ಚತುರ್ಭಾಷಾ ತಾರೆಯಾದ ಕನ್ನಡ ನಟಿ ಹರಿಪ್ರಿಯಾ

ಇದೀಗ ಹೆಚ್ಚು ಹೆಚ್ಚು ಕನ್ನಡದ ನಟ, ನಟಿಯರು ಚತುರ್ಭಾಷಾ ತಾರೆಯಾಗುತ್ತಿದ್ದಾರೆ. ಈಗ ಕನ್ನಡ ನಟಿ ಹರಿಪ್ರಿಯಾ ಹಾಗೂ ನಟ ಕಿಶೋರ್ ಸರದಿ. 'ತಿರುವಂಬಾಡಿ ತಂಬನ್' ಚಿತ್ರದ ಮೂಲಕ ಈ ಇಬ್ಬರು ಕನ್ನಡಿಗರು ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹರಿಪ್ರಿಯಾ ಈಗಾಗಲೇ 'ಸ್ವಾಮಿ ಮಣಿಕಂಠ' ಚಿತ್ರದಲ್ಲಿ ಎಂಟ್ರಿ ಪಡೆದಿದ್ದರೂ ಅದಿನ್ನೂ ಬಿಡುಗಡೆಯಾಗಿಲ್ಲ.

ನಟ ಕಿಶೋರ್ ಮಲೆಯಾಳಂ ಚಿತ್ರದಲ್ಲಿ ನಾಯಕ ಅಲ್ಲದಿದ್ದರೂ ಮುಖ್ಯ ವಿಲನ್ ರೋಲ್ ನಲ್ಲಿ ಮಿಂಚಲಿದ್ದಾರೆ. ಪಕ್ಕಾ ವಿಲನ್ ರೋಲ್ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದರಲ್ಲೂ ಸಾಕಷ್ಟು ವಿಶೇಷತೆ ಇದೆಯಂತೆ. ಒಟ್ಟಿನಲ್ಲಿ ಕನ್ನಡದಲ್ಲಿ ಸ್ವಲ್ಪ ದಿನದ ಹಿಂದಷ್ಟೇ ರಮ್ಯಾ ಬಾರ್ನೆ ಚತುರ್ಭಾಷಾ ತಾರೆಯಾಗಿದ್ದರು, ಈಗ ಹರಿಪ್ರಿಯಾ.

ಹರಿಪ್ರಿಯಾಗೆ ಈಗ ಕನ್ನಡದಲ್ಲಿ ಕೂಡ ಬಹಳಷ್ಟು ಬೇಡಿಕೆ ಇದೆ. ಪಾತ್ರಗಳನ್ನು ಅಳೆದು ತೂಗಿ ಆಯ್ಕೆಮಾಡಿಕೊಳ್ಳುತ್ತಿರುವ ಹರಿಪ್ರಿಯಾಗೆ ಮೊದಲಿನಂತೆ ಸಿಕ್ಕ ಸಿಕ್ಕ ಪಾತ್ರಗಳನ್ನು ಮಾಡುವ ಅನಿವಾರ್ಯತೆ ಇಲ್ಲ. ಈಗ ಹರಿಪ್ರಿಯಾಗೆ ಇಲ್ಲಲ್ಲದಿದ್ದರೆ ಅಲ್ಲಿ, ಅಲ್ಲಲ್ಲದಿದ್ದರೆ ಇಲ್ಲಿ ಅವಕಾಶಗಳ ಬಾಗಿಲು ತೆರೆದೇ ಇದೆ. ಕನ್ನಡದ ನಟಿ ಎತ್ತರೆತ್ತರಕ್ಕೆ ಏರುತ್ತಿರುವುದು ಖುಷಿಯ ಸಂಗತಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Haripriya and actor Kishore debut in in Malayalam movie 'Thiruvambadi Tamban'. Like this, they are acting in four languages. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X