"ದಿನಕ್ಕೆ 4 ಲಕ್ಷ ರೂ. ದುಡಿತ್ತಿದ್ದೆ.. ನನ್ನ ತಂಗಿ ಎಲ್ಲಾ ಹಣ ತಗೊಂಡು ಮೋಸ ಮಾಡಿದಳು"

ಒಂದ್ಕಾಲದಲ್ಲಿ ಮಾಲಿವುಡ್‌ನ ಆಳಿದ ವಯಸ್ಕರ ಸಿನಿಮಾಗಳ ನಟಿ ಶಕೀಲಾ. ಸದ್ಯ ಆಕೆ ಸಿನಿಮಾ ಅವಕಾಶಗಳು ಇಲ್ಲದೇ ಚಿತ್ರರಂಗದಿಂದ ದೂರಾಗಿದ್ದಾರೆ ಎನ್ನಬಹುದು. 90 ಮತ್ತು 2000ರ ದಶಕದಲ್ಲಿ ಶಕೀಲ ನಟನೆಯ ಸಿನಿಮಾಗಳು ಮಾಡಿದ ಸದ್ದು ಗದ್ದಲ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಈಕೆಯ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರು ಒಂದು ಕ್ಷಣ ಅಲರ್ಟ್ ಆಗ್ತಾರೆ.

ಮಮ್ಮುಟಿ, ಮೋಹನ್ ಲಾಲ್ ಸಿನಿಮಾಗಳಿಗೂ ಶಕೀಲಾ ನಟನೆಯ ರೊಮ್ಯಾಂಟಿಕ್ ಸಿನಿಮಾಗಳು ಸೆಡ್ಡು ಹೊಡೆಯುತ್ತಿದ್ದವು. ಆದರೆ ವಯಸ್ಸಾದಂತೆ ಅವಕಾಶಗಳು ಕಮ್ಮಿ ಆಯಿತು. ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಆಕೆ ನಟಿಸುವ ಪ್ರಯತ್ನ ಮಾಡಿದ್ದರು. ಕನ್ನಡದ 'ಮೊನಾಲಿಸಾ' ಚಿತ್ರದಲ್ಲೂ ಪುಟ್ಟ ಪಾತ್ರ ಮಾತ್ರ ಮಾಡಿದ್ದರು. ಸದ್ಯ ಸಿನಿಮಾಗಳು ಇಲ್ಲದೇ ಯೂಟ್ಯೂಬ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

Actress Shakeela reacts about fake news that she own a luxury flat and a BMW car

ಸಂದರ್ಶನವೊಂದರಲ್ಲಿ, ಆಕೆ ತಮ್ಮ ಹಿಂದಿನ ಜೀವನ ಮತ್ತು ತಾವು ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. "ನನ್ನ ಬಗ್ಗೆ ತುಂಬಾ ತಪ್ಪು ಮಾಹಿತಿಗಳಿವೆ. ನನ್ನ ವಿಕಿಪೀಡಿಯಾ ಪುಟದಲ್ಲಿ ನಾನು ಐಷಾರಾಮಿ ಫ್ಲಾಟ್ ಮತ್ತು BMW ಕಾರ್ ಹೊಂದಿದ್ದೇನೆ ಎನ್ನುವ ಮಾಹಿತಿ ದೆ. ಆದರೆ ಅದು ನಿಜವಲ್ಲ. ನಾನು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ" ಎಂದು ಆಕೆ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Actress Shakeela reacts about fake news that she own a luxury flat and a BMW car

ದಿನಕ್ಕೆ 4 ಲಕ್ಷ ರೂ. ಸಂಭಾವನೆ

"ಆ ಕಾಲದಲ್ಲಿ ದಿನವೊಂದಕ್ಕೆ 4 ಲಕ್ಷ ರೂ. ಗಳಿಸುತ್ತಿದ್ದೆ, ಅಷ್ಟೊಂದು ಜನಪ್ರಿಯತೆ ಇತ್ತು. ವಯಸ್ಕರ ಸಿನಿಮಾಗಳಲ್ಲಿ ನಟಿಸಿ ಗಳಿಸಿದ ಎಲ್ಲಾ ಹಣವನ್ನು ತನ್ನ ಸಹೋದರಿಗೆ ನೀಡಿದ್ದೆ. ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಹೇಳಿ ನನ್ನ ತಂಗಿ ನನ್ನ ಎಲ್ಲಾ ಹಣ, ಆಸ್ತಿಯನ್ನು ಪಡೆದು ಮೋಸ ಮಾಡಿದ್ದಳು. ಈಗ ನನಗೆ ಏನೂ ಕೂಡ ಉಳಿದಿಲ್ಲ. ನನ್ನ ಬಳಿ ಬಿಎಂಡಬ್ಲ್ಯೂ ಕಾರ್ ಇದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ನನ್ನ ಬಳಿ ಸ್ವಂತ ಮನೆ ಕೂಡ ಇಲ್ಲ" ಎಂದು ಶಕೀಲಾ ಹೇಳಿದ್ದಾರೆ.

ಮಮ್ಮುಟಿನಿಂದ ನನ್ನ ಚಿತ್ರಕ್ಕೆ ತೊಂದರೆ

ಶಕೀಲಾ, ಇತ್ತೀಚೆಗೆ ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ತನ್ನ ಸಿನಿಮಾ ಪ್ರದರ್ಶನ ಹೇಗೆ ನಿಲ್ಲಿಸುತ್ತಿದ್ದರು ಎಂದು ಹೇಳಿ ಚರ್ಚೆ ಹುಟ್ಟಾಕ್ಕಿದ್ದರು. "ನನ್ನ ಚಿತ್ರಗಳು ಹೆಚ್ಚಾಗಿ ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ, ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗೆ ಪ್ರಬಲ ಪೈಪೋಟಿ ಕೊಡುತ್ತಿತ್ತು. ಇದನ್ನು ಅರಿತ ನಟ ಮೊಮ್ಮುಟ್ಟಿ ನನ್ನ ಸಿನಿಮಾಗಳ ರಿಲೀಸ್‌ಗೆ ತೊಂದರೆ ಕೊಡುತ್ತಿದ್ದರು ಎಂದು ಆರೋಪಿಸಿದ್ದರು. ನಿಜ ಹೇಳಬೇಕು ಅಂದ್ರೆ ನಾನು ನಾನು ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಇದು ಒಂದು ಕಾರಣವಾಗಿತ್ತು." ಎಂದಿದ್ದರು.

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆಂಬಲ

ಇತ್ತೀಚೆಗೆ ಚೆನ್ನೈನಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ನಡೆಸಿದ ಪ್ರತಿಭಟನೆಯಲ್ಲಿ ನಟಿ ಶಕೀಲಾ ಭಾಗಿ ಆಗಿದ್ದರು. ಚೆನ್ನೈನ ಚೂಲೈಮೇಡುವಿನ ಭಾಗದಲ್ಲಿ ಇರುವ ಚಿತ್ರಾ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ನಿವಾಸಿಗಳ ಬಳಿ ಹಣ ಪಡೆದರೂ ನೀರು ಬಿಡಲಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದರು. ಪಕ್ಕದ ಮನೆಯಲ್ಲಿ ನೀರು ಪಡೆಯಲು ಕೂಡ ಅನುಮತಿ ನೀಡಲಿಲ್ಲ ಎಂದು ಆರೋಪಿಸಿದ್ದರು. ಆ ನಿವಾಸಿಗಳ ಬೆಂಬಲಕ್ಕೆ ನಟಿ ಶಕೀಲಾ ನಿಂತಿದ್ದರು. ಈ ವಿಚಾರ ಸುದ್ದಿಯಾಗಿತ್ತು.

'ಶಕೀಲಾ' ಬಯೋಪಿಕ್

3 ವರ್ಷಗಳ ಹಿಂದೆ ನಟಿ ಶಕೀಲಾ ಜೀವನವನ್ನಾಧರಿಸಿ ಇಂದ್ರಜಿತ್ ಲಂಕೇಶ್ ಸಿನಿಮಾ ಮಾಡಿದ್ದರು. 'ಶಕೀಲಾ' ಎನ್ನುವ ಟೈಟಲ್‌ನಲ್ಲೇ ಸಿನಿಮಾ ಮೂಡಿ ಬಂದಿತ್ತು. ಬಾಲಿವುಡ್ ನಟಿ 'ರಿಚಾ ಚಡ್ಡಾ' ನಾಯಕಿಯಾಗಿ ನಟಿಸಿದ್ದರು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬಂದಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

More from Filmibeat

English summary
Actress Shakeela reacts about fake news that she own a luxury flat and a BMW car. Kannad adirector Indrajit Lankesh directed her biopic film. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X