3 ಮದುವೆ, 3 ವಿಚ್ಛೇದನ ; ಮುಚ್ಚಿಡಲು ಏನೂ ಇಲ್ಲ, ತಪ್ಪಾಗಿದೆ - ಖ್ಯಾತ ನಟಿಯ ಅಂತರಾಳ

ಪ್ರೀತಿ ಎಂಬ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಅಷ್ಟೇ ಬೇಗ ಉಸಿರನ್ನು ಚೆಲ್ಲುತ್ತದೆ.

ಇನ್ನೂ ಬದಲಾದ ಈ ಕಾಲದಲ್ಲಿ ಹಲವರಲ್ಲಿ ಮದುವೆಯಾದ ನಂತರ ಪ್ರೀತಿ ಕಡಿಮೆಯಾಗುತ್ತೆ. ಸಂಬಂಧ ವಿಚ್ಚೇದನದಲ್ಲಿ ಅಂತ್ಯವಾಗುತ್ತೆ. ಆದರೆ, ಮದುವೆಯ ಅನುಬಂಧ ದಶಕಗಳ ಕಾಲ ಮುಂದುವರೆದಾಗ ಸಂಭ್ರಮ ಪಡುವ ನಮ್ಮ ಸಮಾಜ, ಅದೇ ಸಂಬಂಧ ನೆಮ್ಮದಿ ನೀಡದಿದ್ದಾಗ ಅದರಿಂದ ಹೊರಬರುವ ಧೈರ್ಯ ತೋರುವವರನ್ನು ಅಷ್ಟೇ ಕೀಳಾಗಿ ನೋಡುತ್ತೆ.

3 Divorces Zero Secrets Meera Vasudevan s Fearless Response to the Mistakes of Her Past

ಒಬ್ಬ ವ್ಯಕ್ತಿ ತನ್ನ ಪ್ರೇಮ ಸಂಬಂಧದಲ್ಲಿ ಅಥವಾ ಮದುವೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸೋತಾಗ, ಜಗತ್ತು ಅವರನ್ನು ನೋಡುವ ದೃಷ್ಟಿಯೇ ಬದಲಾಗಿಬಿಡುತ್ತದೆ.

ಹೀಗಾಗಿ ಅನೇಕರು ತಮ್ಮ ನೋವನ್ನು ಮುಚ್ಚಿಟ್ಟು ಬದುಕುವ ಪ್ರಯತ್ನ ಮಾಡುತ್ತಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ. ಸಂಬಂಧದಲ್ಲಿ ಎಡವಿದೆ ಎನ್ನುವುದನ್ನು ಕೂಡ ಒಪ್ಪಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಕಾಲೆಳೆಯಲು ಬಂದವರ ಬಾಯಿಯನ್ನು ಕೂಡ ಮುಚ್ಚಿಸುತ್ತಾರೆ. ಉದಾಹರಣೆಗೆ ಮೀರಾ ವಾಸುದೇವನ್.

ಹೌದು, ಮೀರಾ ವಾಸುದೇವನ್.. ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ ಮೂಲದ ತಮಿಳು ಚೆಲುವೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ.. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಇಂಥಾ ಮೀರಾ ವಾಸುದೇವನ್ ಅವರಿಗೆ ಸಂಸಾರದ ಸುಖ ಸಿಕ್ಕಿಲ್ಲ. ಮೂರು ಮದುವೆಯಾದರು ಕೂಡ ಯಾರೊಬ್ಬರ ಜೊತೆಯೂ ಹೆಚ್ಚಿನ ದಿನ ಬದುಕಲು ಸಾಧ್ಯವಾಗಿಲ್ಲ. ಇನ್ನೂ ಆಗಲೇ ಹೇಳಿದಂತೆ ಸಂಬಂಧಗಳಲ್ಲಿ ನಿರಂತರವಾಗಿ ಎಡವಿದರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಈ ಕಾರಣಕ್ಕೆ ನಾಲ್ಕು ಜನ ನಾಲ್ಕು ರೀತಿ ಮಾತನಾಡುವ ಮೊದಲು ಮೀರಾ ವಾಸುದೇವನ್ ಸದ್ಯ ತಮ್ಮ ವ್ಯೆಯಕ್ತಿಕ ಬದುಕಿನ ಬಗ್ಗೆ ತಾವೇ ಮಾತನಾಡಿದ್ದಾರೆ. ಸಂಬಂಧಗಳಲ್ಲಿ ಎಡವಿರುವುದಾಗಿ ಒಪ್ಪಿಕೊಂಡಿದ್ದಾರೆ.

3 Divorces Zero Secrets Meera Vasudevan s Fearless Response to the Mistakes of Her Past3 Divorces Zero Secrets Meera Vasudevan s Fearless Response to the Mistakes of Her Past

ಈ ಕುರಿತು ''ಮೂವಿ ವರ್ಲ್ಡ್ ಮೀಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೀರಾ ವಾಸುದೇವನ್, ನಾನು ಡಿವೋರ್ಸ್ ಪಡೆದಿರುವ ವಿಚಾರ ಹೇಳಿಕೊಂಡಿದ್ದೇ ನನ್ನ ಕುರಿತು ಯಾವುದೇ ಸುಳ್ಳು ಸುದ್ದಿಗಳು ಹರಡಬಾರದು ತಪ್ಪು ತಿಳುವಳಿಕೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಎಂದು ಹೇಳಿದ್ದಾರೆ.

ನನ್ನ ಕುರಿತು ಹಲವರು ಕೀಳಾಗಿ ಮಾತನಾಡಬಹುದು, ತಮ್ಮ ವ್ಯೂವ್ಸ್‌ಗಾಗಿ ನನ್ನ ಕುರಿತು ವಿಡಿಯೋಗಳನ್ನು ಮಾಡಬಹುದು ಆದರೆ ನನ್ನ ಮೇಲೆ ಅದರಿಂದ ಯಾವ ಪರಿಣಾಮವೂ ಆಗಲ್ಲ ಎಂದು ಹೇಳಿರುವ ಮೀರಾ ವಾಸುದೇವನ್, ನನ್ನಿಂದಲೂ ಕೂಡ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ. ಮುಚ್ಚಿಡಲು ಈಗ ನನ್ನ ಬಳಿ ಏನೂ ಇಲ್ಲ ಎಂದಿದ್ದಾರೆ. ನನ್ನ ಸತ್ಯ ಏನೆಂದು ನನಗೆ ಗೊತ್ತು, ಅದು ಬೇರೆಯವರ ತೀರ್ಪಿನ ಮೇಲೆ ಅವಲಂಬಿತವಾಗಿಲ್ಲ ಎಂಬುದು ಮೀರಾ ಅವರ ನಿಲುವು.

ಸದ್ಯ ನಾನು ನನ್ನ ವೃತ್ತಿಜೀವನದತ್ತ ಗಮನ ವಹಿಸಿದ್ದೇನೆ ಎಂದು ಹೇಳಿರುವ ಮೀರಾ ನನ್ನ ಬದುಕಿನ ಅತ್ಯಂತ ಸುಂದರ ಹಂತದಲ್ಲಿ ನಾನು ಇದ್ದೇನೆ ಎಂದು ಹೇಳಿದ್ದಾರೆ. ಅನುಭವಗಳಿಂದಲೇ ಜೀವನದಲ್ಲಿ ಸ್ಪಷ್ಟತೆ ಸಿಗುವುದು. ನಮ್ಮ ಜಾಗದಲ್ಲಿ ನಾವು ಆರಾಮಾಗಿ ಇಲ್ಲದಿದ್ದರೆ, ನಾವು ಬೇರೆಯವರಿಂದ ಮಾನ್ಯತೆ ಕೇಳಬೇಕಾಗುತ್ತದೆ. ಆಗ ಬೇರೆಯವರು ಹೇಳಿದ್ದೇ ನಮ್ಮ ಸತ್ಯವಾಗಿಬಿಡುತ್ತದೆ ಎಂದು ಹೇಳಿರುವ ಮೀರಾ ಇದರರ್ಥ ನಾವು ಯಾರಿಗೂ ನೋವುಂಟು ಮಾಡಬಾರದು, ಆದರೆ ನಮ್ಮ ಅನುಭವಗಳಿಂದ ನಾವು ಕಲಿಯಬೇಕು ಮತ್ತು ಬೆಳೆಯಬೇಕು ಎಂದು ಹೇಳಿದ್ದಾರೆ.

ಅಂದ್ಹಾಗೇ 21 ವರ್ಷದ ಹಿಂದೆ ವಿಶಾಲ್ ಅಗರ್‌ ವಾಲ್ ಅವರನ್ನ ಮೀರಾ ಮದುವೆಯಾಗಿದ್ದರು. ಆದರೆ ಆ ಸಂಬಂಧ ಐದೇ ವರ್ಷಕ್ಕೆ ಉಸಿರು ಚೆಲ್ಲಿತು. ವಿಶಾಲ್ ಅಗರ್‌ ವಾಲ್ ಅವರಿಂದ ದೂರವಾದ ನಂತರ ಮೀರಾ ಮಲಯಾಳಂನ ಜನಪ್ರಿಯ ನಟ ಜಾನ್ ಕೊಕ್ಕೆನ್ ಜೊತೆ ಕಾಣಿಸಿಕೊಂಡರು.

ಆ ನಂತರ ಜಾನ್ ಜೊತೆ ಮದುವೆಯಾಗಿ ಒಂದು ಮಗುವಿಗೆ ತಾಯಿಯೂ ಆದರು. ಆದರೂ ಅದ್ಯಾಕೋ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. 2016ರಲ್ಲಿ ಮೀರಾ ವಾಸುದೇವನ್, ಜಾನ್ ಕೊಕ್ಕೆನ್ ಅವರಿಂದ ವಿಚ್ಛೇದನ ಪಡೆದು ದೂರವಾದರು.

ಜಾನ್ ಅವರಿಂದ ದೂರವಾದ ಮೀರಾ 2024ರಲ್ಲಿ ತಮ್ಮ 42ನೇ ವರ್ಷದಲ್ಲಿ ತಮಗಿಂತ ಆರು ವರ್ಷ ಚಿಕ್ಕವರಾದ, ಮಲಯಾಳಂ ಚಿತ್ರರಂಗದಲ್ಲಿಯೇ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ವಿಪಿನ್ ಜೊತೆ ಸಪ್ತಪದಿ ತುಳಿದಿದ್ದರು.ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದರು. ಆದರೆ ಈ ಜನುಮ ಜನುಮದ ಅನುಬಂಧ ಕೇವಲ ಒಂದು ವರ್ಷಕ್ಕೆ ಕಳಚಿ ಬಿತ್ತು.

More from Filmibeat

English summary
Actor Meera Vasudevan breaks her silence on life after her third divorce. In a candid interview, she discusses her past marriages, owning her mistakes, and finding strength. Get the full story on her unapologetic stance and what’s next for the star.
Read more about: divorce mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X