ನಿತ್ಯಾ ಮೆನನ್ ಗೆ ಮದುವೆ ಆಗುವಂತೆ ಮನವೊಲಿಸಿದ್ದರಂತೆ ನಟ ದುಲ್ಕರ್ ಸಲ್ಮಾನ್

ದಕ್ಷಿಣ ಭಾರತದ ಜನಪ್ರಿಯ ಆನ್ ಸ್ಕ್ರೀನ್ ಜೋಡಿಗಳಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಜೋಡಿ ಕೂಡ ಒಂದು. ಇಬ್ಬರ ಕಾಂಬಿನೇಶನ್ ನ ಓಕೆ ಕಣ್ಮಣಿ ಸಿನಿಮಾ ಇಷ್ಟಪಡದವರಿಲ್ಲ. ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಈ ಸಿನಿಮಾ ಸುಂದರವಾದ ಲವ್ ಸ್ಟೋರಿ ಮೂಲಕ ಎಲ್ಲಾ ಗಮನ ಸೆಳೆದಿತ್ತು.

Recommended Video

Saroj Khan 8 ತಿಂಗಳ ಮಗಳ ಅಂತ್ಯಸಂಸ್ಕಾರ ಮುಗಿಸಿ ನೇರ ಶೂಟಿಂಗ್‌ಗೆ ಹೋಗಿದ್ದರು | Filmibeat Kannada

ದುಲ್ಕರ್ ಮತ್ತು ನಿತ್ಯಾ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆನ್ ಸ್ಕ್ರೀನ್ ನಲ್ಲಿ ಈ ಜೋಡಿ ನೋಡಿ ಫಿದಾ ಆಗದವರಿಲ್ಲ. ಅಂದ್ಹಾಗೆ ನಿತ್ಯಾ ಮತ್ತು ದುಲ್ಕರ್ ಇಬ್ಬರು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಸಿನಿಮಾ ಹೊರತುಪಡಿಸಿ ಇಬ್ಬರ ಉತ್ತಮ ಸ್ನೇಹಿತರು. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ನಟಿ ನಿತ್ಯಾ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.

ಓಕೆ ಕಣ್ಮಣಿ ಬಗ್ಗೆ ನಿತ್ಯಾ ಮಾತು

ಓಕೆ ಕಣ್ಮಣಿ ಬಗ್ಗೆ ನಿತ್ಯಾ ಮಾತು

ಓಕೆ ಕಣ್ಮಣಿ ಸಿನಿಮಾ ಮತ್ತು ಗೆಳೆಯ ದುಲ್ಕರ್ ಸಲ್ಮಾನ್ ಬಗ್ಗೆ ನಿತ್ಯಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಓಕೆ ಕಣ್ಮಣಿ ಸಿನಿಮಾದ ಔಟ್ ಪುಟ್ ನೋಡಿದಾಗ ತುಂಬಾ ಅಶ್ಚರ್ಯವಾಯಿತು. ತೆರೆಮೇಲೆ ನೋಡಿದಾಗ ಗೊತ್ತಾಯಿತು ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಬಂದಿದೆ ಎಂದಿದ್ದಾರೆ. ದುಲ್ಕರ್ ಮತ್ತು ನಿತ್ಯಾ ಇಬ್ಬರು ಉತ್ತಮ ಸ್ನೇಹಿತರು, ಇಬ್ಬರ ನಡುವೆ ಉತ್ತಮ ಒಡನಾಟವಿದೆ.

ಮದುವೆ ಆಗುವಂತೆ ದುಲ್ಕರ್ ಮನಲವೊಲಿಸಿದ್ದಾರೆ

ಮದುವೆ ಆಗುವಂತೆ ದುಲ್ಕರ್ ಮನಲವೊಲಿಸಿದ್ದಾರೆ

ನಿತ್ಯಾ ಮೆನನ್ ಸ್ನೇಹಿತ ಮತ್ತು ಸಹ ನಟ ದುಲ್ಕರ್ ಬಗ್ಗೆಯು ಮಾತನಾಡಿದ್ದಾರೆ. ಮದುವೆ ವಿಚಾರದಲ್ಲಿ ದುಲ್ಕರ್, ನಿತ್ಯಾ ಮೆನನ್ ಗೆ ಸಲಹೆ ನೀಡುತ್ತಾರಂತೆ. ದುಲ್ಕರ್ ಪಕ್ಕ ಫ್ಯಾಮಿಲಿ ಮ್ಯಾನ್. ಮದುವೆ ವಿಚಾರವಾಗಿ ಆಗಾಗ ಹೇಳುತ್ತಿರುತ್ತಾರೆ. ನಾನು ಮದುವೆ ಆಗಬೇಕೆಂದು ದುಲ್ಕರ್ ಮನವೊಲಿಸಲು ತುಂಬಾ ಪ್ರಯತ್ನಿಸಿದ್ದಾರೆ" ಎಂದು ನಿತ್ಯಾ ಹೇಳಿದ್ದಾರೆ.

2011ರಲ್ಲಿ ಮದುವೆ ಆಗಿರುವ ದುಲ್ಕರ್

2011ರಲ್ಲಿ ಮದುವೆ ಆಗಿರುವ ದುಲ್ಕರ್

ದುಲ್ಕರ್ ಸಲ್ಮಾನ್ ಮಲಯಾಳಂ ಚಿತ್ರರಂಗದ ಖ್ಯಾತ ನಟ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಬೇರೆ ಬೇರೆ ಭಾಷೆಯಲ್ಲಿಯೂ ಅಭಿನಯಿಸಿದ್ದಾರೆ. ದುಲ್ಕರ್ ಸಲ್ಮಾನ್ ಸಿನಿಮಾದ ಜೊತೆಗೆ ಕುಟುಂಬದ ಜೊತೆಯೂ ಹೆಚ್ಚು ಕಾಲಕಳೆಯುತ್ತಾರೆ. ದುಲ್ಕರ್ 2011ರಲ್ಲಿ ಅಮಲ್ ಸೂಫಿಯಾ ಜೊತೆ ಮದುವೆಯಾಗಿದ್ದಾರೆ. ಇವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ.

More from Filmibeat

English summary
Actress Nithya Menen speak about co star Dulquer Salmaan. She opens up when time Dulquer Salmaan was trying to convince her get married.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X