twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ನಟಿ ಶಕೀಲಾ ಆಕ್ರೋಶ

    |

    ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರು ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಚಿತ್ರವನ್ನ ಸೆನ್ಸಾರ್ನಲ್ಲಿ ಪಾಸ್ ಮಾಡಲು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಶಕೀಲಾ, ತಮ್ಮ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಲೇಡಿಸ್ ನಾಟ್ ಅಲೌಡ್' ಚಿತ್ರವನ್ನ ಸೆನ್ಸಾರ್ ನಲ್ಲಿ ಪಾಸ್ ಮಾಡಲು ಇಬ್ಬರು ಸೆನ್ಸಾರ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

    ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹೃದಯಕ್ಕೆ ಕಲ್ಲು ಹೊಡೆದ ಶಕೀಲಾಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹೃದಯಕ್ಕೆ ಕಲ್ಲು ಹೊಡೆದ ಶಕೀಲಾ

    ''ವಯಸ್ಕರ ಹಾಸ್ಯಚಿತ್ರಗಳು ವಿಭಾಗದಲ್ಲಿ ಬರುವ ಹಲವು ಸಿನಿಮಾಗಳನ್ನು ಸೆನ್ಸಾರ್ ಮಾಡಲಾಗಿದೆ. ಆದರೆ, ನಮ್ಮ ಪ್ರೊಡಕ್ಷನ್ ಚಿತ್ರಕ್ಕೆ ಯಾಕೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಒಂದಲ್ಲ, ಎರಡು ಸಲ ಸೆನ್ಸಾರ್ ಸದಸ್ಯರಿಂದ ತಿರಸ್ಕೃತವಾಗಿದೆ. ಸಾಲ ಮಾಡಿ ಈ ಸಿನಿಮಾ ಮಾಡಲಾಗಿದೆ. ಸಾಕಷ್ಟು ಶ್ರಮ, ಸಮಯ ಮತ್ತು ಹಣವನ್ನು ಹೂಡಿಕೆ ಮಾಡಲಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Actress Shakeela Fire On Censor Members

    ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?

    ''ಲೇಡಿಸ್ ನಾಟ್ ಅಲೌಡ್ ಸಿನಿಮಾ ವಯಸ್ಕರ ಕಾಮಿಡಿ ಚಿತ್ರ. ಇದು ಫ್ಯಾಮಿಲಿ ಎಂಟರ್ ಟೈನರ್ ಅಲ್ಲ. ಸಿನಿಮಾ ಮಾಡುವುದಕ್ಕೆ ಮುಂಚೆಯೇ ನಾವು ವಯಸ್ಕರ ಚಿತ್ರ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದೇವೆ. ಆದರೆ, ಕೆಲವು ಸೆನ್ಸಾರ್ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ'' ಎಂದು ಶಕೀಲಾ ಬಹಿರಂಗಪಡಿಸಿದ್ದಾರೆ.

    ಈ ಹಿಂದೆ ಇಂತಹ ಸಿನಿಮಾಗಳನ್ನು ಸೆನ್ಸಾರ್ ನಲ್ಲಿ ಪಾಸ್ ಮಾಡಲಾಗಿದೆ. ನನ್ನ ಚಿತ್ರವನ್ನು ಯಾಕೆ ತಡೆಯುತ್ತಿದ್ದಾರೆ ಎಂದು ಪ್ರಶ್ನಿಸಿರುವ ಶಕೀಲಾ, ನಾನು ಈ ಚಿತ್ರದ ನಿರ್ಮಾಪಕಿ ಎಂಬ ಕಾರಣಕ್ಕೆ ಸೆನ್ಸಾರ್ ಅಧಿಕಾರಿಗಳು ಅಡ್ಡ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

    Read more about: shakeela ಶಕೀಲಾ
    English summary
    Adult Actress Shakeela has express outrage on censor board members. because, they are intentionally rejecting ladies not allowed movie.
    Thursday, December 5, 2019, 20:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X