ವಿಡಿಯೊ: 60ನೇ ವಯಸ್ಸಲ್ಲಿ ಬದಲಾಯ್ತು ಅದೃಷ್ಟ: ಚಿಂದಿ ಆಯುತ್ತಿದ್ದವ ಈಗ ಮಾಡೆಲ್!

ಅದೃಷ್ಟವೆಂದರೆ ಹಾಗೆ ಅದು ಯಾವಾಗ, ಯಾರಿಗೆ, ಎಲ್ಲಿಂದ ಬರುತ್ತದೆಂಬುದು ಗೊತ್ತಾಗುವುದಿಲ್ಲ. ಈ ಸಾಮಾಜಿಕ ಜಾಲತಾಣದ ಕಾಲದಲ್ಲಿ ರಾತ್ರೋರಾತ್ರಿ ವ್ಯಕ್ತಿಗಳ ಜೀವನ ಬದಲಾಗಿಬಿಡುತ್ತದೆ.

ಏನೂ ಅಲ್ಲದವರನ್ನು ಸ್ಟಾರ್‌ಗಳನ್ನಾಗಿಯೂ, ಸ್ಟಾರ್‌ಗಳಾಗಿದ್ದವರನ್ನು ನೆಲ ಕಚ್ಚುವಂತೆಯೂ ಮಾಡುವ ಶಕ್ತಿ ಸಾಮಾಜಿಕ ಜಾಲತಾಣಕ್ಕೆ ಇದೆ. ತನ್ನ ಬಹುತೇಕ ಜೀವನ ಕೂಲಿ ಮಾಡುತ್ತಲೇ ಕಳೆದ ವ್ಯಕ್ತಿಯೊಬ್ಬ ತನ್ನ 60ನೇ ವಯಸ್ಸಿನಲ್ಲಿ ಸ್ಟಾರ್ ಆಗಿದ್ದಾನೆ. ಅದೂ ಸಾಮಾಜಿಕ ಜಾಲತಾಣದಿಂದ.

ಕೇರಳದ ಕೋಯಿಕ್ಕೊಡ್‌ನ ನಿವಾಸಿ ಮಮ್ಮಿಕಾ ತನ್ನ ಜೀವನದ ಬಹುಪಾಲು ವರ್ಷಗಳನ್ನು ರಸ್ತೆಯಲ್ಲೇ ಕಳೆದಿದ್ದ. ಚಿಂದಿ ಆಯುವುದು, ಕೂಲಿ ಮಾಡುವುದು ಅವನ ಕಾಯಕ. ಆದರೆ ಈಗ ಆತ ಮಾಡೆಲ್ ಆಗಿ ಬದಲಾಗಿದ್ದಾನೆ.

ಚಿತ್ರ ತೆಗೆದ ಫೊಟೊಗ್ರಾಫರ್ ಶರೀಕ್

ಮಮ್ಮಿಕಾ ಒಮ್ಮೆ ತನ್ನ ಹರಿದ ಹಳೆಯ ಅಂಗಿ, ಲುಂಗಿ, ಹವಾಯಿ ಚಪ್ಪಲಿ ಧರಿಸಿ, ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ರಸ್ತೆಯಲ್ಲಿ ನಡೆದು ಬರಬೇಕಾದರೆ ಫೋಟೊಗ್ರಾಫರ್ ಶರೀಕ್ ವಾಯಲಿಲ್‌ ಕಣ್ಣಿಗೆ ಬಿದ್ದ, ಆತನ ಚಿತ್ರ ತೆಗೆದ ಆ ಫೊಟೊಗ್ರಾಫರ್ ಶರೀಕ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ. ಅಷ್ಟೇ ಸಾಕಾಯ್ತು ಮಮ್ಮಿಕಾನ ಅದೃಷ್ಟ ಬದಲಾಗಲು. ಮಮ್ಮಿಕಾ ಮಾಡೆಲ್‌ನಂತಿದ್ದಾನೆ, ಸಿನಿಮಾ ನಟನಂತಿದ್ದಾನೆ ಎಂದೆಲ್ಲ ಕಮೆಂಟ್‌ಗಳು ಬರಲು ಆರಂಭವಾದವು.

ಮಮ್ಮಿಕಾ ಮೇಕ್‌ಓವರ್

ಮಮ್ಮಿಕಾ ಮೇಕ್‌ಓವರ್

ಬಳಿಕ ಮಮ್ಮಿಕಾನನ್ನು ಹುಡುಕಿ ಆತನಿಗೆ ಹೇರ್ ಕಟ್, ಫೇಶಿಯಲ್ ಇತರೆ ಮೇಕಪ್‌ಗಳನ್ನು ಮಾಡಿ ಅದೇ ಫೊಟೊಗ್ರಾಫರ್ ಮತ್ತೆ ಕೆಲವು ಫೊಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮಮ್ಮಿಕಾಗೆ ಮೇಕಪ್ ಮಾಡಿ ಆತನಿಗೆ 'ಕಾರ್ಪೊರೇಟ್ ಲುಕ್' ನೀಡುವ ವಿಡಿಯೋವನ್ನೂ ಶರೀಕ್ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿವೆ. ಮಮ್ಮಿಕಾ ಈಗ ಸ್ಥಳೀಯ ಸಂಸ್ಥೆಯೊಂದಕ್ಕೆ ಮಾಡೆಲ್ ಆಗಿದ್ದಾರೆ.

ವೈರಲ್ ಆಗಿದೆ ಚಿತ್ರಗಳು

ವೈರಲ್ ಆಗಿದೆ ಚಿತ್ರಗಳು

ಮಮ್ಮಿಕಾರ ಹೊಸ ಗೆಟಪ್‌ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಐಫೋನ್ ಹಿಡಿದು ಕೂತ ಚಿತ್ರ, ಐಶಾರಾಮಿ ಕಾರು ಬಳಿ ಸ್ಟೈಲ್ ಆಗಿ ನಿಂತ ಚಿತ್ರ. ಕತ್ತಿ ಹಿಡಿದು ರಾಜಸ್ಥಾನಿ ಮಹಾರಾಜನ ಫೊಸೊ ಇನ್ನೂ ಹಲವು ಮಾದರಿಯ ಚಿತ್ರಗಳನ್ನು ಫೊಟೊಗ್ರಾಫರ್ ಶರೀಕ್ ತೆಗೆದಿದ್ದು ಚಿತ್ರಗಳನ್ನು ನೆಟ್ಟಿಗರು ಮೆಚ್ಚಿಕೊಂಡು ಶೇರ್ ಮಾಡುತ್ತಿದ್ದಾರೆ. ಮಮ್ಮಿಕಾಗೆ ಸಿನಿಮಾಗಳಲ್ಲಿ ಅವಕಾಶ ಕೊಡಿ ಎಂಬ ಬೇಡಿಕೆಯೂ ಹೆಚ್ಚಾಗಿದೆ.

ಹಲವರನ್ನು ಸ್ಟಾರ್ ಮಾಡಿದ ಸಾಮಾಜಿಕ ಜಾಲತಾಣ

ಹಲವರನ್ನು ಸ್ಟಾರ್ ಮಾಡಿದ ಸಾಮಾಜಿಕ ಜಾಲತಾಣ

ಹೀಗೆ ಸಾಮಾನ್ಯರಿಗೆ ಸ್ಟಾರ್‌ಗಿರಿ ತಂದುಕೊಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಭಿಕ್ಷುಕಿಯಾಗಿದ್ದ ರಾನು ಮಂಡಲ್ ಹಿನ್ನೆಲೆ ಗಾಯಕಿಯಾಗಿದ್ದು, ಕೇರಳದ ಮೀನು ಮಾರುವ ಹುಡುಗಿ ರಾತ್ರೋರಾತ್ರಿ ಸ್ಟಾರ್ ಆಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಡಲೆ ಕಾಯಿ ಮಾರುವ ವ್ಯಕ್ತಿ ತನ್ನ 'ಕಚ್ಚಾ ಬಾದಾಮ್' ಹಾಡಿನಿಂದ ವಿಶ್ವದಾದ್ಯಂತ ವೈರಲ್ ಆಗಿದ್ದು, ಪಾಕಿಸ್ತಾನದ ಚಹ ಮಾರುವ ಹುಡುಗ ಮಾಡೆಲ್ ಆಗಿದ್ದು, ಹಣ್ಣು ಮಾರುವ ಯುವತಿ ಮಾಡೆಲ್ ಆಗಿದ್ದು, ಅಮೆರಿಕದ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕ ತನ್ನ ಧ್ವನಿಯಿಂದಾಗಿ ರೇಡಿಯೋ ಜಾಕಿ ಆಗಿದ್ದು ಹೀಗೆ ಹಲವಾರು ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣ ಸ್ಟಾರ್‌ಗಳನ್ನಾಗಿ ಮಾಡಿದೆ.

More from Filmibeat

English summary
60 year old man Mammika is labour but now he is a model. One picture of him turned him life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X