Subbalakshmi: ಮಲಯಾಳಂ ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ (87) ನಿಧನ

ಹಲವಾರು ಚಲನಚಿತ್ರಗಳಲ್ಲಿ ಅಜ್ಜಿಯ ಪಾತ್ರವನ್ನು ನಿರ್ವಹಿಸಿ ಜನಪ್ರಿಯರಾಗಿದ್ದ ಹಿರಿಯ ನಟಿ ಮತ್ತು ಸಂಗೀತಗಾರ್ತಿ ಆರ್.ಸುಬ್ಬಲಕ್ಷ್ಮಿ ಗುರುವಾರ ತಿರುವನಂತಪುರದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲ್ಯದಿಂದಲೂ ಮನರಂಜನಾ ಕ್ಷೇತ್ರದಲ್ಲಿದ್ದ ಅವರು ಆಲ್ ಇಂಡಿಯಾ ರೇಡಿಯೊ (AIR) ಗೆ ಸೇರಿದ್ದರು. ಮತ್ತು ಆಲ್ ಇಂಡಿಯಾ ರೇಡಿಯೊನಿಂದ ನಿವೃತ್ತಿಯ ನಂತರ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ಕರ್ನಾಟಿಕ್ ಗಾಯಕಿ ಮತ್ತು ಸಂಗೀತ ಸಂಯೋಜಕಿಯಾಗಿದ್ದ ಆರ್.ಸುಬ್ಬಲಕ್ಷ್ಮಿ ಅವರು ಪೃಥ್ವಿರಾಜ್ ಅಭಿನಯದ ನಂದನಂ ಚಿತ್ರದ ಮೂಲಕ ತಡವಾಗಿ ಚಲನಚಿತ್ರಗಳಿಗೆ ಪ್ರವೇಶಿಸಿದರು.

Actress and musician Subbalakshmi (87) passes away

ಹಾರ್ಲಿಕ್ಸ್ ಜಾಹೀರಾತು ಹಿಟ್ ಆದ ನಂತರ ಅವರಿಗೆ 'ನಂದನಂ' ಸಿನಿಮಾದಲ್ಲಿ ಅವರಿಗೆ ಪಾತ್ರ ದೊರಕಿತ್ತು. ಇದಾದ ನಂತರ ಕಲ್ಯಾಣರಾಮನ್, ರಪ್ಪಕಲ್, ತಿಲಕ್ಕಂ, ಸಿಐಡಿ ಮೂಸಾ, ಪಾಂಡಿಪ್ಪಡಾ, ರಾಣಿ ಪದ್ಮಿನಿ ಮತ್ತು ಇನ್ನೂ ಅನೇಕ ಹಿಟ್‌ ಸಿನಿಮಾಗಳ ಮೂಲಕ ಅವರು ಖ್ಯಾತಿ ಪಡೆದರು.

ಆರ್.ಸುಬ್ಬಲಕ್ಷ್ಮಿ ಅವರು ಹಲವಾರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಗೌತಮ್ ಮೆನನ್ ಅವರ ವಿನೈತಾಂಡಿ ವರುವಾಯಾ ಚಿತ್ರದಲ್ಲಿನ ಪಾತ್ರಕ್ಕಾಗಿ ಮತ್ತು ಅಮ್ಮನಿಯಲ್ಲಿ ಪಾತ್ರಗಳು ಜನಪ್ರಿಯವಾದವು. ಇತ್ತೀಚಿನ ವಿಜಯ್ ಅಭಿನಯದ ತಮಿಳು ಚಿತ್ರ ಬೀಸ್ಟ್ ನಲ್ಲಿಯೂ ಅವರು ನಟಿಸಿದ್ದರು.

ಇದಲ್ಲದೇ ಹಿಂದಿ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಏಕ್ ದೀವಾನಾ ಥಾ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಜ್ಜಿಯಾಗಿ ದಿಲ್ ಬೇಚಾರಾ ಸಿನಿಮಾದಲ್ಲಿ ನಟಿಸಿದ್ದಾರೆ. ಎರಡು ದಶಕಗಳ ಕಾಲ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿ ಯಶಸ್ಸು ಪಡೆದ ಅವರು, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ.

ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಸುಬ್ಬಲಕ್ಷ್ಮಿ ಕಿರುತೆರೆ ನಟಿಯೂ ಆಗಿದ್ದರು. ಆರ್.ಸುಬ್ಬಲಕ್ಷ್ಮಿ ಅವರು ನಟ ಮತ್ತು ನೃತ್ಯಗಾರ್ತಿ ತಾರಾ ಕಲ್ಯಾಣ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.

More from Filmibeat

English summary
Actress Subbalakshmi passes away.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X