For Quick Alerts
  ALLOW NOTIFICATIONS  
  For Daily Alerts

  ತಂದೆಯ ಸಾವು, ಅಮ್ಮನ ಸಂಕಟ ನೆನೆದು ಕಣ್ಣೀರಿಟ್ಟ 'ಹೆಬ್ಬುಲಿ' ನಟಿ ಅಮಲಾ ಪೌಲ್

  |

  ಕಿಚ್ಚ ಸುದೀಪ್ ಜತೆಗೆ 'ಹೆಬ್ಬುಲಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ಬಹುಭಾಷಾ ನಟಿ ಅಮಲಾ ಪೌಲ್, ಇತ್ತೀಚೆಗಷ್ಟೇ ಬಾಲಿವುಡ್ ಗಾಯಕನ ಜತೆಗೆ ಗುಟ್ಟಾಗಿ ಎರಡನೆಯ ಮದುವೆಯಾಗಿದ್ದರು. ಅದರ ಬಗ್ಗೆ ಅವರು ಯಾವುದೇ ವಿಚಾರಗಳನ್ನು ಹಂಚಿಕೊಂಡಿಲ್ಲ. ಆದರೆ ತಮ್ಮ ಖಾಸಗಿ ಬದುಕಿನ ಭಾವುಕ ಕಥೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ತೆರೆದಿಟ್ಟಿದ್ದಾರೆ.

  ಈ ವರ್ಷದ ಜನವರಿ 22 ಅಮಲಾ ಪೌಲ್ ಜೀವನದ ಕರಾಳ ದಿನ. ಅಂದು ತಮ್ಮ ತಂದೆ ಪೌಲ್ ವರ್ಗಿಸ್ ಅವರನ್ನು ಅಮಲಾ ಕ್ಯಾನ್ಸರ್‌ನಿಂದಾಗಿ ಕಳೆದುಕೊಂಡರು. ಈ ದುಃಖದಿಂದ ಹೊರಬರಲು ಅಮಲಾ ಬಹಳ ಕಷ್ಟಪಟ್ಟರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಮ್ಮ ಅನ್ನೈಸ್ ಪೌಲ್ ಜತೆಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿರುವ ಅಮಲಾ, ಅದರಲ್ಲಿ ಸುದೀರ್ಘವಾದ ಹಾಗೂ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಮುಂದೆ ಓದಿ...

  ಅಚ್ಚರಿಯ ಸುದ್ದಿ ನೀಡಿದ 'ಹೆಬ್ಬುಲಿ' ನಾಯಕಿ ಅಮಲಾ ಪೌಲ್ ಅಚ್ಚರಿಯ ಸುದ್ದಿ ನೀಡಿದ 'ಹೆಬ್ಬುಲಿ' ನಾಯಕಿ ಅಮಲಾ ಪೌಲ್

  ಜೀವನದ ಮತ್ತೊಂದು ದಿಕ್ಕು ಕಾಣಿಸಿತು

  ಜೀವನದ ಮತ್ತೊಂದು ದಿಕ್ಕು ಕಾಣಿಸಿತು

  ಅಪ್ಪನ ಸಾವಿನ ಬಳಿಕ ಖಿನ್ನತೆಯ ಕಾರಣದಿಂದ ನನ್ನನ್ನು ಹಾಗೂ ಅಮ್ಮನನ್ನು ಬಹುತೇಕ ಕಳೆದುಕೊಂಡಿದ್ದೆ ಎಂದು ಅಮಲಾ ಹೇಳಿಕೊಂಡಿದ್ದಾರೆ. ಪ್ರೀತಿ ಮತ್ತು ಆರೈಕೆಯ ಮೂಲಕ ತಾವಿಬ್ಬರೂ ಪರಿವರ್ತನೆಯಾಗಿ ಫೀನಿಕ್ಸ್‌ನಂತೆ ಹಾರಲು ಸಾಧ್ಯವಾಯಿತು. ಅಪ್ಪನನ್ನು ಕಳೆದುಕೊಂಡ ಕ್ಷಣ ಬದುಕಿನ ಮತ್ತೊಂದು ಮಗ್ಗುಲನ್ನು ತೋರಿಸಿತು ಎಂದು ತಿಳಿಸಿದ್ದಾರೆ.

  ಅಪ್ಪನನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದು...

  ಅಪ್ಪನನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದು...

  'ಪೋಷಕರನ್ನು ಕಳೆದುಕೊಳ್ಳುವುದು ನಿಜಕ್ಕೂ ವರ್ಣಿಸಲು ಸಾಧ್ಯವಾಗದ ಸಂಕಟ. ಅದು ಬದುಕಿನ ಅತಿ ದೊಡ್ಡ ಕುಸಿತ. ಈ ಸಂದರ್ಭದಲ್ಲಿ ನೀವು ನಮಗೆ ಅರಿವಿರದ ಕಗ್ಗತ್ತಲಿಗೆ ಒಳಗಾಗುತ್ತೀರಿ. ಚಿತ್ರ ವಿಚಿತ್ರವಾದ ಭಾವನೆಗಳಿಗೆ ಒಳಗಾಗುತ್ತೀರಿ. ಅಪ್ಪನನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡದ್ದು ನನ್ನ ಬದುಕಿಗೆ ಹೊಸ ದಿಕ್ಕು ನೀಡಿತು. ಅದರ ಬಳಿಕ ನಾನು ಅನೇಕ ಹೊಸ ಸಂಗತಿಗಳನ್ನು ಕಲಿತೆ' ಎಂದು ಹೇಳಿದ್ದಾರೆ.

  ಗಾಯಕನ ಜತೆಗೆ 'ಹೆಬ್ಬುಲಿ' ನಾಯಕಿ ಲಿವ್ ಇನ್ ರಿಲೇಷನ್‌ಷಿಪ್?ಗಾಯಕನ ಜತೆಗೆ 'ಹೆಬ್ಬುಲಿ' ನಾಯಕಿ ಲಿವ್ ಇನ್ ರಿಲೇಷನ್‌ಷಿಪ್?

  ಸಂಕೋಲೆಗಳ ನಡುವೆ ಬದುಕುತ್ತಿದ್ದೇವೆ

  ಸಂಕೋಲೆಗಳ ನಡುವೆ ಬದುಕುತ್ತಿದ್ದೇವೆ

  'ನಾವು ಬಹಳ ಸುಂದರವಾದ ದೊಡ್ಡ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಯಿನ್‌ನಿಂದ ಯಂಗ್‌ ಕಡೆಗೆ (ಕತ್ತಲಿನಿಂದ ಬೆಳಕಿಗೆ), ನಮ್ಮ ಪ್ರತಿ ನಡೆ ಮತ್ತು ಚಿಂತನೆಗಳನ್ನು ಸಾಮಾಜಿಕ ನೀತಿಗಳಿಂದ ರೂಪಿತವಾದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ತುಂಬಾ ಚಿಕ್ಕ ವಯಸ್ಸಿನಿಂದಲೇ ನಮಗೆ ಷರತ್ತುಗಳನ್ನು ಹಾಕಲಾಗುತ್ತದೆ. ಅನೇಕ ಸಂಕಟದ ಸಂದರ್ಭಗಳಲ್ಲಿಯೂ ಬಾಯಿಮುಚ್ಚಿಕೊಂಡಿರಬೇಕಾಗುತ್ತದೆ. ನಮ್ಮೊಳಗಿನ ಮಗುವನ್ನು ಪೆಟ್ಟಿಗೆಯೊಳಗೆ ಬಂಧಿಸಿಡಬೇಕಾಗುತ್ತದೆ.

  ನಮ್ಮ ಅರ್ಧ ಭಾಗವನ್ನು ಎಲ್ಲೋ ಹುಡುಕುತ್ತೇವೆ

  ದುರದೃಷ್ಟವಷಾತ್ ಇಲ್ಲಿ ನಮಗೆ ನಮ್ಮನ್ನು ಪ್ರೀತಿಸುವುದನ್ನು ಹೇಳಿಕೊಡುವುದಿಲ್ಲ. ಈ ಪೆಟ್ಟಿಗೆಗಳನ್ನು ತೆರೆದು ನಮ್ಮೊಳಗಿನ ಮಗುವಿಗೆ ಈ ಆಘಾತಗಳಿಂದ ಆರೈಕೆ ಮಾಡಲು ನಮಗೆ ಅವಕಾಶ ನೀಡುವುದಿಲ್ಲ. ನಾವು ಸಂಬಂಧದಿಂದ ಸಂಬಂಧಗಳಿಗೆ ಶಿಫ್ಟ್ ಆಗುತ್ತಿರುತ್ತೇವೆ. ಕಂಪೆನಿಗಾಗಿ ಹಂಬಲಿಸುತ್ತೇವೆ. ನಾವು ಕಳೆದುಕೊಂಡ 'ಅರ್ಧ' ಭಾಗವನ್ನು ಜನರಲ್ಲಿ, ವೃತ್ತಿಯಲ್ಲಿ, ವಸ್ತುಗಳಲ್ಲಿ, ಖುಷಿಕೊಡುವ ಸಂಗತಿಗಳಲ್ಲಿ, ಅನುಭವಗಳಲ್ಲಿ ಹುಡುಕುತ್ತೇವೆ. ಇದರ ಅರ್ಥ ನಾವು ನಮ್ಮನ್ನು ವಾಸ್ತವಗಳಿಂದ ತಪ್ಪಿಸಿಕೊಂಡು ಖಾಲಿಯಾಗುವುದಷ್ಟೇ.

  ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್

  ಹೊಸ ದಾರಿಯಲ್ಲಿ ನಡೆಯುತ್ತೇನೆ

  ಹೊಸ ದಾರಿಯಲ್ಲಿ ನಡೆಯುತ್ತೇನೆ

  ನಮ್ಮನ್ನು ನಾವು ಯಾವಾಗ ಸಂಪೂರ್ಣವಾಗಿ ಪ್ರೀತಿಸಲು ಆರಂಭಿಸುವುದನ್ನು, ಕತ್ತಲೆ, ಬೆಳಕು, ಒಳಿತು, ಕೆಡಕು, ಖುಷಿ, ಖಾಲಿತನ, ದೋಷ, ನೋವು, ಅಭದ್ರತೆ, ಭಯಗಳನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವುದನ್ನು ಕಲಿಯುತ್ತೇವೆ?. ನಿಜ. ನಾನು ಹೃದಯಪೂರ್ವಕವಾಗಿ ಇದನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ಹೆಚ್ಚು ಪಯಣಿಸದ ಹಾದಿಯಲ್ಲಿ ಧೈರ್ಯದಿಂದ ನಡೆಯಲು ನಿರ್ಧರಿಸಿದ್ದೇನೆ. ಇನ್ನು ಯಾವ ರೀತಿಯೂ ತಪ್ಪಿಸಿಕೊಳ್ಳುವುದಿಲ್ಲ.

  ತಾಯಂದಿರ ತ್ಯಾಗ ಮರೆತಿದ್ದೇವೆ

  ತಾಯಂದಿರ ತ್ಯಾಗ ಮರೆತಿದ್ದೇವೆ

  ಎಲ್ಲಕ್ಕಿಂತ ಮುಖ್ಯವಾಗಿ- ತಮ್ಮ ಕುಟುಂಬದಷ್ಟೇ ತಾವೂ ಮುಖ್ಯ ಎಂಬುದನ್ನು ಮರೆತ ಮಹಿಳೆಯರನ್ನು ನೋಡುತ್ತಾ ನಾವು ಬೆಳೆದಿದ್ದೇವೆ. ನಮ್ಮ ತಾಯಂದಿರು! ನಿಜಕ್ಕೂ ಅವರು ತಮ್ಮನ್ನು ತಾವು ಪ್ರೀತಿಸುವುದನ್ನು ಮರೆತಿದ್ದಾರೆ. ಅವರು ತಮ್ಮ ಇಡೀ ಜೀವನವನ್ನು ಗಂಡ, ಮಕ್ಕಳು, ಕುಟುಂಬದ ಕಾಳಜಿ ಮಾಡಲು ಮುಡಿಪಾಗಿಡುತ್ತಿದ್ದಾರೆ. ತಮಗಾಗಿ ತಾವು ಏನಾದರೂ ಮಾಡಿಕೊಳ್ಳಲು ಒಮ್ಮೆಯೂ ಅವರು ಯೋಚಿಸಿದ್ದಿಲ್ಲ.

  ಅವರನ್ನು ಅವರು ಪ್ರೀತಿಸಬೇಕು

  ಅವರನ್ನು ಅವರು ಪ್ರೀತಿಸಬೇಕು

  ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಕಳೆದುಕೊಳ್ಳುವ ಮೊದಲು ಅವರ ಒಳಗಿನ ತಮ್ಮತನವನ್ನು ಪೋಷಿಸುವುದನ್ನು ಮತ್ತು ಪ್ರೀತಿಸುವುದರ ಬಗ್ಗೆ ಅವರಿಗೆ ಅರ್ಥ ಮಾಡಿಸುವುದು ಹಾಗೂ ಕಲಿಸುವುದು ನಮ್ಮ ಜವಾಬ್ದಾರಿ. ನಾನು ಬಹುತೇಕ ನನ್ನನ್ನು ಮತ್ತು ನನ್ನ ಅಮ್ಮನನ್ನು ಖಿನ್ನತೆಯ ಕಾರಣದಿಂದ ಕಳೆದುಕೊಂಡಿದ್ದೆ. ಆದರೆ ಪ್ರೀತಿ ಮತ್ತು ಆರೈಕೆಯ ಮೂಲಕ ಬದಲಾಗಿ ಫೀನಿಕ್ಸ್‌ನಂತೆ ಹಾರಾಡಲು ಆರಂಭಿಸಿದ್ದೇವೆ ಎಂದು ಬರೆದಿದ್ದಾರೆ.

  English summary
  Actress Amala Paul has shared an emotional note in Instagram, a tough time she has faced after her father's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X