ರಾಣಿ ಮುಖರ್ಜಿ ಫಿಟ್ನೆಸ್ ಸೀಕ್ರೆಟ್: 47ರ ಹರೆಯದಲ್ಲೂ ಸುಂದರಿ ಆಗಿರಲು ಈ ನಟಿ ಮಾಡೋ ಆ ಒಂದು ಕೆಲಸವೇನು?
ಸಿನಿಮಾ ಲೋಕ ಅಂದಮೇಲೆ ಅಲ್ಲಿ ಬಣ್ಣದ ಹೊಳಪು ಮಾತ್ರವಲ್ಲ, ದೈಹಿಕ ಸೌಂದರ್ಯವೂ ಅಷ್ಟೇ ಮುಖ್ಯ. ದಶಕಗಳಿಂದ ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿಯೊಬ್ಬರಿದ್ದಾರೆ. ಅವರ ನಟನೆಗೆ ಸಾಟಿಯೇ ಇಲ್ಲ, ಅವರ ಕಣ್ಣುಗಳಲ್ಲೇ ಸಾವಿರ ಭಾವನೆಗಳು ಅಡಗಿವೆ. ಇಂದಿಗೂ ಅವರು ತೆರೆಯ ಮೇಲೆ ಕಾಣಿಸಿಕೊಂಡರೆ ಪಡ್ಡೆಹೈಕಳ ಎದೆಬಡಿತ ಜೋರಾಗುವುದು ಸುಳ್ಳಲ್ಲ.
ವಯಸ್ಸು ಎಷ್ಟೇ ಆದರೂ ಸದಾ ಯಂಗ್ ಆಗಿ ಕಾಣುವ ಇವರನ್ನು ಕಂಡರೆ ಯಾರಿಗಾದರೂ ಅಚ್ಚರಿ ಮೂಡುತ್ತದೆ. ಮದುವೆ, ಮಗು ಆದ ನಂತರವೂ ತಮ್ಮ ಫಿಗರ್ ಮೇಂಟೇನ್ ಮಾಡುವುದು ಸುಲಭದ ಮಾತಲ್ಲ. ಆದರೆ, ಈ ನಟಿ ಮಾತ್ರ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಇಂದಿಗೂ ಕಿರಿಯ ನಟಿಯರಿಗೆ ಪೈಪೋಟಿ ನೀಡುವ ಇವರ ಹೊಳಪಿನ ಹಿಂದಿರುವ ಆ 'ಮ್ಯಾಜಿಕ್' ಏನು ಎಂಬುದು ಅಭಿಮಾನಿಗಳ ಕುತೂಹಲ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದಾಕ್ಷಣ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಇವರು ಅನುಸರಿಸುವ ಹಾದಿಯೇ ಬೇರೆ. ಸರಳತೆ ಮತ್ತು ಶಿಸ್ತಿನ ಜೀವನಕ್ಕೆ ಹೆಸರಾದ ಇವರ ದಿನಚರಿ ಹೇಗಿರುತ್ತದೆ? ಈ ಸುಂದರ ಕಾಯದ ಹಿಂದಿರುವ ಅಸಲಿ ಗುಟ್ಟನ್ನು ನಾವಿಂದು ಬಿಚ್ಚಿಡಲಿದ್ದೇವೆ.
ರಾಣಿ ಮುಖರ್ಜಿ ಅವರ ಫಿಟ್ನೆಸ್ ಮಂತ್ರ
ಹೌದು, ನಾವು ಮಾತನಾಡುತ್ತಿರುವುದು ಬಾಲಿವುಡ್‌ನ ಪ್ರತಿಭಾವಂತ ನಟಿ ರಾಣಿ ಮುಖರ್ಜಿ ಅವರ ಬಗ್ಗೆ. ಬಂಗಾಳಿ ಬೆಡಗಿಯಾದ ಇವರು ತಮ್ಮ 47ರ ಹರೆಯದಲ್ಲೂ ತುಂಬಾ ಆಕರ್ಷಕವಾಗಿ ಕಾಣಲು ಕಾರಣ ಅವರ ನಿರಂತರ ವ್ಯಾಯಾಮ. ರಾಣಿ ಕೇವಲ ಜಿಮ್ ಹೋಗುವುದನ್ನೇ ನಂಬಿದವರಲ್ಲ. ಅವರು ಭಾರತೀಯ ಮೂಲದ ಯೋಗಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
ಪಾಯಲ್ ಗಿದ್ವಾನಿ ತಿವಾರಿ ಮಾರ್ಗದರ್ಶನದಲ್ಲಿ ರಾಣಿ ಪ್ರತಿದಿನ ಬೆಳಿಗ್ಗೆ ಯೋಗಾಭ್ಯಾಸ ಮಾಡುತ್ತಾರೆ. ಇವರ ದಿನಚರಿಯಲ್ಲಿ ಸೂರ್ಯ ನಮಸ್ಕಾರಕ್ಕೆ ಅತಿ ದೊಡ್ಡ ಸ್ಥಾನವಿದೆ. ದೇಹದ ಫ್ಲೆಕ್ಸಿಬಿಲಿಟಿ ಮತ್ತು ಮಾನಸಿಕ ನೆಮ್ಮದಿಗಾಗಿ ಇವರು ಪ್ರತಿದಿನ ಮಿಸ್ ಮಾಡದೆ ಯೋಗ ಮಾಡುತ್ತಾರೆ.

ವರ್ಕೌಟ್ ಮತ್ತು ಕಠಿಣ ಶ್ರಮ
ರಾಣಿ ಮುಖರ್ಜಿ ತಮ್ಮ ಮನೆಯಲ್ಲೇ ಸುಸಜ್ಜಿತವಾದ ಜಿಮ್ ಹೊಂದಿದ್ದಾರೆ. ವಾರಕ್ಕೆ ಕನಿಷ್ಠ 2 ರಿಂದ 3 ದಿನ ಅವರು ಅಲ್ಲಿ ತಾಲೀಮು ನಡೆಸುತ್ತಾರೆ. ಒಂದೂವರೆ ಗಂಟೆಯಿಂದ ಹಿಡಿದು ಎರಡೂವರೆ ಗಂಟೆಯವರೆಗೆ ಇವರ ವರ್ಕೌಟ್ ನಡೆಯುತ್ತದೆ. ಇದರಲ್ಲಿ 45 ನಿಮಿಷಗಳ ಕಾಲ ಕಾರ್ಡಿಯೋ (ಓಟ, ಈಜು ಅಥವಾ ಸೈಕ್ಲಿಂಗ್) ಇರುತ್ತದೆ.
ಸಿನಿಮಾ ಪಾತ್ರಗಳಿಗೆ ಅನುಗುಣವಾಗಿ ಇವರು ತಮ್ಮ ವರ್ಕೌಟ್ ತೀವ್ರತೆಯನ್ನು ಬದಲಿಸಿಕೊಳ್ಳುತ್ತಾರೆ. ಉದಾಹರಣೆಗೆ 'ದಿಲ್ ಬೋಲೆ ಹಡಿಪ್ಪಾ' ಮತ್ತು 'ಅಯ್ಯಾ' ಸಿನಿಮಾದ ಸಮಯದಲ್ಲಿ ಇವರು ದಿನಕ್ಕೆ ಬರೊಬ್ಬರಿ 100 ಸೂರ್ಯ ನಮಸ್ಕಾರಗಳನ್ನು ಮಾಡುತ್ತಿದ್ದರಂತೆ. ಇದರ ಜೊತೆಗೆ 30 ನಿಮಿಷಗಳ ವೇಟ್ ಟ್ರೈನಿಂಗ್ ಇವರ ಸ್ಟ್ಯಾಮಿನಾ ಹೆಚ್ಚಿಸಲು ಸಹಾಯ ಮಾಡುತ್ತದೆ.
ರಾಣಿಯ ಆಹಾರ ಕ್ರಮ ಹೇಗಿದೆ?
ಬಾಲಿವುಡ್‌ನ ಈ ರಾಣಿ ಡಯಟ್ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. ಇವರು ಮೈದಾ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ನಿಂದ ದೂರವಿರುತ್ತಾರೆ. ಹೈ ಪ್ರೋಟೀನ್ ಆಹಾರ ಇವರ ಮೊದಲ ಆಯ್ಕೆ. ಇವರ ದಿನಚರಿ ಹೀಗಿರುತ್ತದೆ:
-ಬೆಳಿಗ್ಗೆ: ಎದ್ದ ತಕ್ಷಣ 60 ಎಂಎಲ್ ಅಲೋವೆರಾ ಜ್ಯೂಸ್ ಕುಡಿಯುತ್ತಾರೆ. ನಂತರ ಪಪ್ಪಾಯಿ ಮತ್ತು ಅರ್ಧ ಸೇಬನ್ನು ಸೇವಿಸುತ್ತಾರೆ.
-ಬೆಳಗಿನ ಉಪಹಾರ: ಸ್ಕಿಮ್ಡ್ ಹಾಲಿನೊಂದಿಗೆ ಓಟ್ಸ್ ಅಥವಾ ಮ್ಯೂಸ್ಲಿ ಇವರ ಫೇವರಿಟ್.
-ಮಧ್ಯಾಹ್ನದ ಊಟ: ಎರಡು ಮಲ್ಟಿಗ್ರೇನ್ ರೊಟ್ಟಿ ಮತ್ತು ಬೇಳೆ ಸಾರು (ದಾಲ್).
-ಸಂಜೆಯ ಸ್ನ್ಯಾಕ್ಸ್: ಮೊಳಕೆ ಕಾಳುಗಳು ಮತ್ತು ಮಲ್ಟಿಗ್ರೇನ್ ಬ್ರೆಡ್ ಜೊತೆಗೆ ಎರಡು ಮೊಟ್ಟೆಯ ಬಿಳಿ ಭಾಗ.
-ರಾತ್ರಿಯ ಊಟ: ಒಂದು ರೊಟ್ಟಿ, ಗ್ರಿಲ್ಡ್ ತರಕಾರಿಗಳು ಮತ್ತು 150 ಗ್ರಾಂ ತಂದೂರಿ ಫಿಶ್.
ಸೌಂದರ್ಯ ವೃದ್ಧಿಸುವ ಹೈಡ್ರೇಶನ್
ರಾಣಿ ಮುಖರ್ಜಿ ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯುತ್ತಾರೆ. ದೇಹದಲ್ಲಿ ನೀರಿನಂಶ ಹೆಚ್ಚಿದ್ದರೆ ಚರ್ಮದ ಹೊಳಪು ಹೆಚ್ಚುತ್ತದೆ ಎಂಬುದು ಇವರ ನಂಬಿಕೆ. ಅಡುಗೆಯಲ್ಲಿ ಅತಿ ಕಡಿಮೆ ಎಣ್ಣೆ ಬಳಸುತ್ತಾರೆ. ಅಚ್ಚರಿಯ ವಿಷಯವೆಂದರೆ, ಇವರು ತೆಂಗಿನ ಎಣ್ಣೆಯನ್ನು ಆಹಾರದಲ್ಲಿ ಬಳಸುವುದಲ್ಲದೆ, ಚರ್ಮದ ಕಾಂತಿಗೂ ಸಹ ಉಪಯೋಗಿಸುತ್ತಾರೆ. ಸಿಹಿತಿಂಡಿ ಅತಿಯಾಗಿ ತಿನ್ನದಿದ್ದರೂ, ಆಗೊಮ್ಮೆ ಈಗೊಮ್ಮೆ ಮಿತವಾಗಿ ಸವಿಯುತ್ತಾರೆ.


Click it and Unblock the Notifications











