Tamannaah Bhatia:ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ತಮನ್ನಾ; ಮಿಲ್ಕಿ ಬ್ಯೂಟಿ ಸೀರೆಯ ವಿಶೇಷತೆಯೇನು?
ತಮನ್ನಾ ಭಾಟಿಯಾ ಗ್ಲಾಮರ್ ಹಾಗೂ ಟ್ರೆಡಿಷನಲ್ ಲುಕ್‌ನಲ್ಲಿ ಹೆಚ್ಚು ಫೇಮಸ್. ಅದು ಯಾವುದೇ ಸಂದರ್ಭವಾಗಲಿ ಮಹಾರಾಣಿಯಂತೆ ಕಂಗೊಳಿಸುತ್ತಾರೆ. ಇನ್ನು ಹಬ್ಬ, ಹರಿದಿನ ದೇವಸ್ಥಾನ ಅಂತ ಬಂದರೆ, ರೇಷ್ಮೆ ಸೀರೆಗಳನ್ನೇ ಧರಿಸಿ ಗಮನ ಸೆಳೆಯುತ್ತಾರೆ. ಸಾಂಪ್ರದಾಯಿಕ ಉಡುಗೆಗೆ ತಮನ್ನಾ ಬ್ರಾಂಡ್ ಅಂಬಾಸಿಡರ್ ರೀತಿಯೇ ಸರಿ. ಅವರ ನಟನೆಯ 'ಒಡೆಲಾ 2' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೂ ಸಾಂಪ್ರದಾಯಿಕ ರೇಷ್ಮೆ ಸೀರೆಯನ್ನು ಧರಿಸಿಯೇ ಬಂದಿದ್ದರು. ಇದೀಗ ಮತ್ತೊಮ್ಮೆ ತಮ್ಮ ಸೀರೆ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ತಮನ್ನಾ ಬೋಲ್ಡ್ ಪಾತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಆದರೆ ಅವರು ಹೊರಗೆ ಬಂದಾಗ, ಅದರಲ್ಲೂ ದೇವಸ್ಥಾನಗೇನಾದರೂ ಭೇಟಿ ಕೊಟ್ಟಾಗಂತೂ ಸಂಪ್ರದಾಯದ ಚಿಲುಮೆಯಂತೆ ಕಂಗೊಳಿಸುತ್ತಾರೆ. ರೇಷ್ಮೇ ಸೀರೆಗಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ಈಗ ವೈರಲ್ ಆಗುತ್ತಿರುವ ಫೋಟೋದಲ್ಲಿ ತಮನ್ನಾ, ತಿಳಿ ಬೂದು ಬಣ್ಣದ, ಕೆಂಪು ಮತ್ತು ಗೋಲ್ಡನ್ ಬಣ್ಣ ಮಿಶ್ರಿತ ಬಾರ್ಡರ್ ಸೀರೆಯನ್ನು ಧರಿಸಿದ್ದಾರೆ. ಸೀರೆಯನ್ನು ಉಡುವುದು ಕೂಡ ಒಂದು ಕಲೆ. ಹೆಣ್ಣು ಮಕ್ಕಳಿಗೆ ಸೀರೆ ಅದ್ಭುತವಾಗಿ ಕಾಣಿಸುತ್ತೆ ಸತ್ಯ. ಆದರೆ ಸಾಂಪ್ರಾದಾಯಿಕ ರೇಷ್ಮೆ ಸೀರೆಯನ್ನು ಫ್ಯಾಷನ್ ಆಗಿ ಕಾಣುವಂತೆ ಕ್ಯಾರಿ ಮಾಡುವ ಕಲೆಯು ಗೊತ್ತಿರಬೇಕು. ಅದನ್ನ ತಮನ್ನಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಎಡಗೈನಲ್ಲಿ ಹೂವಿನ ಬುಟ್ಟಿ ಹಿಡಿದು, ಆ ಹೂವಿನ ಬುಟ್ಟಿಯ ನಡುವೆ ಸೀರೆಯ ಸೆರಗು ನೆರಿಗೆಯಂತೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಸೆರಗಿನ ನೆರಿಗೆ ನೋಡುವುದಕ್ಕೂ ಚಂದವಾಗಿ ಬಂದಿದೆ. ಬಹುಭಾಷಾ ನಟಿ ತಮನ್ನಾ ರೇಷ್ಮೆ ಸೀರೆಯುಟ್ಟು ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗೇ ತಮ್ಮ ಸಿನಿಮಾದ ಯಶಸ್ಸಿಗಾಗಿ ಬೇಡಿಕೊಂಡಿದ್ದಾರೆ. ದೇವರಿಗೆ ಹೂ, ಹಣ್ಣು, ಕಾಯಿ ನೀಡಿ ಪ್ರಾರ್ಥನೆ ಮಾಡಿದರು. ಈ ವೇಳೆ ಗಮನ ಸೆಳೆದದ್ದು ಅವರ ಸಂಸ್ಕೃತಿ. ಹೌದು ತಮನ್ನಾ ಬಾಟಿಯಾ, ದೇವಸ್ಥಾನದ ಒಳಗೆ ಹೆಜ್ಜೆ ಹಾಕಿದರು.
ಸೀರೆ ಉಡುವಾಗ ಹಾಕುವ ಜ್ಯುವೆಲ್ಲರಿ ಬಹಳ ಮುಖ್ಯವಾಗುತ್ತದೆ. ಸೀರೆಗೂ ಜ್ಯುವೆಲ್ಲರಿಗೂ ಮ್ಯಾಚ್ ಆಗಬೇಕು. ಇಲ್ಲವಾದಲ್ಲಿ ಸೀರೆಯ ಲುಕ್ ಬದಲಾಗುತ್ತದೆ. ಕಾಣಬೇಕಾದ ಅಂದ ಮರೆಯಾಗುತ್ತದೆ. ಸೀರೆ ಗ್ರ್ಯಾಂಡ್ ಆಗಿದ್ದಾಗ ಹಾಕುವ ಜ್ಯುವೆಲ್ಲರಿ ಸಿಂಪಲ್ ಆಗಿರಬೇಕು. ತಮನ್ನಾ ಆ ರೀತಿಯ ಫ್ಯಾಷನ್‌ನಲ್ಲಿ ಮುಂದು. ಕೆಂಪು ಮತ್ತು ಗೋಲ್ಡನ್ ಕಲರ್ ಮಿಶ್ರಿತ ಬಾರ್ಡರ್ ರೇಷ್ಮೆ ಸೀರೆಗೆ ಸಿಂಪಲ್ ಆದ ಒಡವೆಗಳನ್ನೇ ಧರಿಸಿದ್ದಾರೆ. ಕೈಗೆ ಸಿಂಪಲ್ ಆದಂತ ಎರಡು ಬಳೆ ಹಾಗೂ ಸಣ್ಣದಾದ ಕಿವಿಯೋಲೆಯನ್ನು ಧರಿಸಿದ್ದಾರೆ. ಸಾಂಪ್ರಾದಾಯಿಕ ಉಡುಗೆಯೊಂದಿಗೆ ಗಮನ ಸೆಳೆದ ತಮನ್ನಾ, ಹಣೆಯ ಮೇಲಿನ ಬಿಂದಿಯೂ ಗಮನ ಸೆಳೆಯುತ್ತಿದೆ. ಕೆಂಪು ಮತ್ತು ಹಳದಿ ಬಣ್ಣದ ಬಿಂದಿಯನ್ನು ಇಟ್ಟಿದ್ದಾರೆ. ಹೇರ್ ಸ್ಟೈಲ್ ಕೂಡ ರೇಷ್ಮೆ ಸೀರೆಯ ಅಂದವನ್ನು ಹೆಚ್ವಿಸಿದೆ. ಬನ್ ಹಾಕಿ, ಅದಕ್ಕೆ ಮಲ್ಲಿಗೆಯನ್ನು ಸುತ್ತಿದ್ದಾರೆ. ಈ ಲುಕ್ ನೋಡಿದ ಹೆಂಗಳೆಯರು ರೇಷ್ಮೆ ಸೀರೆಯನ್ನು ಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ.
ತಮನ್ನಾ ಮೊದಲೇ ಹಾಲ್ಗೆನ್ನೆಯ ಚೆಲುವೆ. ಹಾಲಿನಂತೆ ಹೊಳೆಯುತ್ತಾ ಇರುತ್ತಾರೆ. ಆದರೆ ಹೊರಗೆ ಬಂದಾಗ ಕ್ಯಾಮರಾ, ಲೈಟ್ ಹೊಂದಾಣಿಕೆ ಆಗುವಷ್ಟಾದರೂ ಮೇಕಪ್ ಅಗತ್ಯವಿದೆ. ಹೀಗಾಗಿ ಈ ರೇಷ್ಮೆ ಸೀರೆಗೆ ತಕ್ಕ ಹಾಗೇ ಸಿಂಪಲ್ ಟಚ್ ಅಪ್ ಮಾಡಿಕೊಂಡಿದ್ದಾರೆ. ಬ್ಲಶ್ ಮಾಡಿಕೊಂಡಿದ್ದು, ಐಲೇನರ್, ಮಸ್ಕಾರವನ್ನು ಬಳಕೆ ಮಾಡಿದ್ದಾರೆ. ಪೀಚಿ ಕಲರ್ ಲಿಪ್ ಸ್ಟಿಕ್ ಬಳಕೆ ಮಾಡಿದ್ದಾರೆ. ಈ ಡ್ರೆಸ್ ನಲ್ಲಿ ತಮನ್ನಾ ಅವರನ್ನ ನೋಡಿದಾಗ ಸೆಲೆಬ್ರೆಟಿಗಳು ಸಿಂಪಲ್ ಅಂಡ್ ಟ್ರೆಡಿಷನಲ್ ಲುಕ್ ನಲ್ಲಿಯೂ ಎಷ್ಟು ಚೆಂದವಾಗಿ ಕಾಣುವಂತೆ ರೆಡಿಯಾಗಬಹುದು ಎಂಬುದನ್ನು ಪ್ರೂವ್ ಮಾಡಿದ್ದಾರೆ.


Click it and Unblock the Notifications