ಸಿನಿಮಾ ನೋಡಿ ಪೊಲೀಸ್ ಅಧಿಕಾರಿಯ ಕೊಲ್ಲಲು ಸ್ಕೆಚ್ ಹಾಕಿದ್ದ ಸ್ಟಾರ್ ನಟ!

ಸಿನಿಮಾ ನೋಡಿ ಕಳ್ಳತನ ಮಾಡಿದ, ಅಪಹರಣ ಮಾಡಿದ, ಕೊಲೆ ಮಾಡಿದ ಸಾಕಷ್ಟು ಪ್ರಕರಣಗಳು ಈಗಾಗಲೇ ಇವೆ. ಆದರೆ ಸಿನಿಮಾ ನಟನೊಬ್ಬ ತಾನೇ ಸಿನಿಮಾ ನೋಡಿ ಹತ್ಯೆಗೆ ಸ್ಕೆಚ್ ಹಾಕಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

2017ರಲ್ಲಿ ನಡೆದಿದ್ದ ಮಲಯಾಳಂ ಸ್ಟಾರ್ ನಟಿಯ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣದ ಆರೋಪಿಯಾಗಿರುವ ಮಲಯಾಳಂ ಸಿನಿಮಾಗಳ ಸ್ಟಾರ್ ನಟ ದಿಲೀಪ್, ಪೊಲೀಸ್ ಅಧಿಕಾರಿಯನ್ನು ಕೊಲ್ಲಲು ಸ್ಕೆಚ್‌ ರೂಪಿಸಿದ್ದಾಗಿ ಪೊಲೀಸ್ ಇಲಾಖೆ ಆರೋಪ ಹೊರಿಸಿದ್ದು, ಪೊಲೀಸ್ ಅಧಿಕಾರಿಯನ್ನು ಕೊಲ್ಲಲು ಸಿನಿಮಾದಿಂದಲೇ ದಿಲೀಪ್ ಹಾಗೂ ಅವನ ತಂಡ ಪ್ರೇರಣೆ ಪಡೆದಿತ್ತು ಎಂದು ಆರೋಪಿಸಿದೆ.

ಪೊಲೀಸ್ ಅಧಿಕಾರಿ ಡಿವೈಎಸ್‌ಪಿ ಬೈಜು ಫೌಲೋಸ್ ಅನ್ನು ಕೊಲ್ಲಲು ದಿಲೀಪ್ ಹಾಗೂ ಅವನ ಕೆಲವು ಸಹಚರರು ಯೋಜನೆ ಹಾಕಿದ್ದರು ಎಂಬ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆದು ನಿನ್ನೆಯಷ್ಟೆ ನಟ ದಿಲೀಪ್‌ಗೆ ಜಾಮೀನು ಮಂಜೂರಾಗಿದೆ ಆದರೆ ಇದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಕೇರಳ ಪೊಲೀಸ್ ಇಲಾಖೆ, ದಿಲೀಪ್ ಹಾಗೂ ಅವನ ಸಹಚರರು ಮಾಡಿದ್ದ ಹತ್ಯೆ ಸಂಚಿನ ಬಗ್ಗೆ ಮಾಧ್ಯಮಗಳೊಂದಿಗೂ ಮಾಹಿತಿ ಹಂಚಿಕೊಂಡಿದ್ದಾರೆ.

Actor Dileep Planned To Kill Police Officer Inspiring By Malayalam Movie The Truth
ಮಲಯಾಳಂನ ಸೂಪರ್ ಸ್ಟಾರ್ ನಟ ಮಮ್ಮುಟಿ ನಟಿಸಿರುವ 'ದಿ ಟ್ರುತ್' ಸಿನಿಮಾ ನೋಡಿ ಅದೇ ಮಾದರಿಯಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಕೊಲ್ಲಲು ದಿಲೀಪ್ ಹಾಗೂ ಅವನ ಗ್ಯಾಂಗ್ ಯೋಜನೆ ರೂಪಿಸಿದರಂತೆ. ತನಿಖಾಧಿಕಾರಿ ಬೈಜು ಫೌಲೋಸ್ ಅನ್ನು ಕೊಲ್ಲಲು ಮೂರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು ದಿಲೀಪ್‌ನ ಗ್ಯಾಂಗ್‌. ಬೈಜು ಫೌಲೋಸ್ ಅವರ ಊರು ಪದ್ಮಸರೋವರಂನ ಮನೆಯಲ್ಲಿದ್ದಾಗ ಅಲ್ಲಿಗೆ ದಾಳಿ ಮಾಡಿ ಕೊಲ್ಲುವುದು ಇಲ್ಲವಾದರೆ ಅಪಾರ್ಟ್‌ಮೆಂಟ್ ಹೋಗಿ ಬಂದೂಕಿನಿಂದ ಶೂಟ್ ಮಾಡುವುದು ಅಥವಾ ನಿರ್ಜನ ಪ್ರದೇಶದಲ್ಲಿ ಕಾರು ಚಲಾಯಿಸುತ್ತಿರುವಾಗ ಅಡ್ಡಗಟ್ಟಿ ಶೂಟ್ ಮಾಡುವುದು ಎಂದು ಗ್ಯಾಂಗ್ ಸ್ಕೆಚ್ ಹಾಕಿತಂತೆ. ಕೆಲವು ದಿನಗಳ ಕಾಲ ತನಿಖಾಧಿಕಾರಿ ಬೈಜು ಫೌಲೋಸ್ ಅವರನ್ನು ಫಾಲೋ ಸಹ ಮಾಡಿತ್ತಂತೆ ಈ ಗ್ಯಾಂಗ್. ಫಾಲೋ ಮಾಡಿದ ಬಗ್ಗೆ ವಿಡಿಯೋ ಸಾಕ್ಷಿಗಳನ್ನು ಒಟ್ಟು ಮಾಡುತ್ತಿದ್ದು ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ದಿಲೀಪ್‌ಗೆ ನೀಡಲಾಗಿರುವ ಜಾಮೀನು ರದ್ದು ಮಾಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಕೇರಳ ಪೊಲೀಸ್ ಇಲಾಖೆ.

ಮಲಯಾಳಂ ನಟಿಯ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಪಲ್ಸರ್ ಸುನಿ ಹಾಗೂ ಆತನ ಸಹಚರರನ್ನು 2017 ರಲ್ಲಿಯೇ ಬಂಧಿಸಿದ್ದರು. ಆದರೆ ನಟಿಯ ಅತ್ಯಾಚಾರ ಹಲ್ಲೆಗೆ ನಟ ದಿಲೀಪ್‌ ಆದೇಶ ನೀಡಿದ್ದ ಎಂಬ ಅಂಶ ಬಯಲಾದ ಬಳಿಕ ದಿಲೀಪ್ ಅನ್ನು ಬಂಧಿಸಲಾಯ್ತು. ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿ ಬೈಜು ಫೌಲೋಸ್ ಅವರಿಗೆ ಒಪ್ಪಿಸಲಾಗಿತ್ತು. ಇವರ ತನಿಖೆಯಿಂದ ಸಾಕಷ್ಟು ಅಂಶಗಳು ಹೊರಗೆ ಬಂದವು. ನಟಿಯ ಮೇಲೆ ಹಲ್ಲೆ ನಡೆಸಿದ, ದೌರ್ಜನ್ಯ ನಡೆಸಿದ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು ಆ ವಿಡಿಯೋವನ್ನು ದಿಲೀಪ್‌ಗೆ ನೀಡಲಾಗಿದೆ ಎಂದು ಎಂಬ ಅಂಶವೂ ಹೊರಗೆ ಬಂತು. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ದಿಲೀಪ್ ತಮಗೆ ಪಲ್ಸರ್ ಸುನಿಯ ಪರಿಚಯವೇ ಇಲ್ಲವೆಂದು ವಾದಿಸುತ್ತಲೇ ಬರುತ್ತಿದ್ದಾರೆ.

More from Filmibeat

English summary
Actor Dileep and his gang planed to kill police officer who investigated his case regarding assault on Malayalam actress happened in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X