ಮಲಯಾಳಂ ಮಲ್ಲಿಗೆ ಶಕೀಲಾ ಸೆಕೆಂಡ್ ಇನ್ನಿಂಗ್ಸ್
ನಲವತ್ತರ ಹರಯದಲ್ಲಿ ಇನ್ಯಾವ ಬಾಂಬ್ ಪ್ರಯೋಗಿಸಲು ಸಾಧ್ಯ? ಈಗ ಅವರಿಗೆ ಅಂತಹ ವಯಸ್ಸೂ ಇಲ್ಲ, ಉತ್ಸಾಹವೂ ಇದ್ದಂಗಿಲ್ಲ. ಸೊಂಟ ಏಳು ಸುತ್ತಿನ ಕೋಟೆಯಂತಾಗಿದೆ. ಆದರೆ ಮನೆಮಂದಿಯಲ್ಲಾ ನೋಡುವಂತಹ ಒಂದು ಉತ್ತಮ ಚಿತ್ರವನ್ನಂತೂ ಖಂಡಿತ ನೀಡುತ್ತೇನೆ ಎನ್ನುತ್ತಿದ್ದಾರೆ.
ಈ ಬಾರಿ ಅವರು ಬಣ್ಣ ಹಚ್ಚುತ್ತಿಲ್ಲ. ಬದಲಾಗಿ ನಿರ್ದೇಶನದತ್ತ ಹೊರಳಿದ್ದಾರೆ. ತಾವೊಬ್ಬ ಬಿ ಗ್ರೇಡ್ ತಾರೆ ಎನ್ನಿಸಿಕೊಂಡಿದ್ದರೂ ತಮ್ಮ ನಿರ್ದೇಶನದಲ್ಲಿ ಮೂಡಿಬರುವ ಚಿತ್ರ ಮಾತ್ರ ಎ ಗ್ರೇಡ್ ಆಗಿರುತ್ತದಂತೆ ಅರ್ಥಾತ್ ಸದಭಿರುಚಿಯ ಚಿತ್ರ ಎನ್ನುತ್ತಾರೆ.
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ 'ನೀಲಕುರುಂಜಿ' ಎಂದು ಹೆಸರಿಟ್ಟಿದ್ದಾರೆ. ಆದರೆ ಚಿತ್ರದ ಟೈಟಲ್ ನಷ್ಟೇ ನೀಲ ಎಂದಿದೆ ಆದರಿದು ನೀಲಿ ಚಿತ್ರವಲ್ಲ. ಈ ಚಿತ್ರ ಜನವರಿ 21ರಂದು ಸೆಟ್ಟೇರಿದೆ. ಮಹಿಳೆಯರ ಮನೋವೇದನೆಯ ಎಳೆಗಳೇ ಚಿತ್ರದ ಕಥಾವಸ್ತುವಂತೆ. ಅಂದರೆ ಈ ಬಾರಿ ಮಹಿಳೆಯ ಕೈಗೆ ಕರವಸ್ತ್ರ ಗ್ಯಾರಂಟಿ.
ಸರಿಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶಕೀಲಾ ತಮ್ಮದೇ ಆದಂತಹ ವೈವಿಧ್ಯಮಯ ಪಾತ್ರಗಳಿಗೆ ಹೆಸರಾಗಿದ್ದರು. ದಕ್ಷಿಣ ಭಾರತದ ಮತ್ತೊಬ್ಬ ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಕಣ್ಮರೆಯಾದಾಗ ಅವರ ಸ್ಥಾನವನ್ನು ಸಂಪೂರ್ಣವಾಗಿ ತುಂಬಿದ ಬೆಡಗಿ ಶಕೀಲಾ. (ಏಜೆನ್ಸೀಸ್)


Click it and Unblock the Notifications












