ಶ್ವೇತಾ ಮೆನನ್ ಕಾಮಪ್ರಚೋದಕ ರತಿನಿವೇದನೆ

By Rajendra

ಮಲಯಾಳಂ ಚಿತ್ರರಂಗದಲ್ಲಿ ಈಗ ಹೊಸ ನೀರು ಹರಿಯಲು ಶುರುವಾಗಿದೆ. ಇಷ್ಟು ದಿನ ಖಾಲಿ ಹೊಡೆಯುತ್ತಿದ್ದ ಶಕೀಲಾ ಸ್ಥಾನಕ್ಕೆ ಮತ್ತೊಬ್ಬ ಸೆಕ್ಸಿತಾರೆಯ ಆಗಮವಾಗಿದೆ. ದಕ್ಷಿಣದಲ್ಲಿ ಸಿಲ್ಕ್ ಸ್ಮಿತಾ ಬಿಟ್ಟರೆ ಶಕೀಲಾ ಎಂಬ ಕಾಲವೊಂದಿತ್ತು. ಈಗ ಎಲ್ಲರೂ ಸಿಲ್ಕ್ ಸ್ಮಿತಾ, ಶಕೀಲಾ ಆಗಲು ಹೊರಟಿದ್ದಾರೆ. ಆದರೆ ತಮ್ಮದೇ ಆದಂತಹ ಮೈಮಾಟದಿಂದ ಪಡ್ಡೆಗಳು ಚಿತ್ರಮಂದಿರದ ಸೀಟುಗಳನ್ನು ಬಿಗಿದಪ್ಪಿಕೊಳ್ಳುವಂತೆ ಮಾಡಿದ್ದಾರೆ ಶ್ವೇತಾ ಮೆನನ್.

ಈಕೆ ಮಲಯಾಳಂನಲ್ಲಿ 'ರತಿ' ಎಂಬ ವಯಸ್ಕರ ಚಿತ್ರ ಮಾಡಿದ್ದೇ ತಡ ರಾತ್ರಿ ಬೆಳಗಾಗೋದರಲ್ಲಿ ಪಡ್ಡೆ ಹೈಕಳ ಗೋಡೆ, ಹಾಸಿಗೆ, ತಲೆದಿಂಬು ಎಲ್ಲವೂ ಈಕೆಯೇ ಆಗಿಹೋದಳು. ಇತ್ತೀಚೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡ 'ರತಿನಿವೇದಂ' ಎಂಬ ಚಿತ್ರದಲ್ಲಿ ಶ್ವೇತಾ ಅಂಗಸೌಷ್ಟವ ಕಂಡು ತಮಿಳು, ತೆಲುಗು ಚಿತ್ರರಂಗ ನಿಬ್ಬೆರಗಾಗಿದೆ.

ಈಗಾಗಲೆ ತಮಿಳಿನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಶೀಘ್ರದಲ್ಲೆ ತೆಲುಗು ತೆರೆಗಳನ್ನು ಅಲಂಕರಿಸಲಿದೆ. ಕಾಲೇಜು ವಿದ್ಯಾರ್ಥಿಯೊಬ್ಬನ ಪಕ್ಕದ ಮನೆ ಹುಡುಗಿಯೊಂದಿಗಿನ ಕಾಮ ತೆವಲುಗಳೇ ಚಿತ್ರದ ಕಥಾಹಂದರ. ಈ ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅದ್ಭುತವಾಗಿದೆಯಂತೆ. ಅಂದಹಾಗೆ ಶ್ವೇತಾ ಮೆನನ್ ಕನ್ನಡದ 'ಓಂಕಾರ' ಚಿತ್ರದಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ್ದಾರೆ. ಆದರೆ ಇಷ್ಟೆಲ್ಲಾ ಸರಕು ತೋರಿಸುವ ಅವಕಾಶ ಸಿಕ್ಕಿರಲಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
After making waves in the erotic role of Rathi in the Malayalam movie Rathinirvedam, a remake of the legendary 1978 film of the same name, model-turned-actress Shweta Menon is all set to entertain the audience with her sensual portrayal in Telugu and Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X