ಓಟಿಟಿಯಲ್ಲಿ ಲಭ್ಯವಿರುವ ಈ 5 ಮಲಯಾಳಂ ಹಾರರ್ ಚಿತ್ರಗಳನ್ನು ನೀವು ವೀಕ್ಷಿಸಲೇಬೇಕು

5 Malayalam horror films available on OTT which you should watch

ಇತ್ತೀಚೆಗಿನ ದಿನಗಳಲ್ಲಿ ಓಟಿಟಿಯಲ್ಲಿ ಚಿತ್ರ ವೀಕ್ಷಿಸುವ ಸಿನಿ ರಸಿಕರ ಸಂಖ್ಯೆ ಹೆಚ್ಚಾಗಿರುವುದು ಗೊತ್ತೇ ಇದೆ. ಅದರಲ್ಲಿಯೂ ಲಾಕ್‌ಡೌನ್ ಆದ ಮೇಲಂತೂ ಓಟಿಟಿ ಕಡೆಗಿನ ಒಲವು ಹೆಚ್ಚಾಗಿದೆ. ಹೀಗೆ ಜನರು ಓಟಿಟಿಯಲ್ಲಿ ಚಿತ್ರ್ ವೀಕ್ಷಿಸಲು ಹೆಚ್ಚು ಮಾಡಿದ ಮೇಲೆ ಮಾಲಿವುಡ್ ಚಿತ್ರರಂಗದ ಸಿನಿಮಾಗಳು ಇನ್ನೂ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡವು.

ಅದರಲ್ಲಿಯೂ ಮಲಯಾಳಂನ ಥ್ರಿಲ್ಲರ್ ಹಾಗೂ ಮಲಯಾಳಂನ ಹಾರರ್ ಸಿನಿಮಾಗಳು ಸಿನಿ ರಸಿಕರನ್ನು ಹೆಚ್ಚಾಗಿ ಸೆಳೆದವು. ಹೆಚ್ಚಾಗಿ ಥ್ರಿಲ್ಲರ್ ಸಿನಿಮಾಗಳಿಗೆ ಖ್ಯಾತಿಯನ್ನು ಹೊಂದಿರುವ ಮಲಯಾಳಂ ಚಿತ್ರರಂಗದಿಂದ ಒಳ್ಳೊಳ್ಳೆ ಹಾರರ್ ಸಿನಿಮಾಗಳೂ ಸಹ ಬಂದಿವೆ. ಇಂತಹ ಸಿನಿಮಾಗಳ ಪೈಕಿ ಓಟಿಟಿಯಲ್ಲಿ ಲಭ್ಯವಿರುವ ಈ ಕೆಳಕಂಡ ಐದು ಬೆಸ್ಟ್ ಮಲಯಾಳಂ ಸಿನಿಮಾಗಳನ್ನು ನೀವು ನೋಡಲೇಬೇಕಿದೆ..

1. ಭಾರ್ಗವಿ ನಿಲಯಂ: ಭಾರ್ಗವಿ ನಿಲಯ ಮಲಯಾಳಂ ಚಿತ್ರ ಇತಿಹಾಸದ ಭಯಾನಕ ಚಿತ್ರಗಳಲ್ಲಿ ಒಂದಾಗಿದೆ. ವೈಕ್ಕೊಮ್ ಮುಹಮ್ಮದ್ ಬಷೀರ್ ಬರೆದಿರುವ ಕಿರುಕಥೆ ನೀಲವೆಲಿಚಂ ಆಧಾರಿತ ಚಿತ್ರ ಇದಾಗಿದೆ. ಮಧು ಎಂಬ ಬರಹಗಾರ ವಿಜಯ ಭಾರ್ಗವಿ ಎಂಬ ಪ್ರೇತಮಹಿಳೆಯ ಮೇಲೆ ಆಸಕ್ತಿಯಿಂದ ಕಥೆ ಬರೆಯಲು ಮುಂದಾಗಿ ಅವರಿಬ್ಬರ ನಡುವೆ ಆಕರ್ಷಣೆ ಹಾಗೂ ಸ್ನೇಹ ಬೆಳೆಯುತ್ತದೆ. ಬಳಿಕ ಇದು ಯಾವ ಹಂತ ತಲುಪಲಿದೆ ಎಂಬುವುದೇ ಚಿತ್ರದ ಕಥೆ. ಈ ಚಿತ್ರ ಯುಟ್ಯೂಬ್‌ನಲ್ಲಿ ಲಭ್ಯವಿದೆ.

2. ಇಜ್ರಾ: ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾ ಆನಂದ್ ನಟನೆಯ ಇಜ್ರಾ ಸಿನಿಮಾ ಸಹ ನೋಡಲೇಬೇಕಾದ ಹಾರರ್ ಥ್ರಿಲ್ಲರ್. ಪುರಾತನ ಬಾಕ್ಸ್ ಒಂದನ್ನು ಮನೆಯಲ್ಲಿ ಇಟ್ಟುಕೊಂಡವರೆಲ್ಲಾ ಸಾವನ್ನಪ್ಪುತ್ತಿರುತ್ತಾರೆ. ಈ ಬಾಕ್ಸ್ ನಾಯಕ ಹಾಗೂ ನಾಯಕಿ ಮನೆಗೂ ಬರಲಿದ್ದು, ಈ ಬಾಕ್ಸ್ ಹಿಂದಿನ ಮರ್ಮವೇನು, ಅದನ್ನು ಇಟ್ಟುಕೊಂಡರೆ ಸಾವು ಯಾಕೆ ಬರುತ್ತೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಹಿಂದಿಗೆ ಡಿಬಕ್ ಎಂಬ ಶೀರ್ಷಿಕೆಯಡಿಯಲ್ಲಿ ರಿಮೇಕ್ ಆಗಿದ್ದು, ಈ ಚಿತ್ರವೂ ಸಹ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.

3. ಆಕಾಶ ಗಂಗಾ: ನಿರ್ದೇಸಕ ವಿಜಯನ್ ನಿರ್ದೇಶನದ ಈ ಚಿತ್ರ ದೊಡ್ಡ ಹಿಟ್. ಇದೊಂದು ಸೇಡಿನ ಹಾರರ್ ಕಥೆಯಾಗಿದ್ದು ಕಪ್ಪು ಬೆಕ್ಕು ಹಾಗೂ ಬಿಳಿ ಸೀರೆಯುಟ್ಟ ಸುಂದರ ಮಹಿಳೆಯ ಆತ್ಮದ ದೃಶ್ಯಗಳುಳ್ಳ ಸಾಮಾನ್ಯ ಹಾರರ್ ಚಿತ್ರವಾಗಿದೆ. ಆದರೂ ಚಿತ್ರದ ಮೇಕಿಂಗ್ ಹಾಗೂ ಕಥೆ ಹೇಳಿರುವ ರೀತಿ ಪ್ರೇಕ್ಷಕರಿಗೆ ಕಿಕ್ ನೀಡಲಿದೆ. ಈ ಚಿತ್ರ ಯುಟ್ಯೂಬ್‌ನಲ್ಲಿ ಲಭ್ಯವಿದೆ.

4. ನೈನ್: ನೈನ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಸಿನಿಮಾ. ಇದೊಂದು ಸೈನ್ಸ್ ಹಾರರ್ ಥ್ರಿಲ್ಲರ್. ಉಲ್ಕೆಯೊಂದು ಭೂಮಿಯನ್ನು ದಾಟಿ ಹೋಗುವ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಕತ್ತಲೆ ಆವರಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜನರು ಹೇಗೆ ಪಾರಾಗುತ್ತಾರೆ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಚಿತ್ರದಲ್ಲಿ ಬಳಿಕ ನಾಯಕ ಹಾಗೂ ಆತನ ಮಗನ ವೈಯಕ್ತಿಕ ವಿಚಾರದ ಸುತ್ತ ಸುತ್ತುತ್ತೆ. ನಾಯಕನ ಮಗನಿಗೆ ನೀಲಿ ಕಣ್ಣಿನ ಮಹಿಳೆಯೋರ್ವಳು ಕಾಣಿಸಿಕೊಳ್ಳಲಿದ್ದು, ಇದರಿಂದ ಅ ಬಾಲಕ ಹೇಗೆ ಪಾರಾಗುತ್ತಾನೆ ಎಂಬುದೇ ಚಿತ್ರ. ಇನ್ನು ಕ್ಲೈಮ್ಯಾಕ್ಸ್ ಟ್ವಿಸ್ಟ್ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸುವುದಂತೂ ಪಕ್ಕಾ. ಈ ಚಿತ್ರ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

5. ಕೇರಳ ಕೆಫೆ: ಈ ಚಿತ್ರಕ್ಕೆ ಹತ್ತು ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದು, ಹತ್ತು ವಿಭಿನ್ನ ಕಥೆಗಳಿವೆ. ಇದು ಸಾಮಾನ್ಯ ಚಿತ್ರವಾಗಿರದ ಕಾರಣ ನಿಧಾನವಾಗಿ ಸಿನಿ ರಸಿಕರಿಗೆ ಈ ಚಿತ್ರ ಇಷ್ಟವಾಗಲಿದೆ. ಚಿತ್ರದಲ್ಲಿ ಭಯಗೊಳಿಸುವ ಅನೇಕ ಅಂಶಗಳಿದ್ದು, ಚಿತ್ರಕಥೆ ಸಿನಿ ರಸಿಕರಿಗೆ ಇಷ್ಟವಾಗಲಿದೆ.

More from Filmibeat

English summary
5 Malayalam horror films available on OTT which you should watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X