ಮಲಯಾಳಂ ನಟ, ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ (63) ನಿಧನ
ಮಲಯಾಳಂ ನಟ ಹಾಗೂ ಮಿಮಿಕ್ರಿ ಕಲಾವಿದರಾಗಿದ್ದ ಕಲಾಭವನ್ ಹನೀಫ್ ನಿಧನರಾಗಿದ್ದಾರೆ. 63 ವರ್ಷ ವಯಸ್ಸಿನ ಅವರು ಗುರುವಾರ ಕೊಚ್ಚಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಲಯಾಳಂನ ಪ್ರಮುಖ ನಟರಲ್ಲದೆ, ಹನೀಫ್ ಅವರು ಮಿಮಿಕ್ರಿ ಕಲಾವಿದರಾಗಿ ಹೆಸರುವಾಸಿಯಾಗಿದ್ದರು.
ವರದಿಗಳ ಪ್ರಕಾರ, ನಟನಿಗೆ ಉಸಿರಾಟದ ಸಮಸ್ಯೆ ಇತ್ತು, ಅದಕ್ಕಾಗಿ ಅವರು ಕೊಚ್ಚಿಯ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಒಂದು ವಾರದವರೆಗೆ ದಾಖಲಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಲಾಭವನ್ ಹನೀಫ್ ಅವರು ಪತ್ನಿ ವಹಿದಾ ಮತ್ತು ಮಕ್ಕಳಾದ ಸಿತಾರಾ ಹನೀಫ್ ಮತ್ತು ಶಾರುಖ್ ಹನೀಫ್ ಅವರನ್ನು ಅಗಲಿದ್ದಾರೆ.

ಕಲಾಭವನ್ 1991 ರಲ್ಲಿ ಚೆಪ್ಪುಕಿಲುಕ್ಕಣ್ಣ ಚನಗತಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದವರು. ಮಲಯಾಳಂನಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಟ್ಟಂಚೇರಿಯಲ್ಲಿ ಜನಿಸಿದ ಕಲಾಭವನ್ ಹನೀಫ್ ನಾಟಕಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಹೀಗಾಗಿಯೇ ಕಲಾಭವನಕ್ಕೆ ಸೇರಿದರು, ಅಲ್ಲಿ ಅವರು ಮಿಮಿಕ್ರಿ ತಂಡದ ಪ್ರಮುಖ ಸದಸ್ಯರಾದರು.
ಕೊಚ್ಚಿ ಮೂಲದ ಹನೀಫ್ ತಮ್ಮ ಮಿಮಿಕ್ರಿ ಪ್ರದರ್ಶನಗಳ ಮೂಲಕ ಟಿನ್ಸೆಲ್ ಸಿಟಿಗೆ ಕಾಲಿಟ್ಟರು. ಕೇರಳದಲ್ಲಿ ಮಿಮಿಕ್ರಿ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ಪ್ರದರ್ಶನ ತಂಡ ಕಲಾಭವನದ ಸದಸ್ಯರಾಗಿದ್ದರು. ಕಲಾಭವನದಲ್ಲಿ ಅವರ ಅನೇಕ ಸಹ ಕಲಾವಿದರಂತೆ, ಹನೀಫಾ ಕೂಡ ಹಾಸ್ಯ ಪಾತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದರು. ಚೆಪ್ಪುಕಿಲುಕ್ಕನ ಚಂಗತಿ ಅವರ ಮೊದಲ ಚಿತ್ರ.
ನಂತರ ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಬಹುಪಾಲು ಹಾಸ್ಯಮಯ ಪಾತ್ರಗಳು. ಸಿನಿಮಾಗಳಲ್ಲದೇ ಅ ದೂರದರ್ಶನ ಧಾರಾವಾಹಿಗಳು ಮತ್ತು ಸ್ಟೇಜ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹನೀಫ್ ಅವರು ಜೂಡ್ ಆಂಥನಿ ಜೋಸೆಫ್ ಅವರ ಸೂಪರ್ ಹಿಟ್ ಸಿನಿಮಾ 2018 ರಲ್ಲಿ ನಟಿಸಿದ್ದಾರೆ.
ನಟನ ಕಲಾಭವನ್ ಹನೀಫ್ ನಿಧನಕ್ಕೆ ಸೂಪರ್‌ಸ್ಟಾರ್ ಮಮ್ಮುಟ್ಟಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಚಿವ ಸಾಜಿ ಚೆರಿಯನ್, ಹನೀಫ್ ಅವರ ನ್ಯಾಚುರಲ್ ಆಕ್ಟಿಂಗ್ ಮತ್ತು ಸಂಭಾಷಣೆಗಳು ಅವರ ಪಾತ್ರಗಳನ್ನು ನೆನಪಿನಲ್ಲಿ ಉಳಿಸಿವೆ ಎಂದು ಹೇಳಿದ್ದಾರೆ.


Click it and Unblock the Notifications










