For Quick Alerts
  ALLOW NOTIFICATIONS  
  For Daily Alerts

  ರೆಮ್ಯಾ ಸುರೇಶ್ ನಕಲಿ ಅಶ್ಲೀಲ ವಿಡಿಯೋ ವೈರಲ್; ದೂರು ದಾಖಲಿಸಿದ ನಟಿ

  |

  ತನ್ನ ಮುಖ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಮಲಯಾಳಂ ನಟಿ ರೆಮ್ಯಾ ಸುರೇಶ್ ಸೈಬರ್ ಕ್ರೈಮ್ ಮೊರೆಹೋಗಿದ್ದಾರೆ.

  ಕಿರಾತಕರು ರೆಮ್ಯಾ ತರ ಕಾಣುವ ಹಾಗೆ ಅಶ್ಲೀಲ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರೆಮ್ಯಾ ಸ್ನೇಹಿತರು ರೆಮ್ಯಾ ಗಮನಕ್ಕೆ ತಂದಿದ್ದಾರೆ. ವಿಡಿಯೋ ನೋಡಿ ಶಾಕ್ ಆದ ರೆಮ್ಯಾ ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ.

  ಅತ್ಯಾಚಾರ ಆರೋಪಿ ಸಿನಿ ಸಾಹಿತಿಗೆ ಪ್ರಶಸ್ತಿ: ನಟಿಯರ ತೀವ್ರ ಆಕ್ರೋಶಅತ್ಯಾಚಾರ ಆರೋಪಿ ಸಿನಿ ಸಾಹಿತಿಗೆ ಪ್ರಶಸ್ತಿ: ನಟಿಯರ ತೀವ್ರ ಆಕ್ರೋಶ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಮ್ಯಾ 'ವಿಡಿಯೋದಲ್ಲಿರುವ ಯುವತಿಯ ಮುಖ ನನ್ನ ಮುಖಕ್ಕೆ ಹೋಲಿಕೆಯಾಗುತ್ತಿದೆ. ನನ್ನನ್ನು ಚೆನ್ನಾಗಿ ಬಲ್ಲವರಿಗೆ ಮಾತ್ರ ಇದರ ವ್ಯತ್ಯಾಸ ಗೊತ್ತಾಗುತ್ತದೆ. ಆದರೆ ಇತರರಿಗೆ ವ್ಯತ್ಯಾಸ ಗೊತ್ತಾಗುವುದಿಲ್ಲ' ಎಂದಿದ್ದಾರೆ.

  ಸೈಬರ್ ಕ್ರೈಮ್ ಮೊರೆ ಹೋಗುವ ಮೊದಲು ರೆಮ್ಯಾ ಅಲಪ್ಪುಳದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾತನಾಡಿದ ರೆಮ್ಯಾ, 'ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎನ್ನುವುದು ಗೊತ್ತು. ನನ್ನ ಪತಿ ಕೂಡ ವಿಶ್ವಾಸ ನೀಡಿದ್ದಾರೆ. ಅದು ನನಗೆ ಧೈರ್ಯ ನೀಡಿದೆ. ಪೊಲೀಸ್ ಅಧಿಕಾರಿಗಳು ಸಹ ತುಂಬ ಸಹಕಾರ ನೀಡಿದ್ರು. ವಿಡಿಯೋ ಹಂಚಿಕೊಂಡ ವ್ಯಕ್ತಿಯ ವಿವರ ಸಂಗ್ರಹಿಸಿದ್ದಾರೆ.

  'ನನ್ನ ಫೇಸ್ ಬುಕ್ ನಲ್ಲಿ ನನಗೆ ತುಂಬಾ ಸಂದೇಶಗಳು ಬರುತ್ತಿವೆ. ಈ ವಿಡಿಯೋ ನೋಡಿ ಸ್ನೇಹಿತರು ನನಗೆ ಕರೆ ಮಾಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕೆಂದು ನನಗೆ ಭಯವಾಗುತ್ತಿದೆ. ಏಕೆಂದರೆ ಮೊದಲು ಅಶ್ಲೀಲ ವಿಡಿಯೋ ನೋಡಿದ ತಕ್ಷಣ ನನ್ನನ್ನು ನೋಡಿದ ಹಾಗೆ ಆಗುತ್ತೆ' ಎಂದಿದ್ದಾರೆ.

  ಕನ್ನಡದ ಇತಿಹಾಸ ಹೇಳಿ ಕನ್ನಡಿಗರ ಮನಗೆದ್ದ ಚೈತ್ರ | Filmibeat Kannada

  'ಇಂಥ ಕಿಡಿಗೇಡಿತದಿಂದ ಅನೇಕ ಮುಗ್ಧ ಹೆಣ್ಣುಮಕ್ಕಳ ಜೀವನ ಹಾಳಾಗಿದೆ ಎಂದು ರೆಮ್ಯಾ ಹೇಳಿದ್ದಾರೆ. ನಾನು ಇದರಲ್ಲಿ ರಾಜಿ ಆಗುವ ಮಾತೆ ಇಲ್ಲ. ನನ್ನ ಗುರಿಯನ್ನು ನಾನು ತಲುಪುತ್ತೇನೆ' ಎಂದು ರೆಮ್ಯಾ ಹೇಳಿದ್ದಾರೆ.

  English summary
  Malayalam Actress Remya Suresh files complaint against for morphed obscene video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X