ನಿತ್ಯಾ ಮೆನನ್ ಮದುವೆ ಸುದ್ದಿ, ಇದೆಲ್ಲಾ ಸುಳ್ಳು ಎಂದ ನಟಿ!
ಬಹುಭಾಷಾ ನಟಿ ನಿತ್ಯಾ ಮೆನನ್ ಕನ್ನಡಿಗರು ಹತ್ತಿರ. ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಸ್ಟಾರ್ ನಟಿಯಾಗಿ ಮಿಂಚಿದ್ದು ಮಾತ್ರ ಮಲಯಾಳಂನಲ್ಲಿ. ನಿತ್ಯಾ ಮೆನನ್ ತಮ್ಮ ಸಿನಿಮಾಗಳ ಹೊರತಾಗಿ, ಆಗಾಗ ವಿವಾದಗಳಿಂದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗುತ್ತಿರುವುದು ಮದುವೆ ವಿಚಾರದಲ್ಲಿ. ಯಾವಾಗಲೂ, ನಿತ್ಯಾ ಮೆನನ್ ಇನ್ನೂ ಮದುವೆ ಯಾಕೆ ಆಗಿಲ್ಲ ಎನ್ನುವುದರು ಜೊತೆಗೆ ಯಾವಾಗ ಮದುವೆ ಆಗ್ತಾರೆ ಎನ್ನುವ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಈಗ ಈಕೆ ಮದುವೆ ತಯಾರಾಗೇ ಬಿಟ್ಟಿದ್ದಾರೆ ಎನ್ನಲಾಗಿತ್ತು.
ಮಲಯಾಳಂನ ಸ್ಟಾರ್ ನಟನ ಜೊತೆಗೆ ನಿತ್ಯ ಮೆನನ್ ಮದುವೆ ಆಗ್ತಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಹಬ್ಬಿತು. ಈ ಸುದ್ದಿ ಜೋರಾಗುತ್ತಲೇ, ನಟಿ ನಿತ್ಯಾ ಮೆನನ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲಾ ಸುಳ್ಳು ಎಂದಿದ್ದಾರೆ ನಿತ್ಯಾ ಮೆನನ್.

ನಿತ್ಯಾ ಮೆನನ್ ಮದುವೆ!
ನಟಿ ನಿತ್ಯಾ ಮೆನನ್ ಮಲಯಾಳಂ ಹೀರೊ ಜೊತೆ ಹಸೆಮಣೆ ಏರುತ್ತಾರೆ ಎನ್ನಲಾಗಿತ್ತು. ನಿತ್ಯಾ ಮೆನನ್ ಮದುವೆ, ಲವ್ ವಿಚಾರದಲ್ಲಿ ಈ ಹಿಂದೆ ಹಲವು ಗಾಸಿಪ್‌ಗಳು ಹಬ್ಬಿವೆ. ಇದೇ ಕಾರಣಕ್ಕೆ ನಿತ್ಯಾ ಮೆನನ್ ಮದುವೆ ಎಂದಾಗ ಈ ಸುದ್ದಿ ಸಿಕ್ಕಾ ಪಟ್ಟೆ ವೈರಲ್ ಆಯ್ತು. ಅದರಲ್ಲೂ ಮಲಯಾಳಂನ ಸ್ಟಾರ್ ನಟನ ಜೊತೆಗೆ ಮದುವೆ ಆಗ್ತಾರೆ ಎನ್ನುವ ಸುದ್ದಿ ಸಿಕ್ಕಾ ಪಟ್ಟೆ ವೈರಲ್ ಆಯ್ತು. ಆದರೆ ಈ ಸುದ್ದಿ ಕೇವಲ ಗಾಳಿ ಸುದ್ದಿಯಾಗಿದೆ. ಈ ವಿಚಾರದಲ್ಲಿ ಮೌನ ಮುರಿದು, ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದಾರೆ ನಿತ್ಯಾ ಮೆನನ್.

ನಿತ್ಯಾ ಮೆನನ್ ಪ್ರತಿಕ್ರಿಯೆ!
ಮದುವೆ ಗಾಸಿಪ್ ಬಗ್ಗೆ ತಮಿಳು ಮಧ್ಯಮ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿತ್ಯಾ ಮೆನನ್, "ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಅದೆಲ್ಲವೂ ಸುಳ್ಳು. ಅಂತಹ ಸುದ್ದಿಗಳನ್ನು ಪ್ರಕಟಿಸುವ ಮೊದಲು ಮಾಧ್ಯಮಗಳು ಸತ್ಯವನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಬೇಕೆಂದು ನಾನು ಬಯಸುತ್ತೇನೆ" ಎಂದಿದ್ದಾರೆ. ಆ ಮೂಲಕ ನಿತ್ಯಾ ಮೆನನ್, ತಮ್ಮ ಮದುವೆ ಬಗ್ಗೆ ಕೇಳಿ ಬಂದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಕನ್ನಡದಲ್ಲಿ ನಿತ್ಯಾ ಮೆನನ್!
'ಮೈನಾ' ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾದ ನಟಿ ನಿತ್ಯಾ ಮೆನನ್ ಮುಂದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಸಕ್ಸಸ್ ಕಂಡರು. ಬೆಂಗಳೂರಿನಲ್ಲಿ ಕೇರಳ ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಬೆಂಗಳೂರಿನಲ್ಲೇ ಶಿಕ್ಷಣ ಮುಗಿಸಿದ್ದಾರೆ. ಕನ್ನಡದಲ್ಲಿ ನಿತ್ಯಾ ಮೆನನ್ ಹಲವು ಸಿನಿಮಾ ಮಾಡಿದ್ದಾರೆ. '7 O ಕ್ಲಾಕ್', 'ಐದೊಂದ್ಲ ಐದು', 'ಮೈನಾ', 'ಕೋಟಿಗೊಬ್ಬ 2' ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿತ್ಯಾ ಮೆನನ್ ಮುಂದಿನ ಸಿನಿಮಾಗಳು!
ಇನ್ನು ಇತ್ತೀಚೆಗೆ 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿ ನಟಿಸಿದ್ದರು ನಿತ್ಯಾ ಮೆನನ್. ಸದ್ಯ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ನಟಿಸಿರುವ '19(1)(ಎ)' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ನೇರವಾಗಿ ಒಟಿಟಿ ಮೂಲಕ ರಿಲೀಸ್ ಆಗಲಿದೆ. ತಮಿಳಿನಲ್ಲಿ 'ಆರಾಮ್ ತಿರುಕಲ್ಪನ' ಹಾಗೂ ಧನುಷ್ ಜೊತೆಗಿನ 'ತಿರುಚಿಟ್ರಂಬಲಂ' ಸಿನಿಮಾಗಳು ತೆರೆಕಾಣಬೇಕಿದೆ.


Click it and Unblock the Notifications











