'ಗಜ' ಸಿನಿಮಾದ ನಾಯಕಿ ಈಗ ಹೇಗಿದ್ದಾರೆ, ಏನ್ಮಾಡ್ತಿದ್ದಾರೆ? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

ಚಾಲೆಂಜಿಂಗ್ ದರ್ಶನ್ ಅಭಿನಯದ 'ಗಜ' ಸಿನಿಮಾದ ನಾಯಕಿ ನವ್ಯಾ ನಾಯರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯನಾ? ಮುದ್ದು ಮುಖದ ಸುಂದರ ಚೆಲುವೆ ಮುದ್ದಾದ ಅಭಿನಯದ ಮೂಲಕ ಕನ್ನಡ ಚಿತ್ರಪ್ರಿಯರ ಮನಗೆದ್ದಿದ್ದರು. 'ಗಜ' ಸಿನಿಮಾ ನೋಡಿದ ಪ್ರೇಕ್ಷಕರು ನವ್ಯಾ, ದರ್ಶನ್ ಗೆ ಆನ್ ಸ್ಕ್ರೀನ್ ಪರ್ಫೆಕ್ಟ್ ಜೋಡಿ ಎನ್ನುತ್ತಿದ್ದರು

Recommended Video

'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

ಮೊದಲ ಸಿನಿಮಾದಲ್ಲಿಯೇ ಕನ್ನಡಿಗರ ನಿದ್ದೆ ಕದ್ದಿದ್ದ ನವ್ಯಾ ಆ ನಂತರ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ವರ್ಷಗಳ ಬಳಿಕ ಎರಡು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ರು ಸಹ ಗಜಾ ಸಿನಿಮಾ ತಂದುಕೊಟ್ಟ ಖ್ಯಾತಿ ಸಿಗಲಿಲ್ಲ. ಮಲಯಾಳಂನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನವ್ಯಾ ಕನ್ನಡದ ದೃಶ್ಯ ಸಿನಿಮಾ ಮತ್ತೆ ವಾಪಸ್ ಆಗುತ್ತಾರೆ. ದೃಶ್ಯ ಸಿನಿಮಾ ನಂತರ ಮತ್ತೆ ಮಾಯವಾಗಿದ್ದ ನಟಿ ಈಗ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅದೂ ಪುತ್ರನ ಜೊತೆ ಎನ್ನುವುದು ವಿಶೇಷ ಮುಂದೆ ಓದಿ..

ಮಲಯಾಳಂ ನಟಿ ನವ್ಯಾ ನಾಯರ್

ಮಲಯಾಳಂ ನಟಿ ನವ್ಯಾ ನಾಯರ್

ಮಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ಸದ್ಯ ದೀರ್ಘಕಾಲದ ಬ್ರೇಕ್ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ. 2001ರಲ್ಲಿ ಇಷ್ಟಂ ಸಿನಿಮಾ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ನವ್ಯಾ ಆನಂತರ ಹಿಂದೆ ತಿರುಗಿ ನೋಡಲೆ ಇಲ್ಲ. ಮಲಯಾಳಂನ ಸ್ಟಾರ್ ನಟರ ಜೊತೆ ಅಭಿನಯಿಸುತ್ತ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ನವ್ಯಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಮಿಳು ಮತ್ತು ಕನ್ನಡದಲ್ಲಿ ಅಭಿನಯ

ತಮಿಳು ಮತ್ತು ಕನ್ನಡದಲ್ಲಿ ಅಭಿನಯ

ನವ್ಯಾ ಮಲಯಾಳಂನಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಾರೆ. ಆನಂತರ 2007ರಲ್ಲಿ ನವ್ಯಾ ಗಜ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಗಜ ಸಿನಿಮಾ ನವ್ಯಾಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡುತ್ತೆ. ನವ್ಯಾ ಕನ್ನಡ ಸಿನಿಪ್ರಿಯರ ನೆಚ್ಚಿನ ಗುರುತಿಸಿಕೊಳ್ಳುತ್ತಾರೆ. ಗಜ ನಂತರ ನಮ್ ಯಜಮಾನ್ರು, ಭಾಗ್ಯದ ಬಳೆಗಾರ, ಬಾಸ್ ಮತ್ತು ದೃಶ್ಯ ಸಿನಿಮಾಗಳಲ್ಲಿ ಮಿಂಚಿದ್ದಾರೆ.

2019ರಲ್ಲಿ ಮದುವೆ

2019ರಲ್ಲಿ ಮದುವೆ

ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ನವ್ಯಾ ಮದುವೆ ಗುವ ನಿರ್ಧಾರ ಮಾಡುತ್ತಾರೆ. 2010ರಲ್ಲಿ ಹಸೆಮಣೆ ಏರಿದ ನವ್ಯಾ ಆ ನಂತರ 2 ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ. ವಿರಾಮದ ಬಳಿಕ ಮತ್ತೆ 2012ರಲ್ಲಿ ವಾಪಸ್ ಆಗುತ್ತಾರೆ. 2013ರಲ್ಲಿ ಕನ್ನಡದ ದೃಶ್ಯ ಸಿನಿಮಾದ ಮೂಲಕ ಮತ್ತೆ ಕನ್ನಡದಲ್ಲಿಯೂ ಸದ್ದು ಮಾಡುತ್ತಾರೆ.

ದೃಶ್ಯ ಸಿನಿಮಾ ನಂತರ ಮತ್ತೆ ಬಣ್ಣಹಚ್ಚಿಲ್ಲ

ದೃಶ್ಯ ಸಿನಿಮಾ ನಂತರ ಮತ್ತೆ ಬಣ್ಣಹಚ್ಚಿಲ್ಲ

ಮಲಯಾಳಂನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನವ್ಯಾ ಕನ್ನಡದ ದೃಶ್ಯ ಸಿನಿಮಾ ನಂತರ ಮತ್ತೆ ಬಣ್ಣ ಹಚ್ಚಿಲ್ಲ. ಚಿಕ್ಕ ಗ್ಯಾಪ್ ಬಳಿಕ ದೃಶ್ಯ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನವ್ಯಾಗೆ, ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ನೀಡಿದೆ. ನವ್ಯಾಗೆ ಇದು ಒಂದೊಳ್ಳೆ ಕಮ್ ಬ್ಯಾಕ್ ಕೂಡ ಆಗಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಪತ್ನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನವ್ಯಾ ಪತಿ ಯಾರು?

ನವ್ಯಾ ಪತಿ ಯಾರು?

ನವ್ಯಾ ನಯ್ಯರ್ ಚಿತ್ರರಂಗದಲ್ಲಿ ಬಹುಬೇಡಿಕೆ ಇರುವಾಗಲೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ನವ್ಯಾ ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ ಜೊತೆ 2010 ಜನವರಿಯಲ್ಲಿ ಸಪ್ತಪದಿ ತುಳಿಯುತ್ತಾರೆ. ಅದೆ ವರ್ಷ ನವ್ಯಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಮಗನಿಗೆ ಸಾಯಿ ಕೃಷ್ಣ ಎಂದು ನಾಮಕರಣ ಮಾಡಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವ್ಯಾ ನಾಯರ್ ಪುತ್ರ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವ್ಯಾ ನಾಯರ್ ಪುತ್ರ

ನಟಿ ನವ್ಯಾ ಪುತ್ರ ಸಾಯಿ ಕೃಷ್ಣಗೆ ಈಗ 10 ವರ್ಷ. ಅಮ್ಮನಂತೆ ಮಗ ಕೂಡ ಬಣ್ಣದ ಲೋಕದಲ್ಲಿ ಸ್ಟಾರ್ ಆಗಿ ಮೆರೆಯುವ ಕನಸು ಕಾಣುತ್ತಿದ್ದಾರೆ. ಈಗಾಗಲೆ ಸಾಯಿ ಕೃಷ್ಣ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಟನಾಗಿ ಅಲ್ಲ, ಡಬ್ಬಿಂಗ್ ಕಲಾವಿದನಾಗಿ. ಹೌದು, ಸಾಯಿ ಕೃಷ್ಣ ಮೊದಲ ಬಾರಿಗೆ ಸಿನಿಮಾದಲ್ಲಿ ವಾಯ್ಸ್ ನೀಡುತ್ತಿದ್ದಾರೆ.

6 ವರ್ಷಗಳ ಬಳಿಕ ಮತ್ತೆ ಬಣ್ಣಹಚ್ಚಿದ ನವ್ಯಾ

6 ವರ್ಷಗಳ ಬಳಿಕ ಮತ್ತೆ ಬಣ್ಣಹಚ್ಚಿದ ನವ್ಯಾ

ದೃಶ್ಯ ಸಿನಿಮಾದ ನಂತರ ಬಣ್ಣದ ಲೋಕದಿಂದ ದೂರ ಸರಿದಿದ್ದ ನವ್ಯಾ ಮತ್ತೆ ವಾಪಸ್ ಆಗಿದ್ದಾರೆ. 6 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ಮಲಯಾಳಂನ 'ಒರುತಿ' ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ರಿಲೀಸ್ ಗೆ ಎದುರು ನೋಡುತ್ತಿದೆ. ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಚಿತ್ರದಲ್ಲಿ ನವ್ಯಾ ಪುತ್ರನ ಪಾತ್ರಕ್ಕೆ ಸಾಯಿ ಕೃಷ್ಣ ಧ್ವನಿ ನೀಡಿದ್ದಾರೆ.

More from Filmibeat

English summary
Malayala famous Actress Navya Nair son steps into cinema. Navya has comeback with oruthee film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X