ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಿ ನಟಿ ಮೈಕೈ ಮುಟ್ಟಿದ ಯುವಕ: ಕಿಡಿಕಾರಿದ ಮಂಜಿಮಾ ಮೋಹನ್!

'ಸೂರೈರೆ ಪೋಟ್ರು' ಓಟಿಟಿಯಲ್ಲಿ ಬಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾ. ಸೂರ್ಯ, ಅಪರ್ಣಾ ಬಾಲಮುರಳಿ ನಟಿಸಿದ ಈ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿಯೂ ಸಿಕ್ಕಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅಪರ್ಣಾಗೂ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿತ್ತು. ನಟಿ ಅನುಪಮಾಗೆ ಕಾರ್ಯಕ್ರಮವೊಂದರಲ್ಲು ಕಹಿ ಅನುಭವ ಆಗಿದೆ. ಯುವಕನೊಬ್ಬ ನಟಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

'ತಾಕಂ' ಸಿನಿಮಾ ಪ್ರಮೋಷನ್ ಭಾಗವಾಗಿ ನಟಿ ಅಪರ್ಣಾ ಬಾಲಮುರಳಿ ಕಾಲೇಜು ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಯುವಕನೊಬ್ಬ ಏಕಾಏಕಿ ವೇದಿಕೆ ಏರಿದ ಯುವಕ ನಟಿಗೆ ಹೂ ಕೊಟ್ಟು ಕೈಕುಲುಕಿದ್ದಾನೆ. ನಂತರ ಕೈ ಹಿಡಿದೆಳೆದು ಫೋಟೊಗೆ ಪೋಸ್ ಕೊಡಲು ಹೋಗಿದ್ದಾನೆ. ನಂತರ ಭುಜದ ಮೇಲೆ ಕೈ ಹಾಕಿ ಒತ್ತಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಅಪರ್ಣಾ ಕಷ್ಟಪಟ್ಟಿದ್ದಾರೆ. ಆತನ ವರ್ತನೆಯಿಂದ ಕಸಿವಿಸಿಕೊಂಡಿದ್ದಾರೆ. ನಂತರ ಆತ ತಪ್ಪಾಯ್ತು ಎನ್ನುವಂತೆ ಕೈ ಮುಗಿದು ಹೋಗಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನೆಟ್ಟಿಗರು ಯುವಕನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎದುರಿಗೆ ಇರುವವರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲವೇ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ವೇದಿಕೆಯಲ್ಲಿ ಚಿತ್ರದ ನಿರ್ದೇಶಕ ಪ್ರಿನಿಷ್ ಪ್ರಭಾಕರನ್, ಹೀರೊ ವಿನೀಶ್ ಶ್ರೀನಿವಾಸನ್ ಕೂಡ ಇದ್ದರು. ಆದರೆ ಯಾರೊಬ್ಬರು ಕೂಡ ಆತನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಷ್ಟೆಲ್ಲಾ ಆದರೂ ಕಾಲೇಜು ಆಡಳಿತ ಮಂಡಳಿ ಏನು ಮಾಡುತ್ತಿತ್ತು ಎಂದು ಕೆಲವರು ಕೇಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ನಟಿ ಅಪರ್ಣಾ ಘಟನೆ ಬಗ್ಗೆ ಮೌನ ವಹಿಸಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actress Aparna Balamurali Harassed By a Student: Actress manjima Mohan responds

ಘಟನೆ ಬಗ್ಗೆ ಮಲಯಾಳಂನ ಮತ್ತೊಬ್ಬ ನಟಿ ಮಂಜಿಮಾ ಮೋಹನ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಪೋಸ್ಟ್‌ವೊಂದನ್ನು ಶೇರ್ ಮಾಡಿ ಪೋಸ್ಟ್ ಮಾಡಿರುವ ಮಂಜಿಮಾ, "ನಂಬಲು ಸಾಧ್ಯವಾಗುತ್ತಿಲ್ಲ, ಅಸಹ್ಯಕರ" ಬರೆದಿದ್ದಾರೆ.

ಮಲಯಾಳಂ ನಟಿ ಅಪರ್ಣಾ ಬಾಲಮುರಳಿ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ಲಾಸಿಕಲ್ ಡ್ಯಾನ್ಸ್ ಕಲಿತಿರುವ ಚೆಲುವೆ ಒಳ್ಳೆ ಗಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. 'ಸುರರೈ ಪೊಟ್ರು' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದರು. ಈಕೆಯ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಗೌರವ (ತೀರ್ಪುಗಾರ ವಿಶೇಷ) ಸಿಕ್ಕಿತ್ತು.

More from Filmibeat

English summary
ವೇದಿಕೆ ಮೇಲೆಯೇ 'ಸೂರರೈ ಪೊಟ್ರು' ನಟಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿ; ವಿಡಿಯೊ ವೈರಲ್!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X