ಕೇರಳದಲ್ಲಿ ಮದುವೆ ಮಾಡಿಕೊಂಡ ನಟಿ ಹರಿಪ್ರಿಯಾ
ಕನ್ನಡ ಮೂಲದ, ಆದರೆ ನೆರೆಭಾಷೆ ಚಿತ್ರಗಳಲ್ಲೇ ಹೆಚ್ಚಾಗಿ ಮಿಂಚುತ್ತಿರುವ ನಟಿ ಹರಿಪ್ರಿಯಾಗೆ ಮತ್ತೆ ಮದುವೆಯಾಗಿದೆ. ಅದೂ ರಿಜಿಸ್ಟರ್ ಮ್ಯಾರೇಜ್. ಈ ಮೊದಲೂ ಸಾಕಷ್ಟು ಬಾರಿ ಅವರಿಗೆ ಮದುವೆಯಾಗಿತ್ತು. ಆಶ್ಚರ್ಯ ಬೇಡ. ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ. ಕೇರಳದಲ್ಲಿ ಶೂಟಿಂಗ್ ಸೆಟ್ ನಲ್ಲಿ ನಡೆದ ಮದುವೆ.
ಈ ಹಿಂದೆ ಹಲವು ಸಿನಿಮಾಗಳಲ್ಲಿ ಮದುವೆ ಮಾಡಿಕೊಂಡಿದ್ದ ಹರಿಪ್ರಿಯಾ ಮಲಯಾಳಂ ಸಿನಿಮಾದ ಮದುವೆ ದೃಶ್ಯದಲ್ಲಿ ಭಾಗಿಯಾಗಿದ್ದಾರೆ. ಮದುವೆ ಮಾಡಿಕೊಂಡಿರುವ ಸಿನಿಮಾ 'ತಿರುವಾಂಬಡಿ ತಂಪನ್'. ಇದರಲ್ಲಿ ಜಯರಾಮ್ ನಾಯಕ. ಎಂ. ಪದ್ಮಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
'ಬದಿ' ಹೆಸರಿನ ತುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹರಿಪ್ರಿಯಾ, ಈಗ ಚತುರ್ಭಾಷಾ ತಾರೆ. ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಮಲೆಯಾಳಂ ಚಿತ್ರಗಳಿಗೂ ಜಿಗಿದ ಹರಿಪ್ರಿಯಾ ಈಗ ಕನ್ನಡದಲ್ಲೂ ಸಿಕ್ಕಾಪಟ್ಟೆ ಬ್ಯುಸಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Haripriya's Registered Marriage happened in Malayalam Movie Thiruvambadi Thampan.


Click it and Unblock the Notifications











