ಪ್ರಿಯಾ ಆಚಾರ್ ಮಾಡುವ ಅದೊಂದು ಫುಡ್ ಸಿದ್ದು ಮೂಲಿಮನಿಗೆ ತುಂಬಾ ಇಷ್ಟ; ಯಾವುದದು?
'ಗಟ್ಟಿಮೇಳ' ಧಾರಾವಾಹಿಯಲ್ಲಿ ಸದಾ ಕಿತ್ತಾಡುವ ತಂಗಿಯಾಗಿ, ಕಾವೇರಿ ಕನ್ನಡ ಮೀಡಿಯಂನಲ್ಲಿ ಟೀಚರ್ ಆಗಿ ಮಿಂಚಿದ್ದವರು ಪ್ರಿಯಾ ಆಚಾರ್. ಈ ಸಾಮಾನ್ಯ ಜನರಿಗೆ ಸಾಮಾನ್ಯವಾಗಿಯೇ ಒಂದು ಪ್ರಶ್ನೆ ಇರುತ್ತದೆ. ಸೆಲೆಬ್ರಿಟಿಗಳ ಲೈಫ್ ನಮ್ಮಂತೆಯೇ ಇರುತ್ತದಾ ಅಂತ. ಅಂದ್ರೆ ನಮ್ಮ ರೀತಿಯೇ ಅಡುಗೆ ಮಾಡುವುದು, ನಮ್ಮ ರೀತಿಯೇ ಮನೆ ಕೆಲಸ ಮಾಡುವುದೆಲ್ಲವನ್ನು ಮಾಡ್ತಾರಾ ಅಂತ.
ನಾವಂದುಕೊಂಡ ರೇಂಜ್‌ಗೆಲ್ಲಾ ಅವರು ಕೆಲಸಗಳನ್ನ ಮಾಡಲ್ಲ. ಗೃಹಿಣಿಯರು ಮಾಡಿದಂತೆ ಬೆಳಗ್ಗೆ ಬೇಗ ಎದ್ದು ಮನೆ ಕ್ಲೀನ್ ಮಾಡಿ, ಮನೆಯವರಿಗೆಲ್ಲಾ ಅಡುಗೆ ತಿಂಡಿ ಮಾಡಿಟ್ಟು ಶೂಟಿಂಗ್ ಹೋಗುವುದಿಲ್ಲ. ಅದಕ್ಕೆಲ್ಲ ಅವರ ಬಳಿ ಸಮಯವೂ ಇರುವುದಿಲ್ಲ. ಹಾಗಂತ ಕೆಲಸ ಮಾಡುವುದಕ್ಕೆ ಬರಲ್ಲ ಅಂತಲ್ಲ ಏನಿಲ್ಲ. ಅಪರೂಪಕ್ಕೆ ಮನಸಾದಾಗ, ಸಮಯವಾದಾಗ ಅಡುಗೆಯನ್ನ ಮಾಡುತ್ತಾರೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಪ್ರಿಯಾ ಆಚಾರ್.

ಪ್ರಿಯಾ ಆಚಾರ್ ಒಂಥರ ಮುದ್ದು ಮುದ್ದಾಗಿರುವ, ಗುಂಡು ಮುಖದ ಮುಗ್ದ ಚೆಲುವೆ. ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್ ಪ್ರೀತಿಸಿ ಮದುವೆಯಾದವರು. ಈಗ ಇಬ್ಬರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾ ಸದ್ಯ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಬೇಕಿದೆ. ಸಿದ್ದು ಸಿನಿಮಾಗಳಲ್ಲಿ ಬ್ಯುಸಿ. ಇದೆಲ್ಲದರ ನಡುವೆ ಪ್ರಿಯಾ ಆಚಾರ್ ಅದ್ಭುತವಾಗಿ ಅಡುಗೆ ಮಾಡುತ್ತಾರೆ. ಹಾಗಾದ್ರೆ ಪ್ರಿಯಾ ಏನೆಲ್ಲಾ ಅಡುಗೆ ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಪ್ರಿಯಾ ತುಂಬಾ ಅಂದ್ರೆ ತುಂಬಾ ಇಷ್ಟ ಪಟ್ಟು ಮಾಡುವಂತದ್ದು ಟೊಮೆಟೊ ಕರಿ ಅಂತೆ. ಆ ಟೊಮೆಟೊ ಕರಿ ಮಾಡೋದಕ್ಕೆ ಸಮಯ ಮಾತ್ರ ಅಲ್ಲ ಮೂಡ್ ಕೂಡ ತುಂಬಾ ಚೆನ್ನಾಗಿ ಇರಬೇಕು. ಈ ಟೊಮೆಟೊ ಕರಿ ಸಿದ್ದು ಹಾಗೂ ಅವರ ಅತ್ತೆಗೂ ಬಹಳ ಇಷ್ಟವಂತೆ.
ಪ್ರಿಯಾ ಆಚಾರ್ ಮೊದಲಿನಿಂದಲೂ ನಾನ್ ವೆಜ್ ಪ್ರಿಯೆ. ಆದರೆ ಸಿದ್ದು ಪ್ಯೂರ್ ವೆಜ್ ಆಗಿದ್ದು, ಅವರ ಫ್ಯಾಮಿಲಿಯಲ್ಲಿ ನಾನ್ ವೆಜ್ ತಿನ್ನದ ಕಾರಣ ಪ್ರಿಯಾ ಕೂಡ ಈಗ ಸಸ್ಯಹಾರಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊದಲೆಲ್ಲಾ ಅಮ್ಮ ಮಾಡುವಂತೆ ಮಟನ್ ಬಿರಿಯಾನಿ, ಗ್ರೀನ್ ಚಿಲ್ಲಿ ಚಾಪ್ಸ್ ಅನ್ನ ಚಪ್ಪರಿಸಿಕೊಂಡು ತಿನ್ನುತ್ತಾ ಇದ್ದರಂತೆ. ಈಗ ವೆಜ್ ಅನ್ನು ಅಷ್ಟೇ ಇಷ್ಟ ಪಡುತ್ತಾರೆ. ಅದರಲ್ಲೂ ಸಿದ್ದು ಅಮ್ಮ ಮಾಡುವಂತ ಕರ್ಜಿಕಾಯಿ, ತಾಳಿಪಟ್ಟು ಪ್ರಿಯಾಗೆ ತುಂಬಾ ಇಷ್ಟವಂತೆ.

ಅಮ್ಮ ಅಥವಾ ಅತ್ತೆ ಮಾಡುವ ಅಡುಗೆಯನ್ನು ಸವಿದು ಶೂಟಿಂಗ್ ಹೋಗ್ತಾರೆ ಪ್ರಿಯಾ. ಸಿಕ್ಕಾಪಟ್ಟೆ ಫುಡಿಯಾಗಿರುವ ಪ್ರಿಯಾ ಅವರನ್ನ ಸಿದ್ದು ಹೊರಗೆ ಕರೆದುಕೊಂಡು ಹೋದಾಗೆಲ್ಲಾ ಅಲ್ಲಿನ ಸ್ಪೆಷಾಲಿಟಿ ಏನು ಅಂತ ತಿಳಿದು ಕೊಡಿಸುತ್ತಾರಂತೆ. ಡಯೆಟ್ ಅಂದ್ರೆಲ್ಲಾ ಪ್ರಿಯಾಗೆ ಗೊತ್ತೆ ಇಲ್ಲ. ಡ್ಯಾನ್ಸ್ ಮಾಡಿಕೊಂಡೆ ದೇಹದ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಮಧ್ಯರಾತ್ರಿ ತಿನ್ಬೇಕು ಅನ್ನಿಸಿದರೂ ಸಿದ್ದು ಕುಕ್ ಮಾಡಿ ಕೊಡ್ತಾರಂತೆ. ಹಾಗೇ ಬರ್ತ್ ಡೇಗಳಲ್ಲೆಲ್ಲಾ ಸಿದ್ದು ಮನೆಯಲ್ಲಿಯೇ ಕೇಕ್ ಮಾಡುವ ಕಲೆಯನ್ನು ಹೊಂದಿದ್ದಾರೆ. ಟ್ರಾವೆಲ್ ಮಾಡುವ ಈ ಜೋಡಿ ಅಲ್ಲಿನ ವಿಶೇಷ ಫುಡ್ ಅನ್ನು ಸವಿದಿದ್ದಾರೆ.
ಇನ್ನು ಸಾಮಾನ್ಯವಾಗಿ ಪ್ರಿಯಾ ಆಚಾರ್ ಶೂಟಿಂಗ್ ಅಂತ ಹೊರಟರೂ ಅವರ ತಾಯಿಯೇ ಅಡುಗೆ ಮಾಡಿ ಕೊಡುವುದು. ಕ್ಯಾರಿಯರ್ ತಗೊಂಡು ಹೊರಟರೆ ಶೂಟಿಂಗ್‌ನಲ್ಲಿ ಗ್ಯಾಪ್ ಸಿಕ್ಕಾಗ ತಿನ್ನುವುದು ಮನೆಯ ಊಟವನ್ನೇ. ಸೆಲೆಬ್ರೆಟಿಗಳು ಆಲ್ಮೋಸ್ಟ್ ಆರೋಗ್ಯ ಕಾಪಾಡಿಕೊಳ್ಳಲು ಮನೆಯ ಊಟವನ್ನೇ ಕ್ಯಾರಿ ಮಾಡ್ತಾರೆ. ಹೀಗಾಗಿ ಆರೋಗ್ಯವೂ ಚೆನ್ನಾಗಿರುತ್ತೆ, ಸೌಂದರ್ಯವೂ ಉಳಿದುಕೊಳ್ಳುತ್ತದೆ.


Click it and Unblock the Notifications











