58ರ ಹರೆಯದಲ್ಲೂ ಮಾಧುರಿ ದೀಕ್ಷಿತ್ ಸುಂದರಿ? 'ಧಕ್ ಧಕ್' ಬೆಡಗಿಯ ತ್ವಚೆಯ ಕಾಂತಿಯ ಗುಟ್ಟೇನು?

ಬಣ್ಣದ ಲೋಕದಲ್ಲಿ ಮಿಂಚುವುದು ಸುಲಭವಲ್ಲ. ಇಲ್ಲಿ ಮುಖದ ಮೇಲಿನ ಒಂದು ಸಣ್ಣ ಗೆರೆ ಕೂಡ ದೊಡ್ಡ ಚರ್ಚೆಗೆ ಗ್ರಾಸವಾಗುತ್ತದೆ. ನಟಿಯರು ತಮ್ಮ ಅಂದವನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೆ ದಶಕಗಳು ಕಳೆದರೂ ಕಿಂಚಿತ್ತೂ ಅಂದ ಕಡಿಮೆ ಮಾಡಿಕೊಳ್ಳದ ನಟಿಯರು ಬೆರಳಣಿಕೆಯಷ್ಟು ಮಾತ್ರ ಇದ್ದಾರೆ.

ಅವರ ನಗು ಅದೆಷ್ಟೋ ಹೃದಯಗಳನ್ನು ಗೆದ್ದಿದೆ. ಅವರ ಡ್ಯಾನ್ಸ್ ಇಂದಿಗೂ ಯುವಕರಿಗೆ ಸ್ಪೂರ್ತಿ. ವಯಸ್ಸು ಐವತ್ತರ ಗಡಿ ದಾಟಿದ್ದರೂ, ಇಪ್ಪತ್ತರ ಹರೆಯದ ಹುಡುಗಿಯರಿಗೂ ಪೈಪೋಟಿ ನೀಡುವ ಇವರ ಹೊಳಪಿನ ಹಿಂದಿರುವ ಆ ಮ್ಯಾಜಿಕ್ ಏನು? ಇಷ್ಟು ವರ್ಷಗಳ ಕಾಲ ತಮ್ಮ ಗ್ಲಾಮರ್ ಅನ್ನು ಹಾಗೆಯೇ ಕಾಪಾಡಿಕೊಂಡಿರುವ ಆ 'ಸೀಕ್ರೆಟ್' ಈಗ ಬಯಲಾಗಿದೆ.

Still 25 at 58 The secret behind Madhuri Dixit s ageless glow is finally out

ಸಾಮಾನ್ಯವಾಗಿ ನಟಿಯರು ದುಬಾರಿ ಸರ್ಜರಿಗಳ ಮೊರೆ ಹೋಗುತ್ತಾರೆ ಎಂಬ ಮಾತಿದೆ. ಆದರೆ ಈ ನಟಿ ಮಾತ್ರ ಅಪ್ಪಟ ದೇಸಿ ಸ್ಟೈಲ್ ಮತ್ತು ಶಿಸ್ತಿನ ಜೀವನಕ್ಕೆ ಹೆಸರಾದವರು. ಮನೆಯಲ್ಲಿ ಸಿಗುವ ಪದಾರ್ಥಗಳನ್ನೇ ಬಳಸಿ ತಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಆಶ್ಚರ್ಯದ ಸಂಗತಿ. ಅಷ್ಟಕ್ಕೂ ಯಾರು ಆ ಸುಂದರಿ? ಅವರು ಫಾಲೋ ಮಾಡುವ ಆ ರೂಟೀನ್ ಏನು ಎಂಬ ವಿವರ ಇಲ್ಲಿದೆ ನೋಡಿ.

ಮಾಧುರಿ ದೀಕ್ಷಿತ್ ಸೌಂದರ್ಯದ ಹಿಂದಿನ ಆ 'ಮೂರು ಮಂತ್ರಗಳು'

ಹೌದು, ನಾವು ಮಾತನಾಡುತ್ತಿರುವುದು ಬಾಲಿವುಡ್‌ನ ಎವರ್ಗ್ರೀನ್ ಬ್ಯೂಟಿ ಮಾಧುರಿ ದೀಕ್ಷಿತ್ ಬಗ್ಗೆ. ಮಾಧುರಿ ಅವರ ಸ್ಕಿನ್ ಇಂದಿಗೂ ಅಷ್ಟೊಂದು ಸಾಫ್ಟ್ ಆಗಿರಲು ಮುಖ್ಯ ಕಾರಣ ಅವರ ಶಿಸ್ತು. ಅವರು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಕ್ಲೆನ್ಸರ್ ಬಳಸುತ್ತಾರೆ. ಇದಾದ ನಂತರ ಅಲ್ಕೋಹಾಲ್ ಫ್ರೀ ಟೋನರ್ (ರೋಸ್ ವಾಟರ್) ಹಚ್ಚುವುದನ್ನು ಮರೆಯುವುದಿಲ್ಲ.

Still 25 at 58 The secret behind Madhuri Dixit s ageless glow is finally out

ಇನ್ನು ಮಾಧುರಿ ಪ್ರಕಾರ ವಿಟಮಿನ್ ಸಿ ಅವರ ತ್ವಚೆಯ ಅತ್ಯುತ್ತಮ ಗೆಳೆಯ. ಮುಖದ ಮೇಲಿನ ಕಪ್ಪು ಕಲೆಗಳನ್ನು ತಡೆಯಲು ಅವರು ವಿಟಮಿನ್ ಸಿ ಸೀರಮ್ ಬಳಸುತ್ತಾರೆ. ಜೊತೆಗೆ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್‌ ಇಲ್ಲದೆ ಮನೆಯಿಂದ ಹೊರಬರುವುದಿಲ್ಲ. ಮುಖಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಕಾಳಜಿಯನ್ನು ಕುತ್ತಿಗೆ ಮತ್ತು ಕೈಗಳಿಗೂ ನೀಡುತ್ತಾರೆ.

ರಾತ್ರಿ ಮಲಗುವ ಮುನ್ನ ಮರೆಯದ 'ಕ್ಲೀನಿಂಗ್' ರೂಟೀನ್

ಶೂಟಿಂಗ್ ಹೋದಾಗ ಮುಖದ ಮೇಲೆ ರಾಶಿ ರಾಶಿ ಮೇಕಪ್ ಇರುತ್ತದೆ. ಇದನ್ನು ತೆಗೆಯದಿದ್ದರೆ ಚರ್ಮ ಹಾಳಾಗುತ್ತದೆ ಎಂಬುದು ಮಾಧುರಿ ವಾದ. ಅದಕ್ಕಾಗಿಯೇ ಅವರು ರಾತ್ರಿ ಮಲಗುವ ಮುನ್ನ 'ಡಬಲ್ ಕ್ಲೆನ್ಸಿಂಗ್' ಮಾಡುತ್ತಾರೆ. ಮೈಸೆಲ್ಲರ್ ವಾಟರ್ ಅಥವಾ ಕ್ಲೆನ್ಸಿಂಗ್ ಬಾಮ್ ಬಳಸಿ ಮೇಕಪ್ ಅನ್ನು ಸಂಪೂರ್ಣವಾಗಿ ಕಿತ್ತು ಹಾಕುತ್ತಾರೆ.

ರಾತ್ರಿ ವೇಳೆಯೂ ಅವರು ವಿಟಮಿನ್ ಸಿ ಮತ್ತು ಮಾಯಿಶ್ಚರೈಸರ್ ಹಚ್ಚುತ್ತಾರೆ. ಅದರಲ್ಲೂ ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ತಡೆಯಲು ಸ್ಪೆಷಲ್ ಐ-ಕ್ರೀಮ್ ಬಳಸುವುದು ಇವರ ಅಭ್ಯಾಸ. ವಾರಕ್ಕೊಮ್ಮೆ ಶೀಟ್ ಮಾಸ್ಕ್ ಬಳಸುವ ಮೂಲಕ ಚರ್ಮಕ್ಕೆ ಎಕ್ಸ್ಟ್ರಾ ಹೈಡ್ರೇಶನ್ ನೀಡುತ್ತಾರೆ. ಇದು ಅವರ ಮುಖದಲ್ಲಿ ನ್ಯಾಚುರಲ್ ಗ್ಲೋ ಬರಲು ಕಾರಣವಾಗುತ್ತದೆ.

ಕಿಚನ್ನಲ್ಲಿರುವ ಪದಾರ್ಥಗಳೇ ಇವರ ಆಸ್ತಿ

ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳ ಮೇಲೆ ಮಾಧುರಿಗೆ ಅಪಾರ ನಂಬಿಕೆ. ಅವರು ಹೆಚ್ಚಾಗಿ ಕಡಲೆ ಹಿಟ್ಟು, ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಮಾಡಿದ ಫೇಸ್ ಪ್ಯಾಕ್ ಬಳಸುತ್ತಾರೆ. ಇದು ಚರ್ಮವನ್ನು ಮೃದುಗೊಳಿಸುವುದಲ್ಲದೆ, ಎಕ್ಸ್ಫೋಲಿಯೇಟ್ ಕೂಡ ಮಾಡುತ್ತದೆ. ಅಷ್ಟೇ ಅಲ್ಲ, ಚರ್ಮದ ಕಾಂತಿಗಾಗಿ ಇವರು ಪ್ರತಿ ದಿನ ಎಳನೀರನ್ನು ಕುಡಿಯುತ್ತಾರೆ.

ಒಂದೊಮ್ಮೆ ಶೂಟಿಂಗ್ ಸುಸ್ತು ಹೆಚ್ಚಾದರೆ, ತಣ್ಣನೆಯ ಹಾಲು ಅಥವಾ ಸೌತೆಕಾಯಿಯನ್ನು ಬಳಸಿ ಮುಖಕ್ಕೆ ಮಸಾಜ್ ಮಾಡುತ್ತಾರೆ. ಇದರಿಂದ ಚರ್ಮಕ್ಕೆ ತಂಪು ಸಿಗುತ್ತದೆ. ವಯಸ್ಸಾದಂತೆ ಕಂಡುಬರುವ ನೆರಿಗೆಗಳನ್ನು ತಡೆಯಲು ಅವರು ಆಗಾಗ್ಗೆ 'ರೆಟಿನಾಲ್' ಅನ್ನೂ ಬಳಸುತ್ತಾರೆ.

ಒಳಗಿನ ಅಂದವೇ ಹೊರಗಿನ ಸೌಂದರ್ಯ

ಕೇವಲ ಕ್ರೀಮ್ ಹಚ್ಚಿದರೆ ಸಾಲದು, ಮನಸ್ಸು ಕೂಡ ಶುದ್ಧವಾಗಿರಬೇಕು ಎಂಬುದು ಈ ನಟಿಯ ಫಿಲಾಸಫಿ. ಪ್ರತಿದಿನ ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅವರ ರೂಟೀನ್ನ ಭಾಗ. ಮನಸ್ಸಿನ ನೆಮ್ಮದಿಯಿಂದ ಮುಖದಲ್ಲಿ ನಗು ಮತ್ತು ಹೊಳಪು ತಂತಾನೇ ಬರುತ್ತದೆ ಎನ್ನುತ್ತಾರೆ ಮಾಧುರಿ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಇಂದಿನ ಯುವ ನಟಿಯರಿಗೆ ಮಾಧುರಿ ಅವರ ಈ ಸ್ಕಿನ್ ಕೇರ್ ಟಿಪ್ಸ್ ನಿಜಕ್ಕೂ ಒಂದು ಮಾದರಿ.

More from Filmibeat

English summary
Still 25 at 58? The secret behind Madhuri Dixit’s ageless glow is finally out…
Read more about: madhuri dixit actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X