Renjusha Menon: ಖಿನ್ನತೆಯೇ ನಟಿ ರೆಂಜುಶಾ ಮೆನನ್ ಸಾವಿಗೆ ಕಾರಣವಾಯಿತೇ?; ನಟಿಯ ಪತಿ ಹೇಳಿದ್ದೇನು?
ಮಲಯಾಳಂ ಟೆಲಿವಿಷನ್ ಇಂಡಸ್ಟ್ರಿಯು ಪ್ರತಿಭಾನ್ವಿತ ನಟಿಯೊಬ್ಬರನ್ನು ಕಳೆದುಕೊಂಡಿದ್ದು, ಶೋಕದಲ್ಲಿ ಮುಳುಗಿದೆ. ಸೋಮವಾರ (ಅಕ್ಟೋಬರ್ 30) ರ ಬೆಳಗ್ಗೆಯೇ ಈ ಸುದ್ದಿ ಸಿನಿಮಾರಂಗಕ್ಕೆ ಶಾಕ್ ನೀಡಿದೆ. ಸಿನಿಮಾ ಮತ್ತು ಕಿರುತೆರೆ ನಟಿ ರೆಂಜುಶಾ ಮೆನನ್ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದರು.
ಆನಂದ ರಾಗಂನಲ್ಲಿ ಕಾಣಿಸಿಕೊಂಡಿದ್ದ ನಟಿ ಅಕ್ಟೋಬರ್ 30 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಥಮಿಕ ವರದಿಗಳ ಪ್ರಕಾರ ನಟಿ ರೆಂಜುಶಾ ಮೆನನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷ ವಯಸ್ಸಿನ ನಟಿ ನಿಧನಕ್ಕೆ ನಟಿಯ ಸಾವಿಗೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದು, ಸಾವಿಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಅವರ ಕೊನೆಯ ಫೇಸ್‌ಬುಕ್ ಪೋಸ್ಟ್ ಈಗ ಸಕತ್ ವೈರಲ್ ಆಗುತ್ತಿದೆ.

ರೆಂಜುಶಾ ಮೆನನ್ ಕೊನೆಯ ಪೋಸ್ಟ್
ಅಕ್ಟೋಬರ್ 30 ರಂದು ನಟಿ ರೆಂಜುಶಾ ಮೆನನ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೇರಳ ಪೊಲೀಸ್ ಅಧಿಕಾರಿಗಳು ಇದೀಗ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಟಿಯ ಸಾವು ಆಕೆಯ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ನಟಿಯ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ, ಅಭಿಮಾನಿಗಳು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಅವರ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿನ ನಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳ ಗಮನ ಸೆಳೆದದ್ದು ಫೇಸ್‌ಬುಕ್‌ನಲ್ಲಿ ಆಕೆಯ ಕೊನೆಯ ಪೋಸ್ಟ್.
ಹೌದು, ಸಾವಿಗು ಮುನ್ನ ಅವರು ಖಿನ್ನತೆ, ನಂಬಿಕೆ, ಬೆಂಬಲ ಇತ್ಯಾದಿಗಳ ಬಗ್ಗೆ ತಮ್ಮ ಕೊನೆಯ ಪೋಸ್ಟ್‌ನಲ್ಲಿ ಮಾತನಾಡಿದ್ದಾರೆ. ಅಕ್ಟೋಬರ್ 16 ರಂದು ಅವರ ಫೇಸ್‌ಬುಕ್ ಪುಟದಲ್ಲಿ ಈ ಪೋಸ್ಟ್ ಕಾಣಿಸಿಕೊಂಡಿದೆ. "ನಿದ್ದೆ ಮಾತ್ರ ನನ್ನ ನೆಮ್ಮದಿ. ನಿದ್ದೆಯ ನಂತರ ನನಗೆ ದುಃಖವಿರುವುದಿಲ್ಲ, ಕೋಪವಿರುವುದಿಲ್ಲ, ನಾನು ಒಬ್ಬಂಟಿಯಲ್ಲ...ಕೊನೆಗೆ ನಾನು ಏನೂ ಅಲ್ಲ" ಎಂದು ಹಾಕಿದ್ದಾರೆ.
ಹಣಕಾಸಿನ ಕಷ್ಟದಲ್ಲಿದ್ದ ನಟಿ ರೆಂಜುಶಾ ಮೆನನ್
ನಟಿಯ ರೆಂಜುಶಾ ಮೆನನ್ ತಿರುವನಂತಪುರಂನ ಶ್ರೀಕಾರ್ಯಂನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಗಂಡನೊಂದಿಗೆ ವಾಸವಿದ್ದರು. ಸೋಮವಾರ ಬೆಳಗ್ಗೆ ಎಷ್ಟು ಹೊತ್ತಾದರೂ ತಮ್ಮ ಕೊಠಡಿಯ ಬಾಗಿಲು ತೆಗೆಯದ ಕಾರಣ ಮನೆಯವರಿಗೆ ಅನುಮಾನ ಬಂದು, ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮನೋರಮಾ ವೆಬ್‌ಸೈಟ್ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ನಟಿ ರೆಂಜುಶಾ ಮೆನನ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ವರದಿಗಳ ಪ್ರಕಾರ ಅವರು ಮಲಯಾಳಂ ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುವುದರ ಜೊತೆಗೆ ದೂರದರ್ಶನ ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ. ಆಕೆಯ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.
ರೆಂಜುಶಾ ಮೆನನ್ ಬಗ್ಗೆ ಪತಿ ಹೇಳಿದ್ದೇನು...?
ರೆಂಜುಶಾ ಮೆನನ್ ಅವರ ಪತಿ ಮಲಯಾಳಂ ಕಿರುತೆರೆ ಉದ್ಯಮದ ಸೃಜನಶೀಲ ನಿರ್ದೇಶಕ ಮನೋಜ್ ಶ್ರೀಲಕಮ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಂಪತಿ ತಿರುವನಂತಪುರಂನ ಶ್ರೀಕಾರ್ಯಂನ ಕರಿಯಂನಲ್ಲಿರುವ ಫ್ಲಾಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಮನೋಜ್ ಚಿತ್ರೀಕರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಮನೋಜ್ ಹೇಳುವಂತೆ ಬೆಳಗ್ಗೆ ಅವರು ಶೂಟಿಂಗ್‌ಗೆ ತೆರಳಿದ್ದರು. ನಂತರ ಅವರು ಶೂಟಿಂಗ್ ಸ್ಥಳದಿಂದ ಫೋನ್ ಮೂಲಕ ರೆಂಜುಶಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆತಂಕಕ್ಕೊಳಗಾದ ಅವರು ತಮ್ಮ ಫ್ಲಾಟ್‌ಗೆ ಹಿಂತಿರುಗಿದ್ದರು. ಮನೆಗೆ ಬಮದು ನೋಡಿದರೇ ರೆಂಜುಶಾ ಬೆಡ್ ರೂಮ್ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಮನೋಜ್ ಅವರು ತಕ್ಷಣವೇ ಅವಳನ್ನು ಕೆಳಕ್ಕೆ ಇಳಿಸಿದ್ದಾರೆ. ಆದರೆ ದುರದೃಷ್ಟವಶಾತ್, ಅವರು ಬದುಕಲಿಲ್ಲ ಎಂದು ಹೇಳಿದ್ದಾರೆ.
ರೆಂಜುಶಾ ಮೆನನ್ ಬಗ್ಗೆ ಎಲ್ಲಾ
ಕೊಚ್ಚಿ ಮೂಲದ ರೆಂಜೂಷಾ ಮೆನನ್ ಅವರು ಟಿವಿ ಚಾನೆಲ್‌ನಲ್ಲಿ ಆಂಕರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 'ಸಿಟಿ ಆಫ್ ಗಾಡ್', 'ಮರಿಕೊಂಡೂರು ಕುಂಜದ್', 'ಲಿಸಮ್ಮನ ಮನೆ', 'ಬಾಂಬೆ ಮಾರ್ಚ್ 12', 'ತಲಪಾವ್', 'ವಾಧ್ಯಾರ್', 'ಒನ್ ವೇ ಟಿಕೆಟ್' ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಧಾರಾವಾಹಿಗಳಾದ 'ನಿಜಾಲಟ್ಟಂ', 'ಮಕಲುಡೆ ಅಮ್ಮಾ', 'ಸ್ತ್ರೀ' ಮತ್ತು 'ಬಾಲಮಣಿ'ಯಲ್ಲಿನ ಅಭಿನಯದ ಮೂಲಕ ಜನಮನ್ನಣೆ ಗಳಿಸಿದ್ದರು.


Click it and Unblock the Notifications










