For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಮೆಗಾ ಸ್ಟಾರ್ ಮಮ್ಮೂಟಿ 'ಶಿಕಾರಿ'

  |

  ಮಲಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿ ಕನ್ನಡದಲ್ಲಿ 'ಶಿಕಾರಿ'ಯಾಡಿದ್ದಾರೆ. ಈ ಚಿತ್ರ ಮಲಯಾಳಂನಲ್ಲೂ 'ಶಿಕಾರ್' ಎಂಬ ಹೆಸರಿನಲ್ಲಿ ತಯಾರಾಗಿದೆ. ಮಲಯಾಳಂ ನಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಮಮ್ಮೂಟಿ ಈ ಚಿತ್ರ ಅಲ್ಲಿ ಸೂಪರ್ ಹಿಟ್ಟಾಗುವುದಂತೂ ಖಚಿತವಾಗಿದೆ. ಆದರೆ ಕನ್ನಡದ ಕಥೆ ಏನಾಗಬಹುದು? ಉತ್ತರ ಬಿಡುಗಡೆಯ ನಂತರ ಸಿಗಬೇಕಷ್ಟೇ.

  ಪರಭಾಷೆಯ ಸೂಪರ್ ಸ್ಟಾರ್ ಗಳು ಕನ್ನಡದಲ್ಲಿ ನಟಿಸಿರುವುದು ಹೊಸ ವಿಷಯವೇನಲ್ಲ. ಕಮಲಹಾಸನ್ 'ರಾಮಾ ಶ್ಯಾಮಾ ಭಾಮಾ' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಆದರೆ ಮಿಕ್ಕವರು ಕನ್ನಡದಲ್ಲಿ ನಾಯಕನಾಗಿ ನಟಿಸಿರುವ ಉದಾಹರಣೆಗಳು ಕಡಿಮೆ. ಮಲಯಾಳಂನ ಇನ್ನೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿಲ್ಲ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ 'ಲವ್' ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿದೆ.

  ಮಮ್ಮುಟ್ಟಿ ಧೈರ್ಯವನ್ನು ಮೆಚ್ಚಲೇಬೇಕು. ಮಲಯಾಳಂನಲ್ಲಿ ಸೂಪರ್ ಸ್ಟಾರ್ ಆಗಿದ್ದೂ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಮಮ್ಮೂಟಿ, ಭಾರತದ ಎಲ್ಲಾ ಪ್ರಮುಖ ಭಾಷೆಗಳ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ದಾಖಲೆಯನ್ನೂ ಮಾಡಿದ್ದಾರೆ. ಬಹುಶಃ ರಜನಿಕಾಂತ್, ಕಮಲ್ ಹಾಸನ್ ಬಿಟ್ಟರೆ ಬೇರೆ ಯಾರೂ ಇದನ್ನು ಮಾಡಿಲ್ಲ.

  'ಗುಬ್ಬಚ್ಚಿಗಳು' ಎಂಬ ಚಿತ್ರದ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಅಭಯ ಸಿಂಹ ನಿರ್ದೇಶನದ ಈ ಚಿತ್ರ ಇದೀಗ ಮುಂದಿನ ವಾರ, ಮಾರ್ಚ್ 9, 2012ರಂದು ಕೇರಳ ಹಾಗೂ ಕರ್ನಾಟಕದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಶಿಕಾರಿಯಲ್ಲಿ ಮಮ್ಮುಟ್ಟಿಗೆ ನಾಯಕಿ ಪೂನಂ ಬಾಜ್ವಾ. ಡೆಡ್ಲಿ ಆದಿತ್ಯ, ಶರತ್ ಲೋಹಿತಾಶ್ವ, ನೀನಾಸಂ ಅಚ್ಯುತ, ನೀನಾಸಂ ಅಶ್ವತ್ಥ್ ಮುಂತಾದವರೂ ಇದರಲ್ಲಿ ನಟಿಸಿದ್ದಾರೆ. ಸಂಗೀತ ಹರಿಕೃಷ್ಣ ಅವರದ್ದು. (ಒನ್ ಇಂಡಿಯಾ ಕನ್ನಡ)

  English summary
  Malayalam Mega Star Mammootty acted in a Kannada Movie called Shikari. It Releases on 9 March 2012. Kannada actor Deadly Aditya also acted in this movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X