ಹರಿಪ್ರಿಯಾಗೆ ಮೊಬೈಲ್ ಎತ್ತಲೂ ವೇಳೆಯಿಲ್ಲ

ಸುದ್ದಿ ಮೂಲಗಳ ಪ್ರಕಾರ, ಮಲಯಾಳಂನ ಸೂಪರ್ ಹಿಟ್ ಚಿತ್ರವೊಂದರ ಎರಡನೇ ಭಾಗದ ಪ್ರಮುಖ ಪಾತ್ರಕ್ಕೂ ಹರಿಪ್ರಿಯಾರನ್ನು ಸಂಪರ್ಕಿಸಲಾಗಿದೆ. ಈ ಸಂಬಂಧ ಮಾತುಕತೆಗಳಷ್ಟೇ ನಡೆಯುತ್ತಿವೆ, ಇನ್ನೂ ಅಂತಿಮಗೊಂಡಿಲ್ಲ. ಸ್ವಲ್ಪ ಹಿಂದಷ್ಟೇ ಕನ್ನಡ ಚಿತ್ರರಂಗಕ್ಕೆ ಬೇಡವಾಗಿದ್ದ ಹರಿಪ್ರಿಯಾ, ಪರಭಾಷೆಗಳಲ್ಲಿ ಕೈ ತುಂಬಾ ಅವಕಾಶ ಸಿಕ್ಕಿದರೂ ಕನ್ನಡವನ್ನು ಮರೆತಿಲ್ಲ.
ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಸಾಗರ್, ಸೂಪರ್ ಶಾಸ್ತ್ರಿ, ಶ್ರೀನಗರ ಕಿಟ್ಟಿ ನಾಯಕರಾಗಿರುವ ಕಿಲಾಡಿ ಕಿಟ್ಟಿ, ನಂದೇ ಮುಂತಾದ ಹರಿಪ್ರಿಯಾ ಕನ್ನಡದ ಚಿತ್ರಗಳು ಬಿಡುಗಡೆಯಾಗಬೇಕಿವೆ. "ಕಳೆದ ವರ್ಷ ತಮಿಳು, ತೆಲುಗು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಕನ್ನಡಕ್ಕೆ ಹೆಚ್ಚು ಮಹತ್ವ ಕೊಡಲು ನಿರ್ಧರಿಸಿದ್ದೇನೆ. ನೆರೆಭಾಷೆಯಲ್ಲಿ ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುವ ಉದ್ದೇಶ ನನ್ನದು. ಎಲ್ಲಾ ಚಿತ್ರರಂಗಳಲ್ಲಿ ಕೆಲಸ ಮಾಡುವುದು ನನಗೆ ಖುಷಿ" ಎನ್ನುತ್ತಾರೆ ಹರಿಪ್ರಿಯಾ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Actress Haripriya is Shining in Five Languages now. Her Malayalam movie Thiruvambadi Tamban is to release on 14 April 2012.


Click it and Unblock the Notifications











