ತಾರೆ ಹರಿಪ್ರಿಯಾ ದೇವರ ಚಿತ್ರಗಳು... ಸ್ವಾಮಿ ಶರಣಂ
ಈ ಚಿತ್ರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ...ಈಕೆ ಕನ್ನಡದ ನಟಿ ಹರಿಪ್ರಿಯಾನಾ ಅಥವಾ 'ಡರ್ಟಿ' ಗರ್ಲ್ ವಿದ್ಯಾಬಾಲನ್ ಅವರೇ ಎಂಬ ಡೌಟು ಆಪಾದಮಸ್ತಕವಾಗಿ ಕಾಡುತ್ತದೆ. ಆದರೆ ಈಕೆ ಬೇರಾರು ಅಲ್ಲ ಅಪ್ಪಟ ಹದಿನಾರಣೆ ಕನ್ನಡದ ಹುಡುಗಿ ಹರಿಪ್ರಿಯಾ!
ತಮಿಳಿನ 'ಸ್ವಾಮಿ ಮಣಿಕಂಠ' ಚಿತ್ರದಲ್ಲಿ ಹರಿಪ್ರಿಯಾ ತೊಟ್ಟಿರುವ ಬಟ್ಟೆಗಳು, ಆಕೆಯ ಭಾವ ಭಂಗಿಗಳನ್ನು ನೋಡಿದರೆ ಕ್ಷಣಕಾಲ ಸಮಯ ಅಲ್ಲೇ ಸ್ತಬ್ಧವಾದಂತೆ ಭಾಸವಾಗುತ್ತದೆ. ಹರಿಪ್ರಿಯಾ ಅವರೇನಾದರೂ ಐಟಂ ಬೆಡಗಿಯಾದರೆ ಎಂಬ ಅನುಮಾನ ಬರುತ್ತದೆ.
ಅಯ್ಯೋ ಎಲ್ಲಾದರೂ ಉಂಟೇ? 'ಸ್ವಾಮಿ ಮಣಿಕಂಠ' ಚಿತ್ರ ಹೇಳಿಕೇಳಿ ಭಕ್ತಿ ಪ್ರಧಾನ ಚಿತ್ರ. ಅದರಲ್ಲಿ ಮೋಹಿನಿಯನ್ನು ವರ್ಣಿಸುವ ಹಾಡು ಬರುತ್ತದೆ. ಒಂದೂವರೆ ವರ್ಷದ ಹಿಂದೆ ಶೂಟಿಂಗ್ ನಡೆದಿದೆ. ಅದೊಂದು ದೇವರ ಹಾಡು ಅಷ್ಟೇ ಎಂದಿದ್ದಾರೆ ಹರಿಪ್ರಿಯಾ. ಕಟ್ ಕಟ್ ಕಟ್...
ಏತನ್ಮಧ್ಯೆ ಹರಿಪ್ರಿಯಾ ಅವರಿಗೆ ಮಲಯಾಳಂನಲ್ಲಿ ಮತ್ತೊಂದು ಆಫರ್ ಸಿಕ್ಕಿದೆ. ತಮಿಳಿನ ಮೂರನ್ ಚಿತ್ರದಲ್ಲಿನ ಹರಿಪ್ರಿಯಾ ನಟನೆ ನೋಡಿ ಮಲಯಾಳಂ ನಿರ್ದೇಶಕ ಪದ್ಮಾ ಕುಮಾರ್ ಚಾನ್ಸ್ ಕೊಟ್ಟಿದ್ದಾರಂತೆ. ಚಿತ್ರದ ನಾಯಕ ನಟ ಜಯರಾಂ. ಈ ಚಿತ್ರಕ್ಕೆ 'ತಿರುವಂ ಬಾಡಿ ತಮವಂ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೂಟಿಂಗ್ ಮುಗಿದ ಬಳಿಕ 'ಸೂಪರ್ ಶಾಸ್ತ್ರಿ' ಚಿತ್ರೀಕರಣದಲ್ಲಿ ಹರಿಪ್ರಿಯಾ ತೊಡಗಿಕೊಳ್ಳಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











