Dileep Case Verdict: ಮಲಯಾಳಂ ನಟ ದಿಲೀಪ್ ಪ್ರಕರಣ: ಇಂದು ಮಧ್ಯಾಹ್ನ ತೀರ್ಪು!

2017ರಲ್ಲಿ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ, ಕೊಲೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದಾರೆ ಮಲಯಾಳಂ ನಟ ದಿಲೀಪ್. ಈ ಪ್ರಕರಣದ ತೀರ್ಪು ಇಂದು ಹೊರಡಿಸಲಿದೆ ಕೇರಳ ಹೈ ಕೋರ್ಟ್.

ಇಂದು (ಏಪ್ರಿಲ್ 19) ಮಂಗಳವಾರ ದಿಲೀಪ್ ಪ್ರಕರಣದ ತೀರ್ಪು ಹೊರ ಬೀಳಲಿದೆ. ಏಕ ಸದಸ್ಯ ಪೀಠದ ನ್ಯಾಯ ಮೂರ್ತಿಗಳಾದ ಜಿಯಾದ್ ರೆಹಮಾನ್ ಮಧ್ಯಾಹ್ನ 1.45 ತೀರ್ಪು ಪ್ರಕಟಿಸಲಿದ್ದಾರೆ.

2017ರಲ್ಲಿ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳ ಮಾಡುತ್ತಿದ್ದರು. ಇವರ ಕೊಲೆಗೂ ಸಂಚು ರೂಪಿಸಿದ್ದರು ಎಂಬುವ ಆರೋಪ ಈ ಪ್ರಕರಣದ ತನಿಖೆ ವೇಳೆ ಮಾಡಲಾಗಿದೆ. ಹೀಗಾಗಿ ಮಲಯಾಳಂ ನಟ ದಿಲೀಪ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಈ ಹಿಂದೆ ಕೇರಳ ಹೈಕೋರ್ಟ್ ಪ್ರಕಟಿಸಿತು.

2017 Actress Assault Case: Kerala HC To Pronounce Verdict On Dileeps Plea Today

ಸೋಮವಾರ (ಫೆಬ್ರವರಿ 7) ಕೇರಳ ಹೈಕೋರ್ಟ್, ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಆರೋಪಿಗಳಾದ ದಿಲೀಪ್ ಮತ್ತು ಇತರರಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಆಗಿತ್ತು. ಎರಡು ವಾರಗಳ ವಿಸ್ತೃತ ವಿಚಾರಣೆಯ ನಂತರ ನ್ಯಾಯಮೂರ್ತಿ ಗೋಪಿನಾಥ್ ಪಿ ನೇತೃತ್ವದ ಪೀಠ ತೀರ್ಪು ಪ್ರಕಟಿಸಿತ್ತು.

ನಟ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ, ಜನವರಿಯಲ್ಲಿ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಮತ್ತೆ ನಟ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

2017 Actress Assault Case: Kerala HC To Pronounce Verdict On Dileeps Plea Today

ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳನ್ನು ಕೊಲ್ಲಲು ಐವರೊಂದಿಗೆ ಸೇರಿಕೊಂಡು ದಿಲೀಪ್ ಸಂಚು ರೂಪಿಸಿದ್ದರು ಎಂದು ಕೇರಳ ಪೊಲೀಸರು ಆರೋಪಿಸಿದ್ದಾರೆ. "ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಭೀರ ಅಪರಾಧದ ಆರೋಪಿಯೊಬ್ಬ ತನಿಖಾಧಿಕಾರಿಗಳ ಜೀವಕ್ಕೆ ಹಾನಿ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಾನೆ. ದಿಲೀಪ್ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಹಾಗಾಗಿ ಆರೋಪದ ಸತ್ಯಾಸತ್ಯತೆ ಹೊರಬರಲು ಆತನ ಕಸ್ಟಡಿಗೆ ಪಡೆದು ವಿಚಾರಣೆ ಮಾಡುವುದು ಅಗತ್ಯ." ಎಂದು ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.

More from Filmibeat

English summary
2017 Actress Assault Case: Kerala HC To Pronounce Verdict On Dileep's Plea Today, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X