"ಆಗ ನಂಗೆ 17 ವರ್ಷ ವಯಸ್ಸು.. ಆತ ಹೇಳ್ದಂಗೆ ಕೇಳ್ದೆ, ಅಪ್ಪ ನೋಡಿ ಬೇಸರಗೊಂಡಿದ್ರು"; ಅಮಲಾ ಪೌಲ್

ಮಲಯಾಳಂ ನಟಿ ಅಮಲಾ ಪೌಲ್ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮದುವೆ ಬಳಿಕ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ನಿರ್ದೇಶಕ ಎಲ್. ವಿಜಯ್ ಅವರನ್ನು ಮದುವೆ ಆಗಿ ಅಮಲಾ ಡಿವೋರ್ಸ್ ಪಡೆದಿದ್ದರು. ಬಳಿಕ ಉದ್ಯಮಿ ಜಗತ್ ದೇಸಾಯಿ ಕೈ ಹಿಡಿದರು.

ಅಮಲಾ- ಜಗತ್ ದಂಪತಿಗೆ ಒಬ್ಬ ಗಂಡು ಮಗ ಹುಟ್ಟಿದ್ದಾನೆ. ಮಗನ ಲಾಲನೆ ಪಾಲನೆ ಜೊತೆ ಜೊತೆಗೆ ಹೆಬ್ಬುಲಿ ನಟಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ದ್ವಿಜ' ಎಂಬ ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ. ನಟ-ನಟಿಯರು ಕೆಲವೊಮ್ಮೆ ತಮಗರಿವಿಲ್ಲದೇ ವಿವಾದಾತ್ಮಕ ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಆ ಬಳಿಕ ಅದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ನಟಿಯರು ಕೆಲವೊಮ್ಮೆ ಬೋಲ್ಡ್ ಆಗಿ ನಟಿಸಿ ಆ ಬಳಿಕ ನೋವು ತೊಡಿಕೊಂಡಿರುವುದು ಇದೆ.

Actress Amala paul recalls Sindhu Samaveli movie controversy

ನಟಿ ಅಮಲಾ ಪೌಲ್ ಕೂಡ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಟಿಸಿದ ಒಂದು ಸಿನಿಮಾ ಬಗ್ಗೆ ಇದೀಗ ಮೌನ ಮುರಿದಿದ್ದಾರೆ. ಅಂದು ಆ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ. ಆಗಿನ್ನು ನನಗೆ 17 ವರ್ಷ ವಯಸ್ಸು. ನಿರ್ದೇಶಕರು ಹೇಳಿದಂತೆ ಕೇಳಿದೆ. ಬಳಿಕ ತಪ್ಪಿನ ಅರಿವಾಯಿತು ಎಂದು ಮಾತೃಭೂಮಿ ಚಾನಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಆ ಸಿನಿಮಾ ಹೆಸರು 'ಸಿಂಧು ಸಮವೇಲಿ'.

ತಮಿಳಿನ 'ಸಿಂಧು ಸಮವೇಲಿ' ಚಿತ್ರದಲ್ಲಿ ಸಾಮಿ ಎಂಬುವವರು ಆಕ್ಷನ್ ಕಟ್ ಹೇಳಿದ್ದರು. ಹರೀಶ್ ಕಲ್ಯಾಣ್, ಗಜಿನಿ ಹಾಗೂ ಗಂಜಾ ಕರುಪ್ಪು ಚಿತ್ರದ ಮೂಖ್ಯಭೂಮಿಕೆಯಲ್ಲಿ ನಟಿಸಿದ್ದರು. ಮಾವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಸೊಸೆ ಸುಂದರಿ ಎಂಬ ಪಾತ್ರದಲ್ಲಿ ಅಮಲಾ ಪೌಲ್ ನಟಿಸಿದ್ದರು. ಪಾತ್ರಕ್ಕಾಗಿ ಕೊಂಚ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ 2 ಸರ್ಟಿಫಿಕೇಟ್ ಸಿಕ್ಕಿತ್ತು.

Actress Amala paul recalls Sindhu Samaveli movie controversy

ಚಿತ್ರ ಬಿಡುಗಡೆಯಾಗಿ ನೆಗೆಟಿವ್ ಕಾಮೆಂಟ್ ಬಂದಾಗ ಭಯವಾಗಿತ್ತು ಎಂದು ಅಮಲಾ ಪೌಲ್ ತಿಳಿಸಿದ್ದಾರೆ. ನಮ್ಮ ತಂದೆ ಕೂಡ ಸಿನಿಮಾ ನೋಡಿ ಬೇಸರಗೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ. ನಿರ್ದೇಶಕರು ಹೇಳಿದಂತೆ ಕೇಳಿ ನಟಿಸಿದ್ದೆ. ಆ ಪಾತ್ರ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

"ಆ ಸಿನಿಮಾ ಮಾಡಿದ ಬಳಿಕ ನಾನು ಅಂತಹ ಪಾತ್ರವನ್ನು ಮಾಡಬಾರದು, ಅದು ಕೆಟ್ಟದು ಅಥವಾ ನಮ್ಮ ಸಮಾಜವು ಒಪ್ಪುವುದಿಲ್ಲ, ಹೀಗೆ ನಾನು ಅದರಿಂದ ಪಾಠ ಕಲಿತೆ"ಎಂದು ಅಮಲಾ ಪೌಲ್ ತಿಳಿಸಿದ್ದಾರೆ. ಈ ಸಿನಿಮಾ ವಿವಾದ ಆಕೆಯ ವೃತ್ತಿ ಜೀವನದ ಮೇಲೆಯೂ ಪರಿಣಾಮ ಬೀರಿತು. ಅದೇ ವರ್ಷ ಆಕೆ ನಟಿಸಿದ 'ಮೈನಾ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಚಿತ್ರದ ಪ್ರಚಾರದಿಂದ ಆಕೆಯನ್ನು ದೂರ ಇಟ್ಟಿದ್ದರು.

'ಮೈನಾ' ಸಿನಿಮಾ ಬಳಿಕ ಮತ್ತೆ ಹಿಂತಿರುಗಿ ನೋಡಲಿಲ್ಲ. ಅಮಲಾ ಪೌಲ್ ಆ ಬಳಿಕ 'ಆಡೈ' ಎಂಬ ಚಿತ್ರದಲ್ಲಿ ಮತ್ತೆ ಬೋಲ್ಡ್ ಆಗಿ ನಟಿಸಿದ್ದರು. ಬೆತ್ತಲಾಗಿ ಕಾಣಿಸಿಕೊಂಡಂತೆ ತೆರೆಮೇಲೆ ಬಂದಿದ್ದರು. ಆ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. 'ಮೈನಾ' ಬಳಿಕ 'ತಲೈವಾ', ವಿಐಪಿ, ರಾಕ್ಷಸನ್, ಆಡು ಜೀವಿತಂ ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಮಲಾ ಪೌಲ್ ನಟಿಸಿದ್ದಾರೆ.

ಕನ್ನಡದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ 'ಹೆಬ್ಬುಲಿ' ಚಿತ್ರದಲ್ಲಿ ಮಿಂಚಿದ್ದರು. ಆಕೆ ನಟಿಸುತ್ತಿರುವ 'ದ್ವಿಜ' ಚಿತ್ರ ಕನ್ನಡಕ್ಕೂ ಡಬ್ ಆಗಿ ಬರಲಿದೆ. ಕಳೆದ ವರ್ಷ ಬಂದಿದ್ದ 'ಲೆವೆಲ್ ಕ್ರಾಸ್' ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿತ್ತು.

More from Filmibeat

English summary
Malayalam Actress Amala Paul reminisces about the controversy surrounding the film Sindhu Samaveli;
Read more about: amala paul mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X