ವೇದಿಕೆ ಮೇಲೆಯೇ 'ಸೂರರೈ ಪೊಟ್ರು' ನಟಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿ; ವಿಡಿಯೊ ವೈರಲ್!

ಸಿನಿಮಾ ನಟಿಯರ ಜತೆ ಕೆಲ ಕಿಡಿಗೇಡಿಗಳು ಎಲ್ಲೆ ಮೀರಿ ಅಸಭ್ಯವಾಗಿ ವರ್ತಿಸಿದ ಘಟನೆ ಹಲವು ಬಾರಿ ನಡೆದಿದೆ. ಖ್ಯಾತ ನಟಿಯರೇ ಹಲವು ಬಾರಿ ಇರಿಸುಮುರಿಸುಗೊಂಡಿದ್ದಾರೆ. ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ತಮ್ಮ ನೆಚ್ಚಿನ ನಟಿಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಂತಹ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಂಡಿದ್ದಂತಹ ಕಿಡಿಗೇಡಿಗಳು ನಟಿಯರ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಹಲವು ಘಟನೆಗಳು ನಡೆದಿವೆ.

ಇನ್ನು ಕಳೆದ ವರ್ಷವೂ ಸಹ ಇಂತಹ ಘಟನೆಗಳು ನಡೆದಿದ್ದವು. ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಸಾರ್ವಜನಿಕ ಸ್ಥಳದಲ್ಲಿ ಇಂತಹ ಸನ್ನಿವೇಶವನ್ನು ಎದುರಿಸಿದ್ದರು. ಜಾರ್ಖಂಡ್ ಶೋನಲ್ಲಿ ಭಾಗವಹಿಸಿದ್ದ ಈ ನಟಿ ಅಲ್ಲಿನ ಕೆಲವರು ಅಸಭ್ಯವಾಗಿ ವರ್ತಿಸಿದ ಕಾರಣ ಬೇಸತ್ತು ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರನಡೆದಿದ್ದರು.

ಇದೀಗ ಇಂತಹದ್ದೇ ಅಹಿತಕರ ಅನುಭವ ಸೂರರೈ ಪೊಟ್ರು ಖ್ಯಾತಿಯ ಅಪರ್ಣ ಬಾಲಮುರಳಿ ಅವರಿಗೂ ಆಗಿದೆ. ಸೂರರೈ ಪೊಟ್ರು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟಿ ವಿದ್ಯಾರ್ಥಿಯೊಬ್ಬ ವೇದಿಕೆ ಮೇಲೆಯೇ ತನ್ನ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದಾಗ ಮುಜಗರಿದಿಂದ ಆತನಿಂದ ಬಿಡಿಸಿಕೊಂಡು ಪಕ್ಕಕ್ಕೆ ಸರಿದ ಘಟನೆ ನಡೆದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ವೇದಿಕೆ ಮೇಲೆಯೇ ನಟಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ ಕಿಡಿಗೇಡಿ

ವೇದಿಕೆ ಮೇಲೆಯೇ ನಟಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ ಕಿಡಿಗೇಡಿ

ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡಗಳು ಕಾಲೇಜುಗಳಿಗೆ ತೆರಳುವುದು ಕಾಮನ್. ಅದೇ ರೀತಿ ಮಲಯಾಳಂನ 'ತಂಗಮ್' ಚಿತ್ರತಂಡ ಸಹ ಕಾಲೇಜೊಂದಕ್ಕೆ ಆಗಮಿಸಿತ್ತು. ವೇದಿಕೆ ಮೇಲೆ ಮಾತನಾಡಲು ಬಂದ ವಿದ್ಯಾರ್ಥಿಯೊಬ್ಬ ಕುರ್ಚಿ ಮೇಲೆ ಕುಳಿತಿದ್ದ ನಟಿ ಅಪರ್ಣ ಬಾಲಮುರಳಿಗೆ ಹೂ ನೀಡಿ ಆಕೆಯ ಕೈಹಿಡಿದು ಮೇಲೆ ಏಳಿಸಿದ್ದಾನೆ. ಅಷ್ಟೇ ಅಲ್ಲದೇ ನಟಿಯ ಭುಜ ಹಿಡಿದು ಆಕೆಯನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆ. ಇನ್ನು ಇದನ್ನು ವಿರೋಧಿಸಿದ ಅಪರ್ಣ ಬಾಲಮುರಳಿ ಆತನಿಂದ ತಪ್ಪಿಸಿಕೊಂಡು ಪಕ್ಕಕ್ಕೆ ತೆರಳಿ ನಿಂತಿದ್ದಾರೆ ಹಾಗೂ ಏನಿದು ಲಾ ಕಾಲೇಜ್ ಅಲ್ವಾ ಎಂದೂ ಸಹ ಅಪರ್ಣ ಬಾಲಮುರಳಿ ಹೇಳಿದ್ದಾರೆ. ಆತ ತನ್ನನ್ನು ಅಪ್ಪಿಕೊಳ್ಳಲು ಯತ್ನಿಸಿದಾಗ ಅಪರ್ಣ ಬಾಲಮುರಳಿ ಮುಜುಗರಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೇದಿಕೆ ಮೇಲೆ ಸುಮ್ಮನೆ ಕುಳಿತ ಚಿತ್ರತಂಡ

ವೇದಿಕೆ ಮೇಲೆ ಸುಮ್ಮನೆ ಕುಳಿತ ಚಿತ್ರತಂಡ

ಇನ್ನು ಇಷ್ಟೆಲ್ಲಾ ವೇದಿಕೆ ಮೇಲೆ ನಡೆದರೂ ವೇದಿಕೆ ಮೇಲೆಯೇ ಇದ್ದ ಚಿತ್ರದ ನಟ ವಿನೀತ್ ಶ್ರೀನಿವಾಸನ್ ಸೇರಿದಂತೆ ಚಿತ್ರತಂಡದ ಇನ್ನಿತರ ಯಾವ ಸದಸ್ಯರೂ ಸಹ ಇದನ್ನು ತಡೆಯಲು ಮುಂದಾಗಿಲ್ಲ. ಇದರ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇಷ್ಟೆಲ್ಲಾ ಆಗುತ್ತಿದ್ದರೂ ಸುಮ್ಮನೆ ಕುಳಿತ ಅಲ್ಲಿನವರಿಗೆ ನಾಚಿಕೆಯಾಗಬೇಕು, ಈ ರೀತಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇದೇ ರೀತಿಯ ಘಟನೆ ನಡೆದಾಗ ಕೆನ್ನೆಗೆ ಬಾರಿಸಿದ್ದ ನಟಿ

ಇದೇ ರೀತಿಯ ಘಟನೆ ನಡೆದಾಗ ಕೆನ್ನೆಗೆ ಬಾರಿಸಿದ್ದ ನಟಿ

ಇನ್ನು ಮಲಯಾಳಂನ ಮತ್ತೋರ್ವ ನಟಿ ಸಾನ್ಯಾ ಅಯ್ಯಪ್ಪನ್ ಕೂಡ ಇಂತಹದ್ದೇ ಕೆಟ್ಟ ಅನುಭವವನ್ನು ಎದುರಿಸಿದ್ದರು. ಮಲಯಾಳಂ ಚಿತ್ರ ಸಾಟರ್‌ಡೇ ನೈಟ್ ಚಿತ್ರದ ಪ್ರಮೋಷನ್ ಕಲ್ಲಿಕೋಟೆಯಲ್ಲಿ ನಡೆಯುವ ವೇಳೆ ಕಿಡಿಗೇಡಿಯೊಬ್ಬ ಸಾನ್ಯಾ ಅಯ್ಯಪ್ಪನ್ ಜತೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಕೋಪಗೊಂಡಿದ್ದ ನಟಿ ಆತನ ಕೆನ್ನೆಗೆ ಬಾರಿಸಿದ್ದರು. ಆ ವಿಡಿಯೊ ಸಹ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.

More from Filmibeat

English summary
A student tried to hug and misbehaved with Aparna Balamurali during movie promotion. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X