"ಪೃಥ್ವಿರಾಜ್ ಜೊತೆ ಲಿಪ್ ಲಾಕ್ ಮಾಡಿದ್ದು ನನಗೇನು ದೊಡ್ಡ ವಿಷಯವಲ್ಲ": ಹೆಬ್ಬುಲಿ ನಟಿಯ ಬೋಲ್ಡ್ ಕಮೆಂಟ್
ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳಿಗೆ ಅಮಲಾ ಪೌಲ್ ಚೆನ್ನಾಗಿಯೇ ಗೊತ್ತಿರುತ್ತೆ. ತಮಿಳು ಭಾಷೆ ಸಿನಿಮಾಗಳಲ್ಲಿಯೇ ಹೆಚ್ಚು ನಟಿಸಿದ್ದರೂ, ಕನ್ನಡ ಹಾಗೂ ತೆಲುಗು ಸಿನಿಮಾ ಪ್ರೇಮಿಗಳಿಗೂ ಪರಿಚಯ. ಅದರಲ್ಲೂ ಕಿಚ್ಚನ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ ಬಳಿಕ ಕನ್ನಡಿಗರಿಗೂ ಅಮಲಾ ಪೌಲ್ ಯಾರೆಂದು ಗೊತ್ತಿದೆ.
ಅಮಲಾ ಪೌಲ್ ದಕ್ಷಿಣ ಭಾರತದಲ್ಲಿ ಸದಾ ಚರ್ಚೆಯಲ್ಲಿರೋ ನಟಿ. ತನಗೆ ಇಷ್ಟವೆನಿಸಿದ ಪಾತ್ರವನ್ನು ಮುಜುಗರವೇ ಇಲ್ಲದೆ ಬಿಂದಾಸ್ ಅಗಿ ನಟಿಸೋ ನಟಿ. ಈ ಹಿಂದೆ 'ಆಡೈ' ಅನ್ನೋ ಸಿನಿಮಾದಲ್ಲಿ ಅರೆ ಬೆತ್ತಲೆಯಾಗಿ ನಟಿಸಿ ಬೆಚ್ಚಿಬೀಳಿಸಿದ್ದರು. ಈಗ ಮುತ್ತಿನ ದೃಶ್ಯದಲ್ಲಿ ನಟಿಸಿ ಸಿನಿಪ್ರೇಮಿಗಳಿಗೆ ಕಿಕ್ ಕೊಟ್ಟಿದ್ದಾರೆ.

ಬೋಲ್ಡ್ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ಅಮಲಾ ಪೌಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆ ಪಾತ್ರದ ಬಗ್ಗೆ ಕಮೆಂಟ್ ಮಾಡಿ ಇನ್ನೂ ಚರ್ಚೆಗೆ ಗ್ರಾಸವಾಗಿದ್ದಾರೆ. ಅಷ್ಟಕ್ಕೂ ಅಮಲಾ ಪೌಲ್ ಮುತ್ತಿನ ಕಹಾನಿ ಏನು? ನಟಿಯ ಹೇಳಿಕೆ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮಾಲಿವುಡ್‌ನಲ್ಲಿ ಅಮಲಾ ಮುತ್ತಿನ ಕಥೆಯೇನು?
ಮಲಯಾಳಂ ಸಿನಿಮಾದಿಂದಲೇ ಅಮಲಾ ಪೌಲ್ ವೃತ್ತಿ ಬದುಕು ಆರಂಭ ಆಗಿತ್ತು. ಆದರೆ, ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರೂ, ಆಗೊಂದು ಈಗೊಂದು ಸಿನಿಮಾ ಮಾಡುತ್ತಾರೆ. ಸದ್ಯ ಈಕೆ ಮಲಯಾಳಂನಲ್ಲಿ ನಟಿಸಿದ 'ಆಡುಜೀವಿತಂ' ಸಿನಿಮಾದ ದೃಶ್ಯವೊಂದು ಚರ್ಚೆಯಲ್ಲಿದೆ.
ಅಮಲಾ ಪೌಲ್ ನಟಿಸಿ, ಬಿಡುಗಡೆಯಾದ ಕೊನೆಯ ಮಲಯಾಳಂ ಸಿನಿಮಾ 'ಕ್ರಿಸ್ಟೋಫರ್'. ಈ ಸಿನಿಮಾ ಬಳಿಕ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಆಡುಜೀವಿತಂ'. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಪತ್ನಿಯ ಪಾತ್ರದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್‌ಗೆ ಅಮಲಾ ಪೌಲ್ ಚುಂಬಿಸೋ ದೃಶ್ಯವಿದೆ. ಇದೇ ಸೀನ್ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು.

"ಲಿಪ್ ಲಾಕ್ ನನಗೆ ದೊಡ್ಡ ವಿಷಯವಲ್ಲ"
ಅಮಲಾ ಪೌಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಲಿಪ್ ಲಾಕ್ ದೃಶ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಈ ದೃಶ್ಯ ಕಥೆಗೆ ತುಂಬಾನೇ ಪೂರಕವಾಗಿತ್ತು. ಆ ಕಾರಣಕ್ಕಾಗಿ ಲಿಪ್ ಲಾಕ್ ಸೀನ್ ಅನ್ನು ಸೇರಿಸಲಾಗಿದೆ. ಅದರಂತೆ ನಾನು ನಟನೆ ಮಾಡಿದ್ದೇವೆ" ಎಂದು ಅಮಲಾ ಪೌಲ್ ಹೇಳಿದ್ದಾರೆ.
ಹಾಗೇ ಲಿಪ್ ಲಾಕ್ ದೃಶ್ಯ ಮಾಡಿದ್ದೇಕೆ? ಅದರ ಅನುಭವದ ಬಗ್ಗೆ ಕೂಲ್ ಆಗಿಯೇ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. " ಲಿಪ್ ಲಾಕ್ ಮಾಡೋದು ನನಗೆ ದೊಡ್ಡ ವಿಷಯವೇ ಅಲ್ಲ. ನಾನು ಈಗಾಗಲೇ ಬೆತ್ತಲೆ ಪಾತ್ರದಲ್ಲಿ ನಟಿಸಿದ್ದೇನೆ." ಎಂದು ಅಮಲಾ ಪೌಲ್ ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
'ಆಡೈ' ಸಿನಿಮಾದಲ್ಲೂ ಅಮಲಾ ಬೋಲ್ಡ್
ಅಮಲಾ ಪೌಲ್‌ಗೂ ವಿವಾದಕ್ಕೂ ಬಿಡಲಾರದ ನಂಟು ಇದೆ. ಈ ಹಿಂದೆ ತಮಿಳಿನಲ್ಲಿ 'ಆಡೈ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅಮಲಾ ಪೌಲ್ ಬೆತ್ತಲಾಗಿ ನಟಿಸಿದ್ದರು. ಆ ವೇಳೆ ಕೂಡ ಅಮಲಾ ಪೌಲ್ ವಿವಾದಕ್ಕೆ ಸಿಲುಕಿದ್ದರು.
ಇಷ್ಟೆಲ್ಲ ಆದರೂ, ಅಮಲಾ ಪೌಲ್ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ತನಗೆ ಇಷ್ಟವಾದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಬೋಲ್ಡ್ ಆಗಿ ತಮ್ಮ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಾರೆ. ಸದ್ಯ ಮುತ್ತಿನ ದೃಶ್ಯದ ಮೂಲಕ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.


Click it and Unblock the Notifications











