''ಲೋಕ'' ಗೆದ್ದ ಕಲ್ಯಾಣಿ ಪ್ರಿಯದರ್ಶನ್‌ಗೆ ಸಿಕ್ಕ ಸಂಭಾವನೆ ಎಷ್ಟು ? ಚಿಲ್ಲರೆನಾ ? ಕೋಟಿನಾ ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು. ಆದರೆ ಈಗ ಕಾಲ ಪರಿಸ್ಥಿತಿ ಬದಲಾಗಿದೆ. ನಾಯಕರಿಗೆ ಸರಿಸಮಾನವಾಗಿ ನಾಯಕಿಯರು ಕೂಡ ಸಂಭಾವನೆ ಪಡೆಯುತ್ತಿದ್ದಾರೆ.

ಹಾಗಂಥ ಎಲ್ಲರಿಗೂ ಈ ಸೌಭಾಗ್ಯ ಇಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಅದೃಷ್ಟವಂತ ನಾಯಕಿಯರಿಗೆ ಮಾತ್ರ ಕೈತುಂಬಾ ಕಾಸು ಸಿಗುತ್ತೆ. ಇನ್ನೂ ಹೊಸಬರ ಕಥೆ ಎಲ್ಲರಿಗೆ ಗೊತ್ತು.

A Look Inside the Lokah Budget What Did Dulquer Salmaan Spend to Secure Kalyani Priyadarshan

ಅವಕಾಶ ಸಿಕ್ಕರೆ ಸಾಕು ಎಂದು ಹಲವರು ನಿರ್ಮಾಣ ಸಂಸ್ಥೆ ನೀಡಿದಷ್ಟು ಅಥವಾ ನಿರ್ದೇಶಕರು ಹೇಳಿದಷ್ಟು ದುಡ್ಡು ಪಡೆಯುತ್ತಾರೆ. ಚಿತ್ರರಂಗದ ಜೊತೆ ಸಂಬಂಧ ಇಲ್ಲದವರು ಮಾತ್ರವಲ್ಲ ಚಿತ್ರರಂಗದ ಹಿನ್ನೆಲೆಯಿಂದ ಬಂದವರು ಕೂಡ ಮೊದಲ ಚಿತ್ರಕ್ಕೆ ತಮ್ಮ ಇಷ್ಟದ ಸಂಭಾವನೆ ಕೇಳಲು ಹಿಂದೇಟು ಹಾಕುತ್ತಾರೆ. ಮುಜುಗರಕ್ಕೀಡಾಗಿ ಕೊಟ್ಟಷ್ಟು ತಗೊಂಡು ಕೆಲಸ ಮಾಡುತ್ತಾರೆ.

ಹೀಗಾಗಿ ಸದ್ಯ ಕಲ್ಯಾಣಿ ಪ್ರಿಯದರ್ಶನ್ ''ಲೋಕಾ-ಚಾಪ್ಟರ್ 1 : ಚಂದ್ರ'' ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಕುತೂಹಲ ಹಲವರನ್ನು ಕಾಡುತ್ತಿದೆ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಲೋಕಾ ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಹಲವು ವರದಿಗಳ ಪ್ರಕಾರ ಈಗಾಗಲೇ ಸಿನಿಮಾ‌ ನೂರು ಕೋಟಿ ಕೊಳ್ಳೆ ಹೊಡೆದಿದೆ.

ಈ ಹಿನ್ನೆಲೆ ಕಲ್ಯಾಣಿ ಸಂಭಾವನೆ ಕುರಿತು ಹಲವರಲ್ಲಿ ಪ್ರಶ್ನೆ ಇದೆ. ಈ ಪ್ರಶ್ನೆಗೆ ಸದ್ಯ ಹಲವರು ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದು ಆ ಪ್ರಕಾರ www.oneindia.com ಕಲ್ಯಾಣಿಯ ಸಂಭಾವನೆ ಕುರಿತು ವರದಿಯನ್ನು ಮಾಡಿದೆ. ಅದರ ಸಾರಾಂಶವನ್ನು ತಿಳಿಯಲು ಮುಂದೆ ಓದಿ.

''ಲೋಕ'' ಗೆದ್ದ ಕಲ್ಯಾಣಿ ಕೈಗೆ ಸಿಕ್ಕ ಕಾಸು ಇಷ್ಟೇನಾ ?

www.oneindia.com ವರದಿಯ ಪ್ರಕಾರ ''ಲೋಕಾ ಚಾಪ್ಟರ್ 1-ಚಂದ್ರ'' ಚಿತ್ರಕ್ಕೆ ಕಲ್ಯಾಣಿಗೆ ₹80 ಲಕ್ಷದಿಂದ ₹1.2 ಕೋಟಿ ಸಂಭಾವನೆಯನ್ನು ನೀಡಿರುವ ಸಾಧ್ಯತೆ ಇದೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಮಲಯಾಳಂನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್. ಆದರೆ.. ಮೊದಲ ಚಿತ್ರದಲ್ಲಿಯೇ ದೊಡ್ಡ ದೊಡ್ಡ ನಾಯಕಿಯರಿಗೆ ಸೆಡ್ಡು ಹೊಡೆದ ಕಲ್ಯಾಣಿ ಮಲಯಾಳಂ ಮಾತ್ರವಲ್ಲ ಬಾಲಿವುಡ್‌ನಲ್ಲಿ ಕೂಡ ತಮ್ಮ ಛಾಪು ಮೂಡಿಸಿರುವ ನಿರ್ದೇಶಕ ಪ್ರಿಯದರ್ಶನ್ ಅವರ ಮಗಳು ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

A Look Inside the Lokah Budget What Did Dulquer Salmaan Spend to Secure Kalyani Priyadarshan

ಹೀಗಾಗಿ ಕಲ್ಯಾಣಿ ಹಿನ್ನೆಲೆಯ ಪರಿಚಯ ಇದ್ದವರು ಇನ್ನೂ ಹೆಚ್ಚಿನ ಹಣವನ್ನು ದುಲ್ಕರ್ ನೀಡಿರಬಹುದು ಎನ್ನುವ ವಾದವನ್ನು ಮಾಡುತ್ತಿದ್ದಾರೆ. ಇನ್ನೂ.. ''ಲೋಕ-ಚಾಪ್ಟರ್ 1 : ಚಂದ್ರ'' ನಿರೀಕ್ಷೆಗೂ ಮೀರಿ ಹಣವನ್ನು ಗಳಿಸಿದೆ. ಚಿತ್ರ ಗೆದ್ದರೆ ದಕ್ಷಿಣದಲ್ಲಿ ಆ ನಂತರ ಹೆಚ್ಚಿನ ಹಣವನ್ನು ನೀಡುವ ಸಂಪ್ರದಾಯ ಇದೆ. ಋಣ ಸಂದಾಯ ಮಾಡುವ ನಿರ್ಮಾಪಕರ ಬಣ ಇದೆ. ಹೀಗಾಗಿ ಚಿತ್ರದ ಗಳಿಕೆಯ ಆಧಾರದ ಮೇಲೆ ಕಲ್ಯಾಣಿಗೆ ದುಲ್ಕರ್ ಸಲ್ಮಾನ್ ಹೆಚ್ಚುವರಿ ಸಂಭಾವನೆಯನ್ನು ಕೂಡ ನೀಡಿರಬಹುದು ಎನ್ನುವ ವಾದವನ್ನು ಕೂಡ ಸದ್ಯ ಹಲವರು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

ಯಾರಿಗೆ ಗೊತ್ತು ದುಲ್ಕರ್ ಸಲ್ಮಾನ್ ಹೆಚ್ಚಿನ ಹಣವನ್ನು ಬಿಡುಗಡೆಯ ನಂತರ ನೀಡಿದ್ದರೂ ನೀಡಿರಬಹುದು. ನೀಡದೆಯೂ ಇರಬಹುದು. ಅಸಲಿ ಸತ್ಯ ಇಬ್ಬರಲ್ಲಿ ಯಾರೂ ಹೇಳಿಲ್ಲ. ಕೇವಲ ಚಿತ್ರ ಗೆದ್ದ ಹಿನ್ನೆಲೆ ತಮ್ಮ ಸಂಭ್ರಮವನ್ನೇ ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ.

ಇನ್ನುಳಿದಂತೆ ಈ ಚಿತ್ರಕ್ಕೆ ಖರ್ಚಾಗಿದ್ದೇ ₹30 ಕೋಟಿ ಎನ್ನುವ ಮಾತು ಕೂಡ ಇದೆ. ಕೇವಲ ₹30 ಕೋಟಿ ಹಣ ಹೂಡಿ ದುಲ್ಕರ್ ಸಲ್ಮಾನ್ ಸದ್ಯ ಚಿನ್ನದ ಗಣಿಯನ್ನೇ ಅಗೆಯುತ್ತಿದ್ದಾರೆ ಎಂದು ಇಡೀ ಮಲಯಾಳಂ ಚಿತ್ರರಂಗ ಕೂಡ ಮಾತನಾಡುತ್ತಿದೆ. ಸದ್ಯ ಹೊಸ ಚಿತ್ರಗಳು ಬಿಡುಗಡೆಯಾದರೂ ಕಲ್ಯಾಣಿ ಕ್ರೇಜ್ ಕಡಿಮೆಯಾಗಿಲ್ಲ. ಮೊದಲ ಚಿತ್ರಕ್ಕೆ ಸಿಕ್ಕ ಈ ಪ್ರತಿಕ್ರಿಯೆಯಿಂದ ಕಲ್ಯಾಣಿ ಸಂಭಾವನೆ ಮುಂಬರುವ ದಿನಗಳಲ್ಲಿ ಗಗನಕ್ಕೇರಿದರೂ ಕೂಡ ಅಚ್ಚರಿ ಇಲ್ಲ.

More from Filmibeat

English summary
Lokah: Chapter 1 - Chandra is a massive hit. Get the inside scoop on the film's production budget and the surprising remuneration Kalyani Priyadarshan received for her role in Dulquer Salmaan's record-breaking movie.
Read more about: remuneration actress mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X