ಅಣ್ಣಾವ್ರ ಹೆಸರಿನಲ್ಲಿ ನವರಸ ನಾಯಕ ಜಗ್ಗೇಶ್ ಚಿತ್ರ

By Rajendra

ನವರಸ ನಾಯಕ ಜಗ್ಗೇಶ್ ಅವರು ಮತ್ತೊಂದು ರೀಮೇಕ್ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ಅವರು ನಿರ್ಮಾಪಕ ಎ ಗಣೇಶ್ ಅವರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮಲಯಾಳಂನ ಹಿಟ್ ಚಿತ್ರ 'ಹಲೋ' ಚಿತ್ರವನ್ನು ಕನ್ನಡಕ್ಕೆ ತರಲಿದ್ದಾರೆ ಗಣೇಶ್.

ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯಪಾತ್ರವನ್ನು ಪೋಷಿಸಿದ್ದರು. ಅಂದಹಾಗೆ ಈ ಚಿತ್ರಕ್ಕೆ ಕನ್ನಡದಲ್ಲಿ 'ಮುತ್ತುರಾಜ' ಎಂದು ಹೆಸರಿಡಲಾಗಿದೆ. ಮುತ್ತುರಾಜ್ ಎಂದರೆ ವರನಟ ಡಾ.ರಾಜ್ ಕುಮಾರ್ ಅವರ ಮೂಲ ಹೆಸರು ಎಂಬುದು ಇಡೀ ಕನ್ನಡ ಕುಲಕೋಟಿಗೆ ಗೊತ್ತಿರುವ ಸಂಗತಿ.

ಮಲಯಾಳಂನ 'ಹಲೋ' ಚಿತ್ರ ತಾಂತ್ರಿಕವಾಗಿ ಅದ್ಭುತವಾಗಿತ್ತು. ಚಿತ್ರಕತೆ ಕೂಡ ಅಷ್ಟೇ ಸೊಗಸಾಗಿ ಮೂಡಿಬಂದಿತ್ತು. 'ಹಲೋ' ಚಿತ್ರಕ್ಕೆ ರಫಿ ಹಾಗೂ ಮೆಕಾರ್ಟಿನ್ ಆಕ್ಷನ್ ಕಟ್ ಹೇಳಿದ್ದರು. ಕನ್ನಡದಲ್ಲಿ ನಿರ್ದೇಶನದ ಜವಾಬ್ದಾರಿಯನ್ನು ಯಾರ ಹೆಗಲಿಗೆ ಹೊರಿಸಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಪ್ರಸಾದ್ ಬಾಬು ಅವರಿಗೆ ನೀಡಲಾಗಿದೆ. ಸುದೀರ್ಘ ಸಮಯದ ಬಳಿಕ ಪ್ರಸಾದ್ ಅವರು ಮರಳಿ ಕ್ಯಾಮೆರಾ ಹಿಡಿಯಲಿರುವ ಚಿತ್ರ ಇದಾಗಲಿದೆ. ಡಿಸೆಂಬರ್‌ನಲ್ಲಿ ಚಿತ್ರ ಸೆಟ್ಟೇರಲಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Jaggesh is now signed for another remake movie. Malayalam hit Hello featuring Mohan Lal is remade in Kannada. The film has been titled Muththuraja, producing by A Ganesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X