ಚಿರು ಸರ್ಜಾ-ಮೇಘನಾ ರಾಜ್ ಜೊತೆಗಿನ ಸಂತಸದ ಕ್ಷಣ ಹಂಚಿಕೊಂಡ ಮಲೆಯಾಳಂ ನಟಿ
ಚಿರು ಸರ್ಜಾ ಅಗಲಿ ಎರಡು ತಿಂಗಳಾಗುತ್ತಾ ಬಂತು. ಆದರೆ ಅವರ ಅಗಲಿಕೆಯ ನೋವು ಇನ್ನೂ ದೂರವಾಗಿಲ್ಲ. ಚಿರು ಸರ್ಜಾ ಗೆ ಗೆಳೆಯರು ಹೆಚ್ಚು, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಚಿತ್ರರಂಗದಲ್ಲೂ ಹಲವಾರು ಗೆಳೆಯರನ್ನು ಹೊಂದಿದ್ದರು ಚಿರು ಸರ್ಜಾ.
Recommended Video
ಚಿರು ಪತ್ನಿ, ನಟಿ ಮೇಘನಾ ರಾಜ್ ಸಹ ನೆರೆ-ಹೊರೆಯ ಚಿತ್ರರಂಗದಲ್ಲಿ ಸಾಕಷ್ಟು ಗೆಳೆಯರನ್ನು ಹೊಂದಿದ್ದರು. ಚಿರು ಅಗಲಿಕೆಗೆ ಕನ್ನಡದ ಸಿನಿ ಸ್ಟಾರ್‌ಗಳು ಎಷ್ಟು ಮರುಗಿದರೋ ನೆರೆ-ಹೊರೆಯ ಸಿನಿಮಾ ಸ್ಟಾರ್‌ಗಳೂ ಸಹ ಅಷ್ಟೇ ಖೇದ ವ್ಯಕ್ತಪಡಿಸಿದರು. ಮಲೆಯಾಳಂ ಸಿನಿಮಾದ ಖ್ಯಾತ ನಟಿ ಇದೀಗ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರ ಹಂಚಿಕೊಂಡಿರುವ ನಾಜರಿಯಾ
ಬೆಂಗಳೂರು ಡೇಸ್, ರಾಜಾ-ರಾಣಿ ಖ್ಯಾತಿಯ ಮಲಯಾಳಂ ನಟಿ ನಾಜರಿಯಾ ನಜೀಮ್ ಅವರು ಇದೀಗ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಜೊತೆಗಿರುವ ಸಂತಸದ ಕ್ಷಣದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಐದು ದಿನಗಳ ಹಿಂದೆ ಈ ಚಿತ್ರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮದುವೆಗೆ ಸಹ ಆಗಮಿಸಿದ್ದರು ನಟಿ
ಮಲಯಾಳಂ ಹಾಗೂ ತಮಿಳಿನಲ್ಲಿ ಖ್ಯಾತವಾಗಿರುವ ನಟಿ ನಾಜರಿಯಾ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಅವರಿಗೆ ಆಪ್ತ ಗೆಳತಿ. ಇಬ್ಬರ ಮದುವೆ ಸಮಾರಂಭಕ್ಕೆ ಸಹ ನಾಜರಿಯಾ ಬಂದು ಶುಭಾಶಯ ಕೋರಿದ್ದರು.

ಮ್ಯಾಡ್ ಡ್ಯಾಡ್ ಸಿನಿಮಾದಲ್ಲಿ ಒಟ್ಟಿಗೆ ನಟನೆ
ಮೇಘನಾ ರಾಜ್ ಹಾಗೂ ನಾಜರಿಯಾ ಮಲೆಯಾಳಂ ನ 'ಮ್ಯಾಡ್ ಡ್ಯಾಡ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೇಘನಾ ರಾಜ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ಮಲೆಯಾಳಂ ನಲ್ಲಿ ಸಹ ಬಹುಬೇಡಿಕೆಯ ನಟಿ. ಹಾಗಾಗಿ ನಾಜರಿಯಾ ಜೊತೆಗೆ ತುಂಬಾ ಉತ್ತಮ ಗೆಳೆತನ ಇಟ್ಟುಕೊಂಡಿದ್ದಾರೆ.

ನಟ ಫಹಾದ್ ಫಾಸಿಲ್ ಪತ್ನಿ
ಮಲಯಾಳಂ ಹಾಗೂ ತಮಿಳಿನಲ್ಲಿ ಖ್ಯಾತವಾಗಿರುವ ಈ ನಟಿ, ಸ್ಟಾರ್ ನಟ ಫಹಾದ್ ಫಾಸಿಲ್ ಪತ್ನಿ ಸಹ ಹೌದು. ಅವರ ನಟನೆಯ ಇತ್ತೀಚಿನ ಸಿನಿಮಾ ಟ್ರಾನ್ಸ್ ಹಿಟ್ ಆಗಿದ್ದು, ಉತ್ತಮ ವಿಮರ್ಶೆಯನ್ನು ಸಹ ಪಡೆದಿದೆ.


Click it and Unblock the Notifications











