ಯೆಲ್ಲೋ ಕಲರ್ ಡ್ರೆಸ್ ಹಾಕಿ ಅಣ್ಣಮ್ಮನಿಗೆ ಪೂಜೆ; ವಿಜಯಲಕ್ಷ್ಮಿ ಈ ಚೂಡಿ ಸ್ಪೆಷಾಲಿಟಿ ಏನು..?
ವಿಜಯಲಕ್ಷ್ಮಿ ದರ್ಶನ್ ಅವರು ಹೊರಗೆ ಬಂದ್ರು ಅಂದ್ರೆ, ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟರ್ ಹಾಕಿದ್ರು ಅಂದ್ರೆ ಎಲ್ಲರ ಚಿತ್ತ ಅವರ ಔಟ್ ಫಿಟ್ ಕಡೆಗೆ ಹೊರಳುತ್ತದೆ. ಯಾಕಂದ್ರೆ ವಿಜಯಲಕ್ಷ್ಮಿ ದರ್ಶನ್ ಅಷ್ಟು ವೆರೈಟಿ ಡ್ರೆಸ್‌ಗಳನ್ನು ಹಾಕುತ್ತಾರೆ. ಜೊತೆಗೆ ಬ್ರ್ಯಾಂಡ್ ಕೂಡ ಮೆಂಟೈನ್ ಮಾಡುತ್ತಾರೆ. ಇತ್ತೀಚೆಗಷ್ಟೇ ಅವರು ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ್ದರು. ಆಗ ಒಂದು ಯೆಲ್ಲೋ ಕಲರ್ ಚೂಡಿ ಹಾಕಿದ್ದರು. ಆ ಡ್ರೆಸ್ ಯಾವುದು? ಅದರ ಬೆಲೆ ಏನು..? ಡಿಟೈಲ್ಸ್‌ಗಾಗಿ ಮುಂದೆ ಓದಿ.
ವಿಜಯಲಕ್ಷ್ಮಿ ಬಗ್ಗೆ ಅಭಿಮಾನಿಗಳಿಗೆ ಮೊದಲೆಲ್ಲಾ ಇಷ್ಟೊಂದು ಕ್ರೇಜ್ ಇರಲಿಲ್ಲ. ಆದರೆ ದರ್ಶನ್ ಜೊತೆಗೆ ಕಷ್ಟದ ಸಮಯದಲ್ಲಿ ನಿಂತಾಗ ಅತ್ತಿಗೆಯ ಅತಿಯಾದ ಗೌರವ ಅಭಿಮಾನಿಗಳಿಗೆ ಹುಟ್ಟಿದೆ. ಹೀಗಾಗಿ ಅಭಿಮಾನಿಗಳ ಅತ್ತಿಗೆ ಹೋದಲ್ಲಿ, ಬಂದಲ್ಲಿ ಹೊತ್ತು ಮೆರೆಸುತ್ತಿದ್ದಾರೆ. ವಿಜಯಲಕ್ಷ್ಮಿ ಕೂಡ ದರ್ಶನ್ ಅವರಿಗೆ ಒಳ್ಳೆಯದಾಗಲಿ ಅಂತ ಇನ್ನು ದೇವಸ್ಥಾನಗಳನ್ನು ಸುತ್ತುತ್ತಲೇ ಇದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ತಾಯಿ ದರ್ಶನ ಮಾಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಹಾಕಿದ್ದ ಯೆಲ್ಲೋ ಕಲರ್ ಡ್ರೆಸ್ ಸಾಕಷ್ಟು ಗಮನ ಸೆಳೆದಿದೆ. ಈ ಯೆಲ್ಲೋ ಕಲರ್ ಡ್ರೆಸ್‌ನಲ್ಲಿ ವಿಜಯಲಕ್ಷ್ಮಿ ಇನ್ನಷ್ಟು ಬ್ರೈಟ್ ಆಗಿ ಕಾಣಿಸ್ತಾ ಇದ್ದರು.

ಯೆಲ್ಲೋ ಕಲರ್ ಚೂಡಿ ಹಾಕಿದ್ದ ವಿಜಯಲಕ್ಷ್ಮೀ ಸಿಕ್ಕಾಪಟ್ಟೆ ಬ್ರೈಟ್ ಆಗಿ ಕಾಣಿಸ್ತಾ ಇದ್ದರು. ಮಾಮೂಲಿಯಂತೆ ಹೇರ್ ಸ್ಟೈಲ್ ಮಾಡಿದ್ದರು. ವಿಜಯಲಕ್ಷ್ಮಿ ಹೆಚ್ಚು ಹೇರ್ ಸ್ಟೈಲ್ ಮಾಡೋದು ಒಂದೇ ರೀತಿ, ಕೂದಲನ್ನು ಮುಂಭಾಗದಲ್ಲಿ ಎತ್ತಿ ಪಿನ್ ಹಾಕುತ್ತಾರೆ. ಉಳಿದಂತೆ ಫ್ರೀ ಹೇರ್ ಬಿಡ್ತಾರೆ. ಇದು ಸಿಂಪಲ್ ಆದಂತ ಹೇರ್ ಸ್ಟೈಲ್ ಇದೆ. ಈ ಸ್ಟೈಲ್ ವಿಜಯಲಕ್ಷ್ಮಿ ಅವರಿಗೂ ಚೆನ್ನಾಗಿಯೇ ಕಾಣಿಸುತ್ತದೆ. ಹೀಗಾಗಿ ಈ ಸ್ಟೈಲ್ ಅನ್ನು ಹೆಚ್ಚು ಫಾಲೋ ಮಾಡ್ತಾರೆ. ಈ ಯೆಲ್ಲೋ ಕಲರ್ ಚೂಡಿ ಹಾಕಿದ್ದ ವಿಜಯಲಕ್ಷ್ಮಿ ಅದಕ್ಕೆ ಬೇಕಾದಂತ ಮೇಕಪ್ ಕೂಡ ಮಾಡಿದ್ದರು. ದೇವಸ್ಥಾನಕ್ಕೆ ಹೋಗಿದ್ದರಿಂದ ಸಿಂಪಲ್ ಆದ ಮೇಕಪ್ ಮಾಡಿದ್ದರು. ಅವರದ್ದು ಮೊದಲೇ ಗುಂಗುರು ಕೂದಲು, ಒಂದು ಕಡೆ ಬಿಸಿಲು, ಇನ್ನೊಂದು ಕಡೆ ದೇವಸ್ಥಾನದಲ್ಲಿ ಪೂಜೆ, ಹೋಮ ಹವನ ಅದರಲ್ಲಿ ಮುಳುಗಿ ಹೋಗಿದ್ದರು.
ವಿಜಯಲಕ್ಷ್ಮಿ ದರ್ಶನ್ ಏನಾದರೊಂದು ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡರೆ ಅಲ್ಲಿ ಯಾವುದೋ ಒಂದು ವಸ್ತುವಾದರೂ ಗಮನ ಸೆಳೆಯುತ್ತದೆ. ಚೂಡಿ ಹಾಕಿದಾಗ ಅವರ ದುಪ್ಪಟ್ಟ ಹಾಕುವ ಸ್ಟೈಲ್ ಗಮನ ಸೆಳೆಯದೆ ಇರಲಾರದು. ವಿಜಯಲಕ್ಷ್ಮಿ ದರ್ಶನ್ ದುಪ್ಪಟ್ಟ ಹಾಕುವ ಸ್ಟೈಲ್ ಅನ್ನು ಸುಮಾರು ಜನ ಕಾಪಿ ಮಾಡಿದ್ದಾರೆ. ಕುತ್ತಿಗೆಯಿಂದ ಮುಂಗೈ ತನಕ ಬರುವಂತೆ ದುಪ್ಪಟ್ಟ ಧರಿಸುತ್ತಾರೆ. ಈ ಡ್ರೆಸ್ ಕೂಡ ಕಸೂತಿಯ ಅಲಂಕಾರದಿಂದ ಕೂಡಿದ್ದಾಗಿದೆ. ಟಾಪ್, ಪ್ಯಾಂಟ್ ಅಂಡ್ ದುಪ್ಪಟ್ಟ ಮೂರು ಒಂದೇ ಕಲರ್ ನಿಂದ ಇದೆ. ಇದರಲ್ಲಿ ಪಿಂಕ್, ಹಸಿರು, ಬಿಳಿ ಬಣ್ಣದಿಂದ ಫ್ಲವರ್ ಡಿಸೈನ್ ಎಂಬ್ರಾಯ್ಡರಿ ಮಾಡಲಾಗಿದೆ. ಇದಕ್ಕೆ ಮ್ಯಾಚ್ ಆಗುವಂತೆ ಹಸಿರು ಹಾಗೂ ಕೆಂಪು ಬಣ್ಣದ ಬಳೆಯನ್ನು ವಿಜಯಲಕ್ಷ್ಮಿ ಹಾಕಿದ್ದಾರೆ.
ವಿಜಯಲಕ್ಷ್ಮಿ ಹಾಕಿರುವ ಈ ಚೂಡಿ ಬೆಲೆ 22,999 ರೂಪಾಯಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಆದರೆ ಇದು ಯಾವ ಬ್ರ್ಯಾಂಡ್ ಅನ್ನೋದರ ಮೇಲೆ ನಿಖರವಾದ ಬೆಲೆ ತಿಳಿಯಬಹುದು. ಬೇರೆ ಬೇರೆ ರೀತಿ ಸರ್ಚ್ ಮಾಡಿದಾಗ ಇದೇ ರೀತಿಯಾದ ಡ್ರೆಸ್ ಗಳ ಬೆಲೆ ನಮಗೆ ಕಾಣಿಸುತ್ತದೆ. ಸದ್ಯ ಇರುವ ಮಾಹಿತಿಯ ಪ್ರಕಾರ ಇದರ ಬೆಲೆಯನ್ನ ಇಲ್ಲಿ ನಮೂದಿಸಲಾಗಿದೆ.


Click it and Unblock the Notifications











