ಕನ್ಯತ್ವ ಪ್ರಶ್ನಿಸಿದ ನೆಟ್ಟಿಗನಿಗೆ ಖಡಕ್ ಉತ್ತರ ಕೊಟ್ಟ ಖ್ಯಾತ ನಟಿ
ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಭಾರತ ಸಂಪೂರ್ಣ ಲಾಕ್ ಡೌನ್ ಆಗಿದೆ. ಜನ ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜನ ಕುಟುಂಬದ ಜೊತೆ ಮನೆಯಲ್ಲಿಯೆ ಕಾಲ ಕಾಳೆಯುತ್ತಿದ್ದಾರೆ. ಈ ಸಮಯದಲ್ಲಿ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ.
Recommended Video
ಇನ್ಸ್ಟಾಗ್ರಾಮ್ ನಲ್ಲಿ 'Ask Me a Question' ಎಂದು ಅಭಿಮಾನಿಗಳಲ್ಲಿ ಕೇಳುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿಯೆ ಉತ್ತರ ನೀಡುತ್ತಿದ್ದಾರೆ. ಇತ್ತೀಚಿಗೆ ಮಲಯಾಳಂನ ಖ್ಯಾತ ನಟಿ ಸಂಯುಕ್ತ ಮೆನನ್ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳಿಗೆ 'Ask Me a Question' ಮೂಲಕ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟಿದ್ದರು. ಸಾಕಷ್ಟು ಪ್ರಶ್ನೆಗಳು ಹರಿದುಬಂದಿದ್ದವು. ಆದರೆ ನೆಟ್ಟಿಗನೊಬ್ಬ Are You virgin? ಎಂದು ಸಂಯುಕ್ತಾಗೆ ಪ್ರಶ್ನಿಸಿದ್ದಾನೆ. ಮುಂದೆ ಓದಿ..

ಹೆಸರು ಬಹಿರಂಗ ಪಡಿಸಿ ಖಡಕ್ ಉತ್ತರ ಕೊಟ್ಟ ಸಂಯುಕ್ತ
ಸಂಯುಕ್ತಾಗೆ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಯನ್ನು ಲಘುವಾಗಿ ಪರಿಗಣಿಸದೆ ಆ ಪ್ರಶ್ನೆಯನ್ನು ಮತ್ತು ಪ್ರಶ್ನೆ ಕೇಳಿದ ವ್ಯಕ್ತಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಆ ವ್ಯಕ್ತಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಇಂತಹ ಪ್ರಶ್ನೆಗಳು ಮಹಿಳೆಯರನ್ನು ಹೆದರಿಸುವುದಿಲ್ಲ ಎಂದು ಹೇಳಿದ್ದಾರೆ.

ನಟಿಯ ಉತ್ತರ ಹೀಗಿದೆ
"ಮಿಸ್ಟರ್ ಅತುಲ್ ವರ್ಜಿನಿಟಿ, ಸೆಕ್ಸ್, ಆಲ್ಕೋಹಾಲ್ ಇವೆಲ್ಲಾ ಈಗಿನ ಹೆಣ್ಣು ಮಕ್ಕಳನ್ನು ಹೆದರಿಸುತ್ತದೆ ಅಂತ ಅಂದುಕೊಂಡಿದ್ದೀರಾ? ಅಥವಾ ಹೆಣ್ಣು ಮಕ್ಕಳ ವರ್ಜಿನಿಟಿ ಬಗ್ಗೆ ತಿಳಿದುಕೊಳ್ಳುವುದೇ ನಿಮ್ಮ ಕೆಲಸನಾ? ಹೆಸರು ಮಾಡಬೇಕೆಂದರೆ ಇಂತಹ ಶಾರ್ಟ್ ಕಟ್ ಹುಡುಕಬೇಡಿ. ಒಂದಲ್ಲ ಒಂದು ದಿನ ಒಬ್ಬರಿಂದ ಕಪಾಳಮೋಕ್ಷ ಆಗುತ್ತೆ". ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಸಂಯುಕ್ತಾಗೆ ಅಭಿಮಾನಿಗಳು ಬೆಂಬಲ
ವರ್ಜಿನಿಟಿ ಪ್ರಶ್ನೆ ಕೇಳಿ ನಟಿಯಿಂದ ಮುಟ್ಟಿನೋಡಿಕೊಳ್ಳುವಂತ ಉತ್ತರ ಪಡೆದ ನೆಟ್ಟಿಗನಿಗೆ ಅಭಿಮಾನಿಗಳು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಸಂಯುಕ್ತ ನೀಡಿರುವ ಉತ್ತರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಂಯುಕ್ತ ಖಡಕ್ ಆಗಿ ಅತೀ ಬುದ್ದಿವಂತಿಕೆಯಿಂದ ನೀಡಿರುವ ಉತ್ತರ ಅದೆಷ್ಟೊ ಹೆಣ್ಣುಮಕ್ಕಳಿಗೆ ಧೈರ್ಯ ನೀಡಿದೆ.

ಸಂಯುಕ್ತ ಮೆನನ್ ಬಗ್ಗೆ
ನಟಿ ಸಂಯುಕ್ತ ಮೆನನ್ ಮಲಯಾಳಂನ ಖ್ಯಾತ ನಟಿ. ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಸಂಯುಕ್ತ 2016ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಪಾಪ್ ಕಾರ್ನ್' ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದ ಸಂಯುಕ್ತ ಚೊಚ್ಚಲ ಚಿತ್ರದಲ್ಲಿಯೆ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು. ಇನ್ನು ಮಲಯಾಳಂನಲ್ಲಿ ಲಿಲ್ಲಿ, ಉಯ್ಯಾರೆ, ಕಲ್ಕಿ ಸಿನಿಮಾಗಳಲ್ಲಿ ಅಭಿನಯಿಸಿರುವ ಸಂಯುಕ್ತ ತಮಿಳು ಚಿತ್ರರಂಗದಲ್ಲಿಯೂ ಮಿಂಚಿದ್ದಾರೆ.


Click it and Unblock the Notifications











