ಮಗಳ ಅನುಮತಿಯನ್ನು ಪಡೆದು 49 ವರ್ಷದ 'ಆಧ್ಯಾತ್ಮಿಕ ಗುರು'ವನ್ನು ಮದುವೆಯಾದ ನಟಿ..!

ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಮಲಯಾಳಂನ ಜನಪ್ರಿಯ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ತಮ್ಮ 49ನೇ ವಯಸ್ಸಿನಲ್ಲಿ ದಿವ್ಯಾ ಶ್ರೀಧರ್ ಅವರನ್ನು ಮದುವೆಯಾಗಿದ್ದಾರೆ.

ಗುರುವಾಯೂರು ದೇವಸ್ಥಾನದಲ್ಲಿ ಸರಳವಾಗಿ ನಡೆದ ಇವರಿಬ್ಬರ ಮದುವೆ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗಿಯಾಗಿ ಶುಭ ಕೋರಿದ್ದಾರೆ. ಇನ್ನೂ ಕ್ರಿಸ್ ಕೇವಲ ಮಲಯಾಳಂ ಕಿರುತೆರೆಯ ಕಲಾವಿದ ಮಾತ್ರ ಅಲ್ಲ ಹದಿಹರೆಯದ ಯುವಕ ಯುವತಿಯರಲ್ಲಿ ಸ್ಫೂರ್ತಿಯನ್ನು ತುಂಬುವ ಮಾತುಗಾರ ಕೂಡ ಹೌದು. ಕ್ರಿಸ್ ಅವರನ್ನು ಮದುವೆಯಾದ ದಿವ್ಯಾ ಅವರಿಗೆ ಮಲಯಾಳಂ ಕಿರುತೆರೆಯಲ್ಲಿ ವಿಶೇಷ ಸ್ಥಾನ ಮಾನ ಇದೆ. ಅಭಿಮಾನಿಗಳ ಬಳಗ ಇದೆ. ಅದರಲ್ಲಿಯೂ ಖಳನಾಯಕಿಯ ಪಾತ್ರಕ್ಕೆ ದಿವ್ಯಾ ಕೇರಳದಲ್ಲಿ ಹೆಸರುವಾಸಿ.

49 Year Old Actor Kris Venugopal Married To 40 Year Old Actress Divya Sridhar In Intimate Ceremony

ಇಂಥಾ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಧಾರಾವಾಹಿಯ ಚಿತ್ರೀಕರಣದಲ್ಲಿ ಮೊದಲ ಬಾರಿ ಪರಿಚಯವಾದರು. ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಹತ್ತಿರವಾದರು. ಆಪ್ತ ಸ್ನೇಹಿತರಾದರು. ಆ ನಂತರ ಸ್ನೇಹ ಪ್ರೇಮದ ಸ್ವರೂಪ ಪಡೆಯಿತು. ಇನ್ನೂ ಇದೇ ಸಂದರ್ಭದಲ್ಲಿ ದಿವ್ಯಾ ಅವರ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಕ್ರಿಸ್ ಅವರಿಗೆ ಅವರ ಸಂಬಂಧಿಯೊಬ್ಬರು ಸಲಹೆಯನ್ನು ನೀಡಿದರು.

ಸಂಬಂಧಿ ನೀಡಿದ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಕ್ರಿಸ್ ವೇಣುಗೋಪಾಲ್ ಸಮಯ ಉರುಳಿದಂತೆ ದಿವ್ಯಾ ಅವರ ಕುರಿತು ಎಲ್ಲ ವಿಚಾರ ತಿಳಿದುಕೊಂಡರು. ತಮ್ಮ ಬದುಕಿನಲ್ಲಿ ದಿವ್ಯಾ ಅವರಿಗೆ ಮೊದಲ ಆಧ್ಯತೆಯನ್ನು ನೀಡಲು ಶುರುಮಾಡಿದರು. ಆ ನಂತರ ಅದೊಂದು ದಿನ ತಮ್ಮ ಮನದ ಮಾತುಗಳನ್ನು ದಿವ್ಯಾ ಬಳಿ ಹಂಚಿಕೊಂಡು ಪ್ರೇಮ ನಿವೇದನೆಯನ್ನು ಮಾಡಿದರು. ಆರಂಭದಲ್ಲಿ ಕ್ರಿಸ್ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡ ದಿವ್ಯಾ ಆ ನಂತರ ಕ್ರಿಸ್ ಅವರ ಈ ಮದುವೆಯ ಪ್ರಸ್ತಾಪವನ್ನು ತಮ್ಮ ಮಗಳ ಬಳಿ ಚರ್ಚೆ ಮಾಡಿದರು. ಮಗಳು ಸಮ್ಮತಿಯನ್ನು ನೀಡಿದ ನಂತರ ಕ್ರಿಸ್ ವೇಣುಗೋಪಾಲ್ ಅವರ ಜೊತೆ ಮದುವೆಯಾದರು ದಿವ್ಯಾ ಶ್ರೀಧರ್.

ಸದ್ಯ ಕ್ರಿಸ್ ಮತ್ತು ದಿವ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಶುಭ ಕೋರುತ್ತಿದ್ದಾರೆ. ಇನ್ನೂ ಕೆಲವರು ಎಂದಿನಂತೆ ತಮ್ಮ ಮನಸ್ಥಿತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. 67 ವಯಸ್ಸಿನ ಮುದುಕನ ಜೊತೆ ಮದುವೆಯಾಗುವ ಅವಶ್ಯಕತೆಯಾದರೂ ಏನಿತ್ತು ಎಂದು ಕಿಡಿ ಕಾರುತ್ತಿದ್ದಾರೆ. ದಿವ್ಯಾ ಶ್ರೀಧರ್ ಅವರನ್ನು ವ್ಯೆಯಕ್ತಿಕವಾಗಿ ನಿಂದನೆ ಮಾಡಿ ತೀರಾ ಕೀಳಾಗಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಕ್ರಿಸ್ ವೇಣುಗೋಪಾಲ್ ಅವರನ್ನು ದಿವ್ಯಾ ಶ್ರೀಧರ್ ಮದುವೆಯಾಗಿದ್ದು ಕೇವಲ ಸೆ*ಗಾಗಿ ಮಾತ್ರ ಎನ್ನುತ್ತಿದ್ದಾರೆ. ಸಹಜವಾಗಿ ವ್ಯಕ್ತವಾದ ಈ ಟೀಕೆ ಟಿಪ್ಪಣಿ ಮತ್ತು ಟ್ರೋಲ್‌ಗಳಿಂದ ನೊಂದು ಬೆಂದಿರುವ ದಿವ್ಯಾ ಶ್ರೀಧರ್ ತಮ್ಮ ಮೇಲೆ ನಡೆಯುತ್ತಿರುವ ಈ ಸೈಬರ್ ಅಟ್ಯಾಕ್ ಕುರಿತು ಬೇಸರ ಹೊರ ಹಾಕಿದ್ದಾರೆ. ಮದುವೆ ಕೇವಲ ಸೆ*ಗೋಸ್ಕರ ಯಾರು ಮಾಡಿಕೊಳ್ಳುವುದಿಲ್ಲ ಮದುವೆ ಅಂದರೆ ಎರಡು ದೇಹಗಳಷ್ಟೇ ಅಲ್ಲ ಎರಡು ಆತ್ಮಗಳ ಮಿಲನ ಎಂದಿದ್ದಾರೆ. ನಾನು ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನ ಏಕಾಂಗಿತನವನ್ನು ದೂರ ಮಾಡಲು ಮದುವೆಯಾಗಿರುವುದಾಗಿ ಹೇಳಿದ್ದಾರೆ. ಕ್ರಿಸ್ ಅವರ ವಯಸ್ಸು 67 ಅಲ್ಲ ಬದಲಿಗೆ 49 ಎಂದು ಸ್ಪಷ್ಟೀಕರಣವನ್ನು ನೀಡಿ ನನಗೆ ಈಗ 40ರ ಪ್ರಾಯ ಎಂದು ಕೂಡ ಹೇಳಿದ್ದಾರೆ ದಿವ್ಯಾ ಶ್ರೀಧರ್.

More from Filmibeat

Read more about: marriage malayalam filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X