ಮುದ್ದಾದ ಮಗುವಿಗೆ ಜನ್ಮ ನೀಡಿದ 'ಹೆಬ್ಬುಲಿ' ನಟಿ ಅಮಲಾ ಪೌಲ್; ತಡವಾಗಿ ಖುಷಿ ಹಂಚಿಕೊಂಡ ಚೆಲುವೆ

ಮಲಯಾಳಂ ಚೆಲುವೆ ಅಮಲಾ ಪೌಲ್ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ಅಮಲಾ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ 2ನೇ ಮದುವೆ ಆಗಿದ್ದ ಅಮಲಾ 2ನೇ ತಿಂಗಳಲ್ಲಿ ಗುಡ್ ನ್ಯೂಸ್ ನೀಡಿದ್ದರು.

ಬೇಬಿ ಬಂಪ್ ಫೋಟೊಶೂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದ ಅಮಲಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಕೊಂಚ ತಡವಾಗಿ ಸೋಶಿಯಲ್ ಮೀಡಿಯಾದ ಪೋಸ್ಟ್ ಮಾಡಿದ್ದಾರೆ. ಮಗುವನ್ನು ಮನೆಗೆ ತೆಗೆದುಕೊಂಡು ಬಂದ ವಿಡಿಯೋ ಸಮೇತ ವಿವರಿಸಿದ್ದಾರೆ. ಜೊತೆಗೆ ಮಗನ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ.

Amala paul Jagat Desai welcome baby boy name him ILAI See announcement video

ಜೂನ್ 11 ರಂದು ಅಮಲಾ ಪೌಲ್‌ಗೆ ಹೆರಿಗೆ ಆಗಿತ್ತು. 7 ದಿನಗಳ ಬಳಿಕ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ಚಿತ್ರರಂಗದ ಆಪ್ತರು ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಇನ್ನು ದಂಪತಿ ಮಗನಿಗೆ ಇಲೈ ಎಂದು ನಾಮಕರಣ ಮಾಡಿದ್ದಾರೆ. ಅಮಲಾ ಮಗನನ್ನು ಮನೆಗೆ ಕರೆತಂದಾಗ ಬಲೂನ್, ರಿಬ್ಬನ್ ಬಳಸಿ ಮನೆಯನ್ನು ಸಿಂಗರಿಸಲಾಗಿತ್ತು. ಇದನ್ನು ನೋಡಿ ಅಮಲಾ ಖುಷಿಯಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಳೆದ ವರ್ಷ ನವೆಂಬರ್‌ 5ರಂದು ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ ಪೌಲ್ ಹಸೆಮಣೆ ಏರಿದ್ದರು. ಈ ವರ್ಷ ಜನವರಿ 4ರಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ಆಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ತಮಿಳು ಸಿನಿಮಾ ನಿರ್ದೇಶಕ ಎ. ಎಲ್ ವಿಜಯ್ ಜೊತೆ ಮದುವೆ ಆಗಿ ಅಮಲಾ ವಿಚ್ಛೇದನ ಪಡೆದುಕೊಂಡಿದ್ದರು.

ಮಲಯಾಳಂನ 'ನೀಲತಾಮರ' ಚಿತ್ರದ ಮೂಲಕ ಅಮಲಾ ಪೌಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ದೈವ ತಿರುಮಗಳ್', 'ಮುಪ್ಪೊಳುದುಮ್ ಉನ್ ಕಾರ್ಪನೈಗಳ್', 'ನಾಯಕ್', 'ರನ್ ಬೇಬಿ ರನ್', 'ಇದ್ದರಮ್ಮಾಯಿಲತೋ', 'ವಿಐಪಿ', 'ಪಸಂಗ- 2', 'ಹೆಬ್ಬುಲಿ' ಹಾಗೂ 'ರಾಕ್ಷಸನ್' ಕೇರಳ ಕುಟ್ಟಿ ನಟಿಸಿದ ಕೆಲ ಜನಪ್ರಿಯ ಸಿನಿಮಾಗಳು. ಇತ್ತೀಚೆಗೆ ಮಲಯಾಳಂನಲ್ಲಿ ಹಿಟ್ ಆಗಿದ್ದ 'ಆಡುಜೀವಿತಂ - ದಿ ಗೋಟ್ ಲೈಫ್' ಚಿತ್ರದಲ್ಲಿ ಕೊನೆಯದಾಗಿ ಆಗಿ ನಟಿಸಿದ್ದರು.

ಅಜಯ್ ದೇವಗನ್ ನಟನೆಯ ಆಕ್ಷನ್-ಥ್ರಿಲ್ಲರ್ 'ಭೋಲಾ' ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. 'ಲೆವೆಲ್ ಕ್ರಾಸ್' ಹಾಗೂ 'ದಿವಿಜ' ಎನ್ನುವ ಎರಡು ಮಲಯಾಳಂ ಸಿನಿಮಾಗಳಲ್ಲಿ ಕೂಡ ಆಕೆ ನಟಿಸುತ್ತಿದ್ದಾರೆ. ಇನ್ನು ಎ. ಎಲ್ ವಿಜಯ್‌ಗೆ ಡಿವೋರ್ಸ್ ಕೊಟ್ಟು ದೂರಾದ ಬಳಿಕ ಅಮಲಾ, ಗಾಯಕ ಭಾವನೀಂದರ್ ಸಿಂಗ್ ಜೊತೆ ರಸಹ್ಯವಾಗಿ ಮದುವೆ ಆಗಿರುವ ಸುದ್ದಿ ಬಂದಿತ್ತು. ಒಂದಷ್ಟು ಫೋಟೊಗಳು ವೈರಲ್ ಆಗಿತ್ತು.

ಬಳಿಕ ಈ ಬಗ್ಗೆ ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದರು. ಆತ ನನ್ನ ಗೆಳೆಯ. ಆದರೆ ನಮ್ಮ ಮದುವೆ ಆಗಿಲ್ಲ. ಅದು ಕೇವಲ ಜಾಹೀರಾತು ಶೂಟಿಂಗ್ ಫೋಟೊಗಳು ಎಂದು ಹೇಳಿದ್ದರು. ಕೆಲ ದಿನಗಳ ನಂತರ ಆತನ ವಿರುದ್ಧವೇ ಕಿರುಕುಳ, ಬೆದರಿಕೆ ಆರೋಪ ಹೊರಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಅಮಲಾಗೆ ವಿಚ್ಛೇದನ ನೀಡಿದ ಬಳಿಕ ನಿರ್ದೇಶಕ ಎ. ಎಲ್ ವಿಜಯ್ ಕೂಡ ಮತ್ತೊಂದು ಮದುವೆ ಆಗಿದ್ದಾರೆ. ಐಶ್ವರ್ಯ ಎಂಬುವವರನ್ನು 4 ವರ್ಷಗಳ ಹಿಂದೆ ಕೈ ಹಿಡಿದಿದ್ದಾರೆ.

More from Filmibeat

English summary
Amala paul blessed with a baby boy, shares news on Instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X