನ್ನು ಬಹಳ ಅನುಭವಿಸುತ್ತೇನೆ. ಉಳಿದಿದ್ದನ್ನು ಬೇರೆಯವರು ತಿನ್ನುತ್ತಾರೆ. ನನಗೆ ಶುಗರ್, ಬಿಪಿ ಇದೆ. ಆದರೂ ಎಲ್ಲವನ್ನೂ ಮ್ಯಾನೇಜ್ ಮಾಡ್ತೀನಿ, ಮೇಂಟೇನ್ ಮಾಡ್ತೀನಿ. ಅದು ಹೇಗೆ ಅಂದ್ರೆ ಟೇಸ್ಟ್ ಮಾಡಿ, ತಿನ್ನಬೇಡಿ ಎನ್ನುವ ನಿಯಮ ಪಾಲಿಸುತ್ತೇನೆ" ಎಂದಿದ್ದಾರೆ.

ನನ್ನ ಕಾರ್ಯಕ್ರಮ ನೋಡಿದರೆ ಬಹಳ ತಿನ್ನುತ್ತೇನೆ ಎಂದುಕೊಳ್ಳುತ್ತಾರೆ. ಅಸಲಿ ಸಂಗತಿ ಏನು ಗೊತ್ತಾ? ಅದೆಲ್ಲಾ ಮೋಸ ಎಂದು ತಮಾಷೆ ಮಾಡಿದ್ದಾರೆ. "ನಾನು 4 ಚಮಚ ತಿಂದಿರುತ್ತೇನೆ. ಅದನ್ನು ಬೇರೆ ಬೇರೆ ಕ್ಯಾಮರಾಗಳಲ್ಲಿ ಬೇರೆ ಬೇರೆ ಆಂಗಲ್‌ಗಳಲ್ಲಿ ಶೂಟ್ ಮಾಡಿ ಎಡಿಟ್ ಮಾಡಿ, ಕೊನೆಗೆ ಖಾಲಿ ಪ್ಲೇಟ್ ಇರುವುದನ್ನು ತೋರಿಸುತ್ತೇವೆ" ಎಂದಿದ್ದಾರೆ.

ಒಮ್ಮೆ ಬಹಳ ದಪ್ಪ ಆಗಿಬಿಟ್ಟಿದ್ದೆ. ಕೆಲವೊಮ್ಮೆ ಹೋಟೆಲ್‌ಗಳ ರಿವ್ಯೂಗೆ ಹೋಗುತ್ತಿದ್ದೆ. ಒಮ್ಮೊಮ್ಮೆ ಡೇಟ್ಸ್ ಕಾರಣಕ್ಕೆ ಒಂದೇ ದಿನ 10-12 ಹೋಟೆಲ್‌ಗಳಿಗೆ ಹೋಗಿರುವುದು ಇದೆ. ಕನಿಷ್ಠ 5 ಖಾದ್ಯ ಅಂದರೂ 70 ಖಾದ್ಯಗಳ ಟೇಸ್ಟ್ ಮಾಡುತ್ತಿದ್ದೆ. ಅವತ್ತು ತಿಂದು ಸುಸ್ತಾಗಿಬಿಡುತ್ತಿದ್ದೆ. ಮರುದಿನ ಏನು ತಿನ್ನದೇ ಅದನ್ನು ಬ್ಯಾಲೆನ್ಸ್ ಮಾಡುತ್ತಿದ್ದೆ ಎಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಡಯಾಬಿಟೀಸ್ ಅಂದಾಕ್ಷಣ ಸಕ್ಕರೆಯಿಂದ ದೂರ ಇರಬೇಕು. ನಿಜ ಜೀವನದಲ್ಲಿ ನಾನು ಸಾಮಾನ್ಯವಾಗಿ ಸ್ವೀಟ್ ತಿನ್ನಲ್ಲ. ಆದರೆ ಬೊಂಬಾಟ್ ಭೋಜನ ಕಾರ್ಯಕ್ರಮ ನಿರೂಪಣೆ ವೇಳೆ, ರಿವ್ಯೂ ಮಾಡಲು ಹೋದಾಗ ಅಂದರೆ ವೃತ್ತಿ ಅಂತ ಬಂದಾಗ ಸ್ವೀಟ್ ಟೇಸ್ಟ್ ಮಾಡಬೇಕು. ನಾನು ಮಾಡ್ತೀನಿ, ನನಗೆ ಏನು ಅನ್ನಿಸಲ್ಲ. ಯಾಕಂದರೆ ಆಗ ತಿಂದರೆ ಮತ್ತೆ ಯಾವಾಗಲೋ ಸ್ವೀಟ್ ತಿನ್ನೋದು. ನಿಜ ಜೀವನದಲ್ಲಿ ಅದು ಅಭ್ಯಾಸ ಇಲ್ಲ. ನಿಯಮಿತವಾಗಿ ತಿಂದರೆ ಸಮಸ್ಯೆ.

ನಿಮ್ಮ ಜೀವನಶೈಲಿ ಚೆನ್ನಾಗಿದ್ದು ಸಿಹಿ ಪದಾರ್ಥ ತಿನ್ನದೇ ಇದ್ದರೆ ಯಾವತ್ತೋ ಒಂದು ದಿನ ಸ್ವಲ್ಪ ತಿಂದರೆ ಏನು ಸಮಸ್ಯೆ ಇಲ್ಲ, ಆದರೆ ಆ ಟೆನ್ಷನ್‌ನಲ್ಲಿ ತಿನ್ನಬಾರದು. ತಿನ್ನುವಾಗ ನೆಮ್ಮದಿಯಿಂದ ತಿನ್ನಬೇಕು. ಬಳಿಕ ಹೇಗೆ ಎಂದು ಯೋಚಿಸಬೇಕು. ಅದರ ಬದಲು ಟೆನ್ಷನ್‌ನಲ್ಲಿ ತಿನ್ನುವುದರಿಂದ ಸೈಡ್ ಎಫೆಕ್ಟ್. ತಿಂದರೆ ಸಮಸ್ಯೆ ಎಂದು ಗೊತ್ತಿದ್ದರೆ ತಿನ್ನಬೇಡಿ, ತಿಂದ ಮೇಲೆ ಟೆನ್ಷನ್ ಬೇಡ. ಯಾರಾದರೂ ಬಲವಂತ ಮಾಡಿದಾಗ ಸ್ವಲ್ಪ ಸ್ವೀಟ್ ತಿನ್ನಿ. ಬಳಿಕ ಕೆಲವು ದಿನ್ನ ತಿನ್ನಬೇಡಿ. ಹೀಗೆ ಬ್ಯಾಲೆನ್ಸ್ ಮಾಡಿ ಎಂದು ಸಿಹಿಕಹಿ ಚಂದ್ರು ಕಿವಿಮಾತು ಹೇಳಿದ್ದಾರೆ.

More from Filmibeat

English summary
Veteran actor and food show host Sihikahi Chandru shares how he balances tasting sweets despite having diabetes and BP;
Read more about: sihikahi chandru tv sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X