ಬೆತ್ತಲೆ ಚಿತ್ರ ಹಂಚಿಕೊಂಡ 'ನಟಸಾರ್ವಭೌಮ' ನಟಿ: ಭೇಷ್ ಎಂದ ನೆಟ್ಟಿಗರು
ಪುನೀತ್ ರಾಜ್‌ಕುಮಾರ್ ಜೊತೆಗೆ 'ನಟಸಾರ್ವಭೌಮ' ಸಿನಿಮಾದಲ್ಲಿ ನಟಿಸಿರುವ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಚಿತ್ರ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿವಸ್ತವಾಗಿರುವ ಮಹಿಳೆಯ ಚಿತ್ರ ಹಂಚಿಕೊಂಡಿರುವ ಅನುಪಮಾ, ಮತ್ತೊಂದು ಚಿತ್ರದಲ್ಲಿ ಮಹಿಳೆಯರು ಯಾವ-ಯಾವ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದ ಪ್ರಶ್ನೆಗಳನ್ನು ಸಹ ಹಂಚಿಕೊಂಡಿದ್ದಾರೆ.
'ದಪ್ಪಗಿದ್ದೀಯ', 'ಜೀರೋ ಸೈಜ್ ಯಾಕಿಲ್ಲ', 'ಸ್ತನ ಜೋತು ಬಿದ್ದಿದೆ ಏಕೆ?', 'ಸೊಂಟದ ಸುತ್ತಳತೆ ಹೆಚ್ಚಾಗಿದೆ' ಇನ್ನಿತರ ಪ್ರಶ್ನೆಗಳು ಅನುಪಮಾ ಹಂಚಿಕೊಂಡಿರುವ ಚಿತ್ರದಲ್ಲಿದೆ. ಎರಡೂ ಚಿತ್ರಗಳನ್ನು ಹೋಲಿಕೆ ಮಾಡಿರುವ ಅನುಪಮಾ, ಈ ರೀತಿಯ ಲಿಂಗಭೇದಗಳಿಗೆ ತಾನು ವಿರುದ್ಧ ಎಂದು ಸಾರಿ ಹೇಳಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡಿರುವ ಅನುಪಮಾ ಧೈರ್ಯಕ್ಕೆ ಮತ್ತು
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅನುಪಮಾ ಪರಮೇಶ್ವರನ್ ಆಗಾಗ್ಗೆ ತಮ್ಮ ಚಿಚತ್ರಗಳು, ವಿಡಿಯೋಗಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿಶೇಷವಾಗಿ ಮಹಿಳೆಯರ ಬಗ್ಗೆ ಪುರುಷರ ಧೋರಣೆಗಳನ್ನು ಪ್ರಶ್ನಿಸುತ್ತಿರುತ್ತಾರೆ.
Recommended Video
ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಐದು ವರ್ಷದಲ್ಲಿ ಹದಿನೈದು ಸಿನಿಮಾಗಳಲ್ಲಿ ನಟಿಸಿರುವ ಅನುಪಮಾ, ಪ್ರಸ್ತುತ ತಮಿಳಿನ 'ತಲ್ಲಿ ಪೋಗತ್ತಾಯ್' ಮತ್ತು ತೆಲುಗಿನ '18 ಪೇಜಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











