twitter
    For Quick Alerts
    ALLOW NOTIFICATIONS  
    For Daily Alerts

    ಆರು ವಾರದಲ್ಲಿ ಕೇಶ ಬೆಳವಣಿಗೆ; ದಾರಿತಪ್ಪಿಸುವ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟ ಅನೂಪ್ ಗೆ ದಂಡ

    |

    ಇದನ್ನು ಹಾಕಿದರೆ ಆರೇ ವಾರದಲ್ಲಿ ನಿಮ್ಮ ತಲೆಯಲ್ಲಿ ಕೂದಲು ಬೆಳೆಯುತ್ತೆ, ಇದನ್ನು ಬಳಸಿದರೆ ನೀವು ಫಳಫಳ ಹೊಳೆಯುತ್ತೀರಿ, ಬೆಳ್ಳಗಾಗುತ್ತೀರಿ ಹೀಗೆ ಹತ್ತು ಹಲವಾರು ಭರವಸೆಗಳನ್ನು ನೀಡುತ್ತಾ ಕೆಲವು ಕಂಪನಿಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಇಂತಹ ಸಾಕಷ್ಟು ಉತ್ಪನ್ನಗಳಿಗೆ ಪ್ರಚಾರಕರಾಗಿ ಅನೇಕ ಸ್ಟಾರ್ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.

    ಸುಳ್ಳು ಭರವಸೆಯನ್ನು ನೀಡಿರುವ ಹೇರ್ ಕ್ರೀಮ್ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಮಲಯಾಳಂನ ಖ್ಯಾತ ನಟ ಅನೂಪ್ ಮೆನನ್ ಗೆ ಕೇರಳದ ಜಿಲ್ಲಾ ಗ್ರಾಹಕರ ಕುಂದುಕೊರತೆ ಪರಿಹಾರ ವೇದಿಕೆ ದಂಡ ವಿಧಿಸಿದೆ. ಆರು ವಾರದಲ್ಲಿ ತಲೆಕೂದಲು ಬರುತ್ತೆ ಎಂದು ಧಾತ್ರಿ ಎನ್ನುವ ಆಯುರ್ವೇದ ಉತ್ಪನ್ನದ ಪ್ರಚಾರಕರಾಗಿ ಅನೂಪ್ ಕಾಣಿಸಿಕೊಂಡಿದ್ದರು.

    ಮಲಯಾಳಂ ಬಿಗ್‌ಬಾಸ್‌ಗೆ ತಯಾರಿ: ಸ್ಪರ್ಧಿಗಳ ಬಗ್ಗೆ ಇದೆ ಗೊಂದಲಮಲಯಾಳಂ ಬಿಗ್‌ಬಾಸ್‌ಗೆ ತಯಾರಿ: ಸ್ಪರ್ಧಿಗಳ ಬಗ್ಗೆ ಇದೆ ಗೊಂದಲ

    8 ವರ್ಷದ ಹಿಂದಿನ ಪ್ರಕರಣ ಇದಾಗಿದ್ದು, ಇದೀಗ ತೀರ್ಪು ಹೊರಬಿದ್ದಿದೆ. 'ತಿಳುವಳಿಕೆಯುಳ್ಳ ಗ್ರಾಹಕ ಸಂಸ್ಕೃತಿಯ ಬೆಳವಣಿಗೆಯ ಜಾಹೀರಾತುಗಳನ್ನು ಉತ್ತೇಜಿಸಬೇಕು. ಇದರಿಂದ ಗ್ರಾಹಕರಿಗೆ ಬುದ್ಧಿವಂತಿಕೆಯಿಂದ ಉತ್ಪನ್ನಗಳನ್ನು ಆಯ್ಕೆ ಮಾಡಲು ಮತ್ತು ವಂಚಿಸುವ ಹಾಗೂ ಮೋಸಗೊಳಿಸುವ ಉತ್ಪನ್ನಗಳನ್ನು ತಿರಸ್ಕರಿಸಲು ಸಾಧ್ಯವಾಗುತ್ತದೆ' ಎಂದು ಒಕ್ಕೂಟ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

    Actor Anoop menon fined for false promise in advertisement

    ಆರು ವಾರದಲ್ಲಿ ಕೇಶರಾಶಿ ಸಮೃದ್ಧವಾಗಿ ಬೆಳೆಯುತ್ತೆ ಎನ್ನುವ ಜಾಹೀರಾತು ನೋಡಿ, ಫ್ರಾನ್ಸಿಸ್ ವಡಕ್ಕನ್ ಎನ್ನುವವರು 2012ರಲ್ಲಿ ಈ ಉತ್ಪನ್ನವನ್ನು ಖರೀದಿ ಮಾಡಿದ್ದರು. ಆದರೆ ಜಾಹೀರಾತಿನಲ್ಲಿ ಹೇಳಿದ ಹಾಗೆ ಯಾವುದೇ ಬೆಳವಣಿಗೆಯಾಗಲಿಲ್ಲ. ಫಲಿತಾಂಶ ವಿಫಲವಾದ ಬಳಿಕ ಮೊಕದ್ದಮ್ಮೆ ಹೂಡಿದ್ದರು.

    ಈ ಉತ್ಪನ್ನ ಖರೀದಿ ಮಾಡಿ, ಬಳಸಿದ ನಂತರ ಯಾವುದೇ ಫಲಿತಾಂಶ ವಿಲ್ಲದನ್ನು ನೋಡಿ, ಪರಿಚಯಸ್ಥರು ಮತ್ತು ಕುಟುಂಬದವರು ಅಪಹಾಸ್ಯ ಮಾಡಿದ್ದರಿಂದ ನೊಂದ ಫ್ರಾನ್ಸಿಸ್ ವಕೀಲರ ಮೂಲಕ ಧಾತ್ರಿ ಮತ್ತು ನಟ ಅನೂಪ್ ಮತ್ತು ಕ್ರೀಮ್ ಖರೀದಿ ಮಾಡಿದ ಮೆಡಿಕಲ್ ಸ್ಟೋರ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಲ್ಲದೆ ತಾನು ಅನುಭಸಿವಿದ ಮಾನಸಿಕ ವೇದನೆಗೆ 5 ಲಕ್ಷ ಪರಿಹಾರ ಕೋರಿದ್ದರು.

    ಒಕ್ಕೂಟ ನಡೆಸಿದ ವಿಚಾರಣೆ ವೇಳೆ, ನಟ ಅನೂಪ್ ಉತ್ಪನ್ನದ ನಿಖರ ಸ್ವರೂಪದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತನ್ನ ತಲೆಯ ಕೇಶ ರಾಶಿಯ ಬೆಳವಣಿಗೆ ಅಮ್ಮ ಮನೆಯಲ್ಲಿ ತಯಾರಿಸಿದ್ದ ಮದ್ದು ಬಳಸುತ್ತಿರುವುದಾಗಿ ವಾದಿಸಿದ್ದಾರೆ. ಕೇಶರಾಶಿ ಆರೈಕೆಗೆ ಉತ್ಪನ್ನ ಬಳಸಲಾಗುತ್ತದೆಯೇ ಹೊರತು ಬೆಳವಣಿಗೆಗೆ ಅಲ್ಲ ಎಂದು ಭಾವಿಸಿರುವುದಾಗಿ ಮೆನನ್ ಹೇಳಿದ್ದಾರೆ.

    ತಾನು ಬಳಸದೆ ಉತ್ಪನ್ನವನ್ನು ಪ್ರಚಾರ ಮಾಡುವುದು ಮತ್ತು ಅದ ಬಗ್ಗೆ ತಿಳಿದುಕೊಳ್ಳದೇ ಮುಂದುವರಿಯದಂತೆ ಮೆನನ್ ಗೆ ಎಚ್ಚರಿಕೆ ನೀಡಿದೆ. ಜೊತೆಗೆ ಧಾತ್ರಿ ಕಂಪನಿ ಮತ್ತು ಮೆನನ್ 10ಸಾವಿರ ದಂಡ ವಿಧಿಸಿದೆ. ಮೆಡಿಕಲ್ ಸ್ಟೋರ್ ಗೆ 3ಸಾವಿರ ದಂಡ ವಿಧಿಸಿದೆ.

    English summary
    Malayalam Actor Anoop menon fined for false promise in advertisement
    Wednesday, January 6, 2021, 13:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X