ಆ ನಟಿಯಿಂದಾಗಿ ಸಾಲು-ಸಾಲು ಸಿನಿಮಾಗಳು ಕೈತಪ್ಪಿದ್ದವಂತೆ ನಟಿ ಕಾವೇರಿಗೆ

ಸಂಭ್ರಮ, ರಾಮಕೃಷ್ಣ, ಚೈತ್ರದ ಚಿಗುರು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಕಾವೇರಿ ಅಲಿಯಾಸ್ ಕಲ್ಯಾಣಿಯನ್ನು ಹೆಚ್ಚಿನ ಜನ ಮರೆತಿಲ್ಲ. ಮರೆಯುವಂತಹಾ ಸೌಂದರ್ಯವೂ ಅವರದ್ದಲ್ಲ.

Recommended Video

'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ | FILMIBEAT KANNADA

ಮಲೆಯಾಳಂ ಸಿನಿಮಾದಿಂದ ಅಭಿನಯ ಆರಂಭಿಸಿದ ಕಾವೇರಿ ಅಲಿಯಾಸ್ ಕಲ್ಯಾಣಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿಯೂ ಅಭಿನಯಿಸಿದರು. ಕೌಂಬಿಕ ಸಿನಿಮಾಗಳಿಗೆ ಅವರೇ ಮೊದಲ ಆಯ್ಕೆ ಆಗಿದ್ದ ಕಾಲವೊಂದಿತ್ತು.

ಮೊದಲ ಸಿನಿಮಾದಲ್ಲಿಯೇ ಮುಮ್ಮುಟಿಯೊಂದಿಗೆ ನಟಿಸಿದ್ದ ಕಾವೇರಿ, ರವಿತೇಜಾ, ಜಗಪತಿ ಬಾಬು, ರವಿಚಂದ್ರನ್, ರಮೇಶ್ ಅರವಿಂದ ಹಲವರೊಂದಿಗೆ ನಟಿಸಿ ಸೈ ಎನಿಸಿಕೊಂಡರು. ಆದರೆ ಸಿನಿಮಾ ಯಾನದ ಆರಂಭದಲ್ಲಿಯೇ ನಟಿಯೊಬ್ಬರಿಂದಾಗಿ ಸಾಲು-ಸಾಲು ಸಿನಿಮಾಗಳು ಇವರ ಕೈ ತಪ್ಪಿದವಂತೆ.

ಆರಂಭದಲ್ಲಿಯೇ ಸಿನಿಮಾಗಳನ್ನು ಕಳೆದುಕೊಂಡ ನಟಿ

ಆರಂಭದಲ್ಲಿಯೇ ಸಿನಿಮಾಗಳನ್ನು ಕಳೆದುಕೊಂಡ ನಟಿ

ಕಾವೇರಿ ಅವರು ಸಿನಿಮಾ ರಂಗ ಪ್ರವೇಶಿಸಿದ ಮೊದಲಲ್ಲೇ ನಾಯಕ ನಟಿಯೊಬ್ಬರಿಂದಾಗಿ ಸಾಲು-ಸಾಲು ಸಿನಿಮಾಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಹೀಗಾಗಲು ಕಾರಣವೇನೆಂದು ಅವರೇ ವಿವರಿಸಿದ್ದಾರೆ.

ಮುಮ್ಮುಟಿ ಜೊತೆ ಮೊದಲ ಸಿನಿಮಾ

ಮುಮ್ಮುಟಿ ಜೊತೆ ಮೊದಲ ಸಿನಿಮಾ

ಮುಮ್ಮುಟಿಯೊಂದಿಗೆ ಮೊದಲ ಸಿನಿಮಾ ಮಾಡಿದ ನಂತರ ಸಾಕಷ್ಟು ಅವಕಾಶಗಳು ಬಂದವು, ನನ್ನ ಸಿನಿ ಜೀವನ ದೊಡ್ಡದಾಗಿ ಆರಂಭವಾಯಿತೆಂದು ಖುಷಿಯಲ್ಲಿದ್ದೆ. ಸತತವಾಗಿ ಎರಡು ಸಿನಿಮಾಗಳ ಕತೆ ಕೇಳಿ ಓಕೆ ಎಂದಿದ್ದೆ, ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಉತ್ಸಾಹದಲ್ಲಿದ್ದೆ ಆದರೆ ಸಿನಿಮಾಗಳು ಕೈ ತಪ್ಪಿದವು ಎಂದು ಕಾವೇರಿ ಹೇಳಿಕೊಂಡಿದ್ದಾರೆ.

ನಟಿ ದಿವ್ಯಾ ಉನ್ನಿ ಪಾಲಾಗಿತ್ತಂತೆ

ನಟಿ ದಿವ್ಯಾ ಉನ್ನಿ ಪಾಲಾಗಿತ್ತಂತೆ

ಎರಡೂ ಸಿನಿಮಾಗಳು ಆಗಿನ ಮತ್ತೊಬ್ಬ ಖ್ಯಾತ ಮಲೆಯಾಳಂ ನಟಿ ದಿವ್ಯಾ ಉನ್ನಿ ಅವರ ಪಾಲಾದವು. ನಂತರ ಒಪ್ಪಿಕೊಂಡಿದ್ದ ಮತ್ತೊಂದು ಸಿನಿಮಾ ಕಾವ್ಯಾ ಮಾಧವನ್ ಪಾಲಾಯಿತಂತೆ. ತನಗೆ ಬಂದ ಅವಕಾಶಗಳು ದಿವ್ಯಾ ಪಾಲಾಗುತ್ತಿದುದ್ದಕ್ಕೆ ತೀವ್ರ ಬೇಸರವಾಗಿತ್ತಂತೆ ಕಾವೇರಿಗೆ.

ಸಿನಿಮಾ ಉದ್ಯಮ ಅರ್ಥವೇ ಆಗಿರಲಿಲ್ಲವಂತೆ

ಸಿನಿಮಾ ಉದ್ಯಮ ಅರ್ಥವೇ ಆಗಿರಲಿಲ್ಲವಂತೆ

ಆಗೆಲ್ಲಾ ನಾಯಕಿಯರಿಗೆ ಸಿನಿಮಾ ತಂದು ಕೊಡಲೆಂದೇ ತಂಡಗಳು (ಪಿಆರ್‌ ಟೀಮ್) ಇರುತ್ತಿತ್ತು, ಆದರೆ ಅದು ನನಗೆ ಇರಲಿಲ್ಲ. ಹಾಗೊಂದು ತಂಡ ಇರಬೇಕೆಂಬ ಅರಿವೂ ಸಹ ನನಗೆ ಇರಲಿಲ್ಲ. ಹಾಗಾಗಿ ಸಾಕಷ್ಟು ಅವಕಾಶಗಳನ್ನು ನಾನು ಕಳೆದುಕೊಂಡೆ ಎಂದಿದ್ದಾರೆ.

More from Filmibeat

English summary
Actress Kaveri or Kalyani missed many movies in the initial stage of her carrier.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X