ರವಿಶಂಕರ್ ಗುರೂಜಿ ಆಶ್ರಮದಲ್ಲಿ ಸಗಣಿ ಬಾಚಿದ ಸ್ಟಾರ್ ಹೀರೊಯಿನ್

ಸಿನಿಮಾ ತಾರೆಯರು ಆಧ್ಯಾತ್ಮದತ್ತ ಹೊರಳುವುದು ಹೊಸದೇನು ಅಲ್ಲ. ಕೋಟಿ ಕೋಟಿ ಆದಾಯ ಗಳಿಸಿದರೂ ಐಷಾರಾಮಿ ಕಾರುಗಳಲ್ಲಿ ಸುತ್ತಾಡಿದರೂ ಪಾರ್ಟಿ, ಪಬ್ ಅಂತೆಲ್ಲಾ ಎಂಜಾಯ್ ಮಾಡಿದರೂ ದೊಡ್ಡ ಬಂಗಲೆಯಲ್ಲಿ ವಾಸಿಸಿದರೂ ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಬೇರೆನೋ ಬೇಕು ಎಂದು ಬಯಸುತ್ತದೆ.

ಸೆಲೆಬ್ರೆಟಿಗಳು ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ಬಿಡುವು ಸಿಕ್ಕರೆ ಕುಟುಂಬ ಸದಸ್ಯರು, ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ಇಲ್ಲೊಬ್ಬ ನಟಿ ರವಿಶಂಕರ್ ಗುರೂಜಿ ಆರ್ಟ್‌ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ತೆರೆಮೇಲೆ ಬಿಂದಾಸ್ ಆಗಿ ಕಾಣಿಸಿಕೊಳ್ಳುವ ಚೆಲುವೆ ಆಶ್ರಮದಲ್ಲಿ ಬಹಳ ಸರಳವಾಗಿ ಕಾಲ ಕಳೆದಿದ್ದಾರೆ. ಆಪ್ತರು ಜೊತೆ ಆಶ್ರಮಕ್ಕೆ ಭೇಟಿ ನೀಡಿದ್ದ ನಟಿ ಒಂದೆರಡು ದಿನ ಅಲ್ಲಿ ಇದ್ದು "ನನ್ನ ಹೃದಯ ತುಂಬಿ ಬಂದಿದೆ" ಎಂದು ಹೇಳಿದ್ದಾರೆ.

Star Heroine Visits Art of Living Ashram for Inner Peace

ಆರ್ಟ್‌ ಆಫ್ ಲಿವಿಂಗ್ ಆಶ್ರಮಕ್ಕೆ ಚೆಲುವೆ ಭೇಟಿ ನೀಡಿದ್ದ ಫೋಟೊ, ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. "ನನ್ನ ಹೃದಯ ತುಂಬಿ ಬಂದಿದೆಗುರುದೇವ.. ನನಗೆ ದಾರಿ ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮಗೆ ಕೃತಜ್ಞನಾಗಿದ್ದೇನೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಆಕೆಯ ಪೋಸ್ಟ್ ನೋಡಿ ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ನೆರೆಯ ಶ್ರೀಲಂಕಾ ಮೂಲಕ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿ ಸಕ್ಸಸ್ ಕಂಡವರು. ಈಗ ಆಕೆಯ ಕ್ರೇಜ್ ಕಮ್ಮಿ ಆಗಿದೆ. ಆದರೆ ಕೆಲವೇ ವರ್ಷಗಳ ಹಿಂದೆ ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸಿದ್ದಾರೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದರು. 'ರಾ ರಾ ರಕ್ಕಮ್ಮ' ಎಂದು ಕಿಚ್ಚನ ಜೊತೆ ಕುಣಿದು ಕನ್ನಡ ಸಿನಿರಸಿಕರಿಗೂ ಪರಿಚಿತರಾಗಿದ್ದರು.

ಬಹರೇನ್‌ನಲ್ಲಿ ಹುಟ್ಟಿದ ಜಾಕ್ವೆಲಿನ್ ಆಸ್ಟ್ರೇಲಿಯಾದಲ್ಲಿ ಓದಿ ಬೆಳೆದವರು. ತಾಯಿ ಮಲೇಷಿಯಾ, ತಂದೆ ಶ್ರೀಲಂಕಾ. ನೆರೆಯ ಶ್ರೀಲಂಕಾದವರು ಆಗಿದ್ದರೂ ಸದ್ಯ ಭಾರತದಲ್ಲೇ ವಾಸಿಸುತ್ತಿದ್ದಾರೆ. ಸುಕೇಶ್ ಚಂದ್ರಶೇಖರ್ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಈಕೆಯ ಹೆಸರು ಕೇಳಿಬಂದಿತ್ತು. ಪ್ರಕರಣ ಸಂಬಂಧ ಕೋರ್ಟಿಗೆ ಅಲೆಯುವಂತಾಯಿತು. ಎರಡು ತಿಂಗಳ ಹಿಂದೆ ಜಾಕ್ವೆಲಿನ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು.

ದಿಢೀರನೆ ಜಾಕ್ವೆಲಿನ್ ಫರ್ನಾಂಡಿಸ್ ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿರುವ ಗೋಶಾಲೆಯಲ್ಲಿ ಸಮಯ ಕಳೆದಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಜೊತೆ ಬಹಳ ಸರಳವಾಗಿ ನಡೆದುಕೊಂಡಿದ್ದಾರೆ. ಗೋಶಾಲೆಯಲ್ಲಿ ಹಸುವಿನ ಸಗಣಿಯನ್ನು ಬಾಚಿದ್ದಾರೆ. ಕುದರೆ ಏರಿ ಸವಾರಿ ಮಾಡಿದ್ದಾರೆ, ಆನೆಯನ್ನು ಕಂಡು ಪುಳಕಿತರಾಗಿದ್ದಾರೆ. ಧ್ಯಾನ ಮಾಡಿದ್ದಾರೆ, ಪ್ರವಚನ ಕೇಳಿದ್ದಾರೆ. ರವಿಶಂಕರ್ ಗುರೂಜಿ ಆಶೀರ್ವಾದ ಸಹ ಪಡೆದಿದ್ದಾರೆ.

ಆಪ್ತರು, ಸ್ನೇಹಿತರ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಆಶ್ರಮಕ್ಕೆ ಭೇಟಿ ನೀಡಿರುವುದು ಗೊತ್ತಾಗುತ್ತಿದೆ. ಇತ್ತೀಚೆಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜಾಕ್ವೆಲಿನ್ ಭಾಗಿ ಆಗಿದ್ದರು. ಕಳೆದ ವಾರ ತೆರೆಕಂಡ 'ಹೌಸ್‌ಫುಲ್- 5' ಚಿತ್ರದಲ್ಲಿ ಕೂಡ ಆಕೆ ನಟಿಸಿದ್ದರು. ಅದಕ್ಕೂ ಮುನ್ನ ಬಂದಿದ್ದ 'ಫತೇ' ಹಾಗೂ 'ರೈಡ್- 2' ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಸದ್ಯ 'ವೆಲ್‌ಕಮ್ ಟು ಜಂಗಲ್' ಎಂಬ ಚಿತ್ರದಲ್ಲಿ ನಟಿಸ್ತಿದ್ದಾರೆ.

16 ವರ್ಷಗಳ ಹಿಂದೆ ಬಂದಿದ್ದ 'ಅಲ್ಲಾದಿನ್' ಹಿಂದಿ ಚಿತ್ರದಲ್ಲಿ ಜಾಕ್ವೆಲಿನ್ ಮೊದಲ ಬಾರಿ ನಟಿಸಿದ್ದರು. ಬಳಿಕ 'ಹೌಸ್‌ಫುಲ್' ಸಿನಿಮಾ ಸರಣಿಯನ್ನು ಸೇರಿಕೊಂಡಿದ್ದರು. 'ಮರ್ಡರ್- 2', 'ರೇಸ್-2', 'ಕಿಕ್', 'ಬಾಘಿ-2' ಸೇರಿ ಹಲವು ಸಿನಿಮಾಗಳಲ್ಲಿ ಮಿಂಚಿದರು. ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿದು ರಂಗೇರಿಸಿದ್ದರು.

More from Filmibeat

English summary
Famous actress Takes a Spiritual Break at Sri Sri Ravi Shankar's Ashram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X