Navya Nair: ನೇರವಾಗಿ ನನ್ನ ಜೊತೆ ನೀವು ಮಲಗುತ್ತೀರಾ ಕೇಳುತ್ತೇನೆ ಎಂದ ಮಲಯಾಳಂ ನಟ!
ಸೆಲೆಬ್ರಿಟಿಗಳು ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಆಡುವ ಮಾತುಗಳು ಮತ್ತು ನೀಡುವ ಹೇಳೆಕೆಗಳು ವಿವಾದಗಳನ್ನು ಹುಟ್ಟು ಹಾಕುವುದು ಮಾತ್ರವೇ ಅಲ್ಲದೇ, ಅದು ತೀವ್ರವಾದ ಚರ್ಚೆ ಹಾಗೂ ವಿಮರ್ಶೆಗಳಿಗೂ ಸಹಾ ಕಾರಣವಾಗುತ್ತವೆ. ಮಾತಿನ ಭರದಲ್ಲಿ ನಾಲಗೆ ಮೇಲಿನ ನಿಯಂತ್ರಣ ತಪ್ಪಿ ಸೆಲೆಬ್ರಿಟಿಗಳು ಆಡುವ ಮಾತುಗಳು ಅನಂತರ ಸಾರ್ವಜನಿಕರಿಂದಲೂ ಸಹಾ ಟೀಕೆಗೆ ಗುರಿಯಾಗುತ್ತವೆ. ಇಷ್ಟೆಲ್ಲಾ ಆದ ನಂತರ ಅವರು ಕ್ಷಮಾಪಣೆ ಕೇಳುವುದು ಅಥವಾ ಮಾದ್ಯಮಗಳು ನಮ್ಮ ಮಾತುಗಳನ್ನು ಬೇರೆ ರೀತಿಯಲ್ಲೇ ತಿರುಚಿವೆ ಎಂದು ಹೇಳಿ ಜಾರಿಕೊಳ್ಳುವುದು ನಡೆಯುತ್ತಲೇ ಇರುತ್ತದೆ.
ಪ್ರಸ್ತುತ ಅಂತದ್ದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಮಲೆಯಾಳಂ ನಟ. ಲೈಂಗಿಕ ಸಂಬಂಧದ ವಿಚಾರವಾಗಿ ಮಲೆಯಾಳಂ ನಟ ಆಡಿರುವ ಮಾತಿಗೆ ಇದೀಗ ವ್ಯಾಪಕವಾಗಿ ಸಿಟ್ಟು, ಅಸಮಾಧಾನಗಳು ವ್ಯಕ್ತವಾಗುತ್ತಿವೆ. ತಮಿಳಿನ ಸಿನಿಮಾಗಳಲ್ಲಿ ಈಗಾಗಲೇ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಮಲೆಯಾಳಂ ನಟ ವಿನಾಯಕನ್ ಮೀ ಟೂ ಅಭಿಯಾನವು ತನಗೆ ಅರ್ಥವಾಗಿಲ್ಲ ಎಂದು ಹೇಳುತ್ತಲೇ ವೇದಿಕೆಯ ಮೇಲೆ ಮನಸೋ ಇಚ್ಛೆ ನಾಲಗೆಯನ್ನು ಹರಿ ಬಿಟ್ಟಿದ್ದಾರೆ.
ಮಲೆಯಾಳಂ ನಟಿ ನವ್ಯಾ ನಾಯರ್ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಒರುತಿ ಸಿನಿಮಾದ ಪ್ರಚಾರದ ವೇಳೆ ಮಾತನಾಡುತ್ತಿದ್ದ ವಿನಾಯಕನ್, ನಾನು ಹತ್ತು ಜನ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುವಿರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಅವರು ಓಕೆ ಅಂದರೆ ಓಕೆ. ಇಲ್ಲವಾದರೆ ನಾನು ಅದನ್ನು ಅಲ್ಲೇ ಬಿಟ್ಟು ಬಿಡುತ್ತೇನೆ. ಆ ವಿಚಾರವಾಗಿ ನಾನು ಅವರಿಗೆ ಬಲವಂತವನ್ನು ಮಾಡುವುದಿಲ್ಲ ಎಂದಿದ್ದಾರೆ.

ಮಹಿಳೆಗೆ ಲೈಂಗಿಕತೆಯ ಬಗ್ಗೆ ಕೇಳುವುದು ಮೀ ಟೂ ಎನ್ನುವುದಾದರೆ , ನಾನು ಅದನ್ನು ಮುಂದುವರೆಸುತ್ತೇನೆ ಎಂದು ಅವರು ನಿರಾತಂಕವಾಗಿ ಹೇಳಿ ಮುಗಿಸಿದ್ದಾರೆ. ವಿನಾಯಕನ್ ಆಡಿದ ಮಾತುಗಳಿಗೆ ಮಲಯಾಳಂ ಚಿತ್ರರಂಗದ ಅನೇಕರು ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೇ ವಿನಾಯಕನ್ ಈ ರೀತಿ ಮಾತನಾಡುವಾಗ ವೇದಿಕೆಯ ಮೇಲಿದ್ದ ನವ್ಯಾ ನಾಯರ್ ಸುಮ್ಮನೆ ಇದ್ದುದ್ದಕ್ಕೆ ಸಹಾ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇದಾದ ನಂತರ ನಟಿ ನವ್ಯಾ ಆ ಕ್ಷಣದಲ್ಲಿ ನನಗೆ ಏನೂ ಹೇಳಲಾಗಲಿಲ್ಲ. ಆದರೆ ಅದನ್ನು ನಾನು ಖಂಡಿಸುತ್ತೇನೆ ಎನ್ನುವ ಮಾತು ಹೇಳಿದ್ದಾರೆ. ಮಲೆಯಾಳಂ ನಟ ಆಡಿರುವ ಮಾತಿಗೆ ಸದ್ಯ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


Click it and Unblock the Notifications











