ತೆಲುಗು, ಹಿಂದಿಯಲ್ಲಿ ಕೋಟಿ ಕೋಟಿ ಬಾಚಿದ ನಂತರ ಮಲಯಾಳಂನಲ್ಲೂ ಕಾರ್ತಿಕೇಯ 2 ಬಿಡುಗಡೆ

2014ರಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿ ಆಗಲೂ ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ ಕಾರ್ತಿಕೇಯ ಚಿತ್ರದ ಸೀಕ್ವೆಲ್ ಕಾರ್ತಿಕೇಯ 2 ಕಳೆದ ಆಗಸ್ಟ್ 13ರಂದು ಬಿಡುಗಡೆಯಾಗಿತ್ತು. ಕಾರ್ತಿಕೇಯ ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು, ಆದರೆ ಕಾರ್ತಿಕೇಯ 2 ತೆಲುಗು ಮತ್ತು ಹಿಂದಿ ಎರಡೂ ಭಾಷೆಯಲ್ಲಿಯೂ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಮೂಲ ಹಿಂದಿ ಚಿತ್ರಗಳನ್ನು ಬಾಯ್ಕಾಟ್ ಅಭಿಯಾನದಡಿಯಲ್ಲಿ ತಿರಸ್ಕರಿಸಿದ್ದ ಹಿಂದಿ ಸಿನಿ ಪ್ರೇಕ್ಷಕರು ಪುರಾಣ ಮತ್ತು ಕೃಷ್ಣನ ಕುರಿತಾದ ಚಿತ್ರಕಥೆಯನ್ನು ಹೊಂದಿರುವ ಕಾರ್ತಿಕೇಯ 2 ಚಿತ್ರವನ್ನು ಒಪ್ಪಿ ಅಪ್ಪಿಕೊಂಡರು. ಹೀಗಾಗಿ ಈ ಚಿತ್ರ ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿಯಲ್ಲಿಯೂ ಸಹ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು.

ಹೀಗೆ ತೆಲುಗು ಮತ್ತು ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿರುವ ಕಾರ್ತಿಕೇಯ 2 ಮಲೆಯಾಳಂಗೂ ಡಬ್ ಆಗಿದ್ದು, ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಇದೇ ತಿಂಗಳ 23ರಂದು ಕಾರ್ತಿಕೇಯ 2 ಮಲಯಾಳಂ ವರ್ಷನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ನಿಖಿಲ್ ಸಿದ್ಧಾರ್ಥ್, ನಟಿ ಅನುಪಮಾ ಪರಮೇಶ್ವರನ್ ಸೇರಿದಂತೆ ಚಿತ್ರದ ಇತರರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಚಿತ್ರದ ಪೋಸ್ಟರ್ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

After collecting more than 100 crores in Telugu and Hindi Karthikeya 2 is now releasing in Malayalam

ಇನ್ನು ಅನುಪಮ ಪರಮೇಶ್ವರನ್ ಮಲಯಾಳಂ ನಟಿ ಆಗಿರುವ ಕಾರಣ ಈ ಚಿತ್ರ ಮಲಯಾಳಂನಲ್ಲಿಯೂ ಸಹ ಒಳ್ಳೆಯ ಕಲೆಕ್ಷನ್ ಮಾಡಲಿದೆ ಎಂದು ಸಿನಿಪ್ರೇಕ್ಷಕರು ಊಹಿಸಿದ್ದಾರೆ. ಇನ್ನು ಇಂದು ( ಸೆಪ್ಟೆಂಬರ್ 10 ) ಯಶಸ್ವಿ ಮೂವತ್ತು ದಿನಗಳನ್ನು 1000ಕ್ಕೂ ಹೆಚ್ಚು ಪರದೆಗಳಲ್ಲಿ ಪೂರೈಸಿರುವ ಕಾರ್ತಿಕೇಯ 2 ಸಿನಿಮಾ 120+ ಕೋಟಿ ಕಲೆಕ್ಷನ್ ಮಾಡಿದೆ ಎಂಬ ಅಧಿಕೃತ ಘೋಷಣೆಯನ್ನು ಕೂಡ ಚಿತ್ರತಂಡ ಮಾಡಿದೆ.

More from Filmibeat

English summary
After collecting more than 100 crores in Telugu and Hindi Karthikeya 2 is now releasing in Malayalam. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X