For Quick Alerts
  ALLOW NOTIFICATIONS  
  For Daily Alerts

  6 ವರ್ಷ ನಿತ್ಯಾ ಮೆನನ್‌ಗೆ ಕಿರುಕುಳ ಕೊಟ್ಟ ವ್ಯಕ್ತಿ, ಸತ್ಯ ಬಿಚ್ಚಿಟ್ಟ ನಟಿ!

  |

  ಬಹುಭಾಷಾ ನಟಿ ನಿತ್ಯಾ ಮೆನನ್ ಕನ್ನಡಿಗರಿಗೂ ಹತ್ತಿರ. ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಸ್ಟಾರ್ ನಟಿಯಾಗಿ ಮಿಂಚಿದ್ದು ಮಾತ್ರ ಮಲಯಾಳಂನಲ್ಲಿ. ನಿತ್ಯಾ ಮೆನನ್ ತಮ್ಮ ಸಿನಿಮಾಗಳ ಹೊರತಾಗಿ, ಆಗಾಗ ವಿವಾದಗಳಿಂದ ಗಮನ ಸೆಳೆಯುತ್ತಾರೆ.

  ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗುತ್ತಿರುವುದು ಮದುವೆ ವಿಚಾರದಲ್ಲಿ. ಯಾವಾಗಲೂ, ನಿತ್ಯಾ ಮೆನನ್ ಇನ್ನೂ ಮದುವೆ ಯಾಕೆ ಆಗಿಲ್ಲ ಎನ್ನುವುದರು ಜೊತೆಗೆ ಯಾವಾಗ ಮದುವೆ ಆಗ್ತಾರೆ ಎನ್ನುವ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಈಗ ನಿತ್ಯ ಮೆನೆನ್ ಹಳೇ ಸತ್ಯ ಒಂದನ್ನು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

  ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ಮದುವೆ ? ಆ ಹೀರೋ ನಮಗೂ ಚಿರಪರಿಚಿತ!ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ಮದುವೆ ? ಆ ಹೀರೋ ನಮಗೂ ಚಿರಪರಿಚಿತ!

  ನಿತ್ಯಾ ಮೆನೆನ್ ಇತ್ತೀಚೇಗೆ (19)(1)(a) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ರಿಲೀಸ್ ಕೂಡ ಆಗಿದೆ. ಇನ್ನು ಮುಂದಿನ ಸಿನಿಮಾ ಆಗಸ್ಟ್ 18ಕ್ಕೆ ತೆರೆಗೆ ಬರ್ತಿದೆ. ಈ ನಡುವೆ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ನಿತಯಾ ಮೆನನ್‌ಗೆ ವ್ಯಕ್ತಿಯೊಬ್ಬ ಕಿರುಕುಳ ಕೊಟ್ಟಿದ್ದನಂತೆ.

  6 ವರ್ಷ ನಿತ್ಯಮೆನನ್‌ಗೆ ಕಿರುಕುಳ!

  6 ವರ್ಷ ನಿತ್ಯಮೆನನ್‌ಗೆ ಕಿರುಕುಳ!

  ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ನಿತ್ಯಾ ಮೆನನ್, ವ್ಯಕ್ತಿ ಒಬ್ಬನಿಂದ 6 ವರ್ಷಗಳ ಕಾಲ ಹಿಂಸೆ ಅನು ಅಭುವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸದೇ ಆತ ಕೊಟ್ಟ ಆ ಘಟನೆ ಬಗ್ಗೆ ಮಾತನಾಡಿದ್ದಾರೆ. "ಆತ ನನ್ನ ಬಗ್ಗೆ ಹೇಳಿದ್ದೆಲ್ಲಾ ನಿಜ ಎಂದು ನಂಬಿದ ಜನರು ಮೂರ್ಖರು. ಆತ ವೈರಲ್ ಆಗುತ್ತಲೇ ನನ್ನ ಬಗ್ಗೆ ಪಬ್ಲಿಕ್‌ನಲ್ಲಿ ಮಾತನಾಡಲು ಶುರು ಮಾಡಿದ. ಸುಮಾರು 6 ವರ್ಷಗಳ ಕಾಲ ಆತ ನನಗೆ ಹಿಂಸೆ ಕೊಟ್ಟಿದ್ದಾನೆ. ಎಲ್ಲರೂ ಆತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡುವಂತೆ ಹೇಳುತ್ತಿದ್ರೂ ಕೂಡ ನಾನು ಅತ್ಯಂತ ತಾಳ್ಮೆ ಇಂದಲೇ ಇದ್ದೆ" ಎಂದಿದ್ದಾರೆ ನಿತ್ಯಾ ಮೆನನ್.

  ''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''

  30 ಫೋನ್ ನಂಬರ್ ಬ್ಲಾಕ್!

  30 ಫೋನ್ ನಂಬರ್ ಬ್ಲಾಕ್!

  ಈ ಘಟನೆಯಯ ಬಗ್ಗೆ ಮಾತು ಮುಂದುವರೆಸಿದ ನಟಿ ನಿತ್ಯಾ ಮೆನನ್. ತಮ್ಮ ಪೋಷಕರಿಗೂ ಇದರಿಂದ ತೊಂದರೆ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. "ನನ್ನ ಪೋಷಕರಿಗೂ ಕೂಡ ಆತ ಕರೆ ಮಾಡಿ ತೊಂದರೆ ಕೊಟ್ಟಿದ್ದಾನೆ. ಆದರೆ ನನ್ನ ಪೋಷಕರು ಅತ್ಯಂತ ಸಂಯಮದಿಂದಲೇ ನಡೆದುಕೊಳ್ಳುತ್ತಿದ್ದರು. ನನ್ನ ತಾಯಿ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದ ಸಂದರ್ಭದಲ್ಲೂ ಕೂಡ ಕರೆ ಮಾಡಿ ತೊಂದರೆ ಕೊಟ್ಟಿದ್ದಾನೆ. ಆತನ ಒಟ್ಟು 30 ಫೋನ್ ನಂಬರ್‌ಗಳನ್ನು ನನು ಬ್ಲಾಕ್ ಮಾಡಿದ್ದೇನೆ." ಎಂದು ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ.

  ಮದುವೆ ವಿಚಾರಕ್ಕೆ ನಿತ್ಯಾ ಮೆನನ್ ಸುದ್ದಿ!

  ಮದುವೆ ವಿಚಾರಕ್ಕೆ ನಿತ್ಯಾ ಮೆನನ್ ಸುದ್ದಿ!

  ನಟಿ ನಿತ್ಯಾ ಮೆನನ್ ಮಲಯಾಳಂ ಹೀರೊ ಜೊತೆ ಹಸೆಮಣೆ ಏರುತ್ತಾರೆ ಎನ್ನಲಾಗಿತ್ತು. ನಿತ್ಯಾ ಮೆನನ್ ಮದುವೆ, ಲವ್ ವಿಚಾರದಲ್ಲಿ ಈ ಹಿಂದೆ ಹಲವು ಗಾಸಿಪ್‌ಗಳು ಹಬ್ಬಿವೆ. ಇದೇ ಕಾರಣಕ್ಕೆ ನಿತ್ಯಾ ಮೆನನ್ ಮದುವೆ ಎಂದಾಗ ಈ ಸುದ್ದಿ ಸಿಕ್ಕಾ ಪಟ್ಟೆ ವೈರಲ್ ಆಯ್ತು. ಅದರಲ್ಲೂ ಮಲಯಾಳಂನ ಸ್ಟಾರ್ ನಟನ ಜೊತೆಗೆ ಮದುವೆ ಆಗ್ತಾರೆ ಎನ್ನುವ ಸುದ್ದಿ ಸಿಕ್ಕಾ ಪಟ್ಟೆ ವೈರಲ್ ಆಯ್ತು. ಆದರೆ ಈ ಸುದ್ದಿ ಕೇವಲ ಗಾಳಿ ಸುದ್ದಿಯಾಗಿದೆ. ಈ ವಿಚಾರದಲ್ಲಿ ಮೌನ ಮುರಿದು, ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದಾರೆ ನಿತ್ಯಾ ಮೆನನ್.

  ಕನ್ನಡದಲ್ಲಿ ನಿತ್ಯಾ ಮೆನನ್!

  ಕನ್ನಡದಲ್ಲಿ ನಿತ್ಯಾ ಮೆನನ್!

  'ಮೈನಾ' ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾದ ನಟಿ ನಿತ್ಯಾ ಮೆನನ್ ಮುಂದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಸಕ್ಸಸ್ ಕಂಡರು. ಬೆಂಗಳೂರಿನಲ್ಲಿ ಕೇರಳ ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಬೆಂಗಳೂರಿನಲ್ಲೇ ಶಿಕ್ಷಣ ಮುಗಿಸಿದ್ದಾರೆ. ಕನ್ನಡದಲ್ಲಿ ನಿತ್ಯಾ ಮೆನನ್ ಹಲವು ಸಿನಿಮಾ ಮಾಡಿದ್ದಾರೆ. '7 O ಕ್ಲಾಕ್', ಐದೊಂದ್ಲ ಐದು, ಮೈನಾ, ಕೋಟಿಗೊಬ್ಬ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Actress Nithya Menon Harassed By a Men For 6 Years Revealed In A Interview, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X