ಶೂಟಿಂಗ್ ಸೆಟ್‌ನಲ್ಲೇ ನಟಿಯಿಂದ ಎಣ್ಣೆ - ಸಿಗರೇಟ್‌ಗೆ ಡಿಮ್ಯಾಂಡ್ ; 80 ಸಾವಿರ ನಷ್ಟ ಆಯ್ತು ಎಂದ ನಿರ್ದೇಶಕ
ಚಿತ್ರರಂಗದಲ್ಲಿ ತೆರೆಮರೆಯ ಹಿಂದೆ ಹಲವು ಕಥೆಗಳಿರುತ್ತವೆ. ಆ ಕಥೆಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ ಅಷ್ಟೇ. ಕೊಡು-ಕೊಳ್ಳು ವ್ಯವಹಾರದಲ್ಲಿ ಆಚೀಚೆ ಆದಾಗ, ಯಾವುದೋ ಕಾರಣಕ್ಕೆ ಮನಸ್ತಾಪ ಮನೆ ಮಾಡಿದಾಗ ಅಥವಾ ಇನ್ಯಾವದ್ದೋ ಕಾರಣಕ್ಕೆ ಭಿನ್ನಾಭಿಪ್ರಾಯ ಭುಗಿಲೆದ್ದಾಗ ಮಾತ್ರ ಈ ತೆರೆಯ ಹಿಂದಿನ ಈ ಕಥೆಗಳು ಮುನ್ನೆಲೆಗೆ ಬರುತ್ತವೆ. ಆಗ ಆರೋಪ-ಪ್ರತ್ಯಾರೋಪದ ಸರಣಿ ಬಹಿರಂಗವಾಗಿ ಶುರುವಾಗುತ್ತೆ. ಇದಕ್ಕೆ ಉದಾಹರಣೆಯೇ ಮಲಯಾಳಂನಲ್ಲಿ ಶುರುವಾಗಿರುವ ವಿವಾದ.
ಹೌದು. ವಿಪಿನ್ ಲಾಲ್ ಮತ್ತು ರೇಣು ಸುಧಿ ನಡುವೆ ಆಲ್ಬಂ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಈ ರೇಣು ಸುಧಿ ಬೇರೆ ಯಾರು ಅಲ್ಲ. ಬದಲಿಗೆ ಮಲಯಾಳಂನ ಖ್ಯಾತ ಹಾಸ್ಯ ನಟ ದಿವಂಗತ ಕೊಲ್ಲಂ ಸುಧಿ ಅವರ ಪತ್ನಿ. ಕಳೆದ ಬಾರಿಯ ''ಬಿಗ್ ಬಾಸ್'' ಸ್ಫರ್ಧಿ. ಕೇರಳದ ಜನಪ್ರಿಯ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್. ರಿಬನ್ ಕಟ್ ಮಾಡುವುದರಲ್ಲಿ ಇವರು ತುಂಬಾ ಫೇಮಸ್.

ಇಂತಹ ರೇಣು ಸುಧಿ ಅವರ ಜೊತೆ ವಿಪಿನ್ ಲಾಲ್ ಆಲ್ಬಂ ಹಾಡೊಂದನ್ನು ಮಾಡುತ್ತಿದ್ದಾರೆ. ಸದ್ಯ ಈ ಆಲ್ಬಂ ಹಾಡು ಈ ವಿವಾದದ ಕೇಂದ್ರ ಬಿಂದು. ನಿರ್ದೇಶಕರ ಮೇಲೆ ಕೊ*ಲೆ ಯತ್ನದ ಆರೋಪವನ್ನು ರೇಣು ಸುಧಿ ಈಗಾಗಲೇ ಮಾಡಿದ್ದಾರೆ.
ಆಲ್ಬಂ ಶೂಟಿಂಗ್ ವೇಳೆ ನಿರ್ದೇಶಕ ವಿಪಿನ್ ಲಾಲ್ ನನ್ನನ್ನು ಅಶ್ಲೀಲವಾಗಿ ಚಿತ್ರೀಕರಿಸಿದ್ದಾರೆ, ಕ್ಯಾಮೆರಾ ಆ್ಯಂಗಲ್ ಸರಿ ಇರಲಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರು ಅಂದು ಇರದಿದ್ದರೆ ನನ್ನ ಕೊಲೆಯೇ ನಡೆಯುತ್ತಿತ್ತು ಎಂದಿದ್ದಾರೆ.
ಈಗ ರೇಣು ಸುಧಿ ವಿರುದ್ಧ ವಿಪಿನ್ ಲಾಲ್ ತಿರುಗಿ ಬಿದ್ದಿದ್ದು, ರೇಣು ಸುಧಿ ಅವರ ಸಹವಾಸದಿಂದ 80,000 ನಷ್ಟ ಆಗಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ವಿಪಿನ್ ಲಾಲ್, ಆಲ್ಬಂ ಹಾಡಿಗೆ ಹೆಜ್ಜೆ ಹಾಕಲು ರೇಣು ಸುಧಿ 17,000 ಸಂಭಾವನೆ ಕೇಳಿದ್ದರು ಎಂದು ಹೇಳಿದ್ದಾರೆ.
17,000 ಸಂಭಾವನೆ ಪ್ರಯಾಣ, ಖರ್ಚು ಮತ್ತು ವಸತಿಗಾಗಿ ಪ್ರತ್ಯೇಕವಾಗಿ ಹಣ ನೀಡಬೇಕೆಂದು ಕೂಡ ರೇಣು ಷರತ್ತು ಹಾಕಿದ್ದರು ಎಂದು ಹೇಳಿರುವ ವಿಪಿನ್ ಸೆಟ್‌ಗೆ ಬಂದ ತಕ್ಷಣ ರೇಣು ಮದ್ಯ ಮತ್ತು ಸಿಗರೇಟ್ ತಂದುಕೊಡುವಂತೆ ಬೇಡಿಕೆ ಇಡುತ್ತಿದ್ದರು ಎಂದು ಹೇಳಿದ್ದಾರೆ.

ನಾನು ಕಳೆದ ಒಂಬತ್ತು ವರ್ಷಗಳಿಂದ ಮದ್ಯಪಾನ ಮಾಡದಿದ್ದರೂ, ರೇಣು ಸುಧಿ ಅವರ ಒತ್ತಾಯ ಒತ್ತಡಕ್ಕೆ ಮಣಿದು ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಸಿಸ್ಟೆಂಟ್ ಮೂಲಕ ''ಮ್ಯಾಜಿಕ್ ಮೊಮೆಂಟ್ಸ್'' ಮತ್ತು ಅವರು ಕೇಳಿದ ಐದು ''ಕಿಂಗ್'' ಸಿಗರೇಟ್‌ನ ತರಿಸಿಕೊಟ್ಟಿದ್ದೆ ಎಂದು ವಿಪಿನ್ ಹೇಳಿದ್ದಾರೆ. ರೇಣು ಅವರ ಈ ವರ್ತನೆಯಿಂದ ₹1.5 ಲಕ್ಷ ಬಜೆಟ್‌ನ ಈ ಆಲ್ಬಂನಲ್ಲಿ, ಒಂದು ದೃಶ್ಯ ಚಿತ್ರೀಕರಿಸುವಷ್ಟರಲ್ಲಿ ₹80,000 ಖರ್ಚಾಯ್ತು ಎಂದು ಕಿಡಿ ಕಾರಿದ್ದಾರೆ.
ಆನ್‌ಲೈನ್ ಮಾಧ್ಯಮದವರ ಜೊತೆ ರೇಣು ಸುಧಿ ಅವರ ಒಪ್ಪಂದ ಇತ್ತು, ಚಿತ್ರೀಕರಣದ ಸ್ಥಳಕ್ಕೆ ಕೂಡ ಅವರನ್ನು ಕರೆಸಿದ್ದರು ಎಂದು ಹೇಳಿರುವ ವಿಪಿನ್ ಲಾಲ್ ಅವರು ಆಲ್ಬಂ ಹಾಡಿನ ಕುರಿತು ವರದಿ ಮಾಡುವ ಬದಲು ರೇಣು ಅವರ ವೈಯಕ್ತಿಕ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಎಣ್ಣೆ ಮತ್ತು ಸಿಗರೇಟ್ ಬೇಕೆಂದು ಹಠ ಮಾಡಿದಾಗ, ವ್ಯವಸ್ಥೆ ಮಾಡಿ ಕೊಟ್ಟಿದ್ದೆ, ಆದರೆ ಅಷ್ಟರಲ್ಲಿ ಮಾಧ್ಯಮದವರ ಜೊತೆ ರೇಣು ಹೊರಗಡೆ ಹೋಗಿದ್ದರು ಎಂದು ಹೇಳಿರುವ ವಿಪಿನ್ ಲಾಲ್ ಅವರು ಮರಳಿ ಬಂದ ನಂತರ ಅವರ ವರ್ತನೆ ಬದಲಾಗಿತ್ತು, ಇದ್ದಕ್ಕಿದ್ದಂತೆಯೇ ಕೂಗಾಡಲು ಶುರು ಮಾಡಿದರು ಎಂದು ಹೇಳಿದ್ದಾರೆ. ನನ್ನ ಹಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಕಾರಣ, ಗದ್ದಲ ಹೆಚ್ಚಾಗುತ್ತಿದ್ದಂತೆ, ಹಣಕ್ಕಿಂತ ಜೀವನ ದೊಡ್ಡದು ಎಂದುಕೊಂಡು ನಾನು ಪ್ಯಾಕಪ್ ಮಾಡಿದೆ ಎಂದು ಹೇಳಿದ್ದಾರೆ.
ನಿರ್ದೇಶಕ ವಿಪಿನ್ ಲಾಲ್ ಅವರ ಈ ಆರೋಪಕ್ಕೆ ರೇಣು ಸುಧಿ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











