ಅಮಲಾ ಅವತ್ತು ಆ ತರ ಬಟ್ಟೆ ಹಾಕಿದ್ಯಾಕೆ? ಟೀಕಿಸಿದವರ ಬಾಯಿ ಮುಚ್ಚಿಸಿದ 'ಹೆಬ್ಬುಲಿ' ನಟಿ
ಮಲಯಾಳಂ ನಟಿ ಅಮಲಾ ಪೌಲ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ 'ಹೆಬ್ಬುಲಿ' ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಲೆವೆಲ್ ಕ್ರಾಸ್' ಎನ್ನುವ ಸಿನಿಮಾದಲ್ಲಿ ಆಕೆ ನಟಿಸಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ 'ಲೆವೆಲ್ ಕ್ರಾಸ್' ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಕಾಲೇಜ್‌ವೊಂದಕ್ಕೆ ಹೋಗಿತ್ತು. ಅಲ್ಲಿಗೆ ಅಮಲಾ ಪೌಲ್ ತೊಟ್ಟು ಬಂದಿದ್ದ ಡ್ರೆಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಎದೆ ಸೀಳು ಕಾಣುವಂತೆ ತುಂಡು ಬಟ್ಟೆಯಲ್ಲಿ ಅಮಲಾ ಕಾಣಿಸಿಕೊಂಡಿದ್ದರು. ಒಂದು ಕಾಲೇಜಿಗೆ ಇಂತಹ ಬಟ್ಟೆ ತೊಟ್ಟು ಹೋಗೋದಾ? ವಿದ್ಯಾಸಂಸ್ಥೆಗೆ ಹೋಗುವಾಗ ಒಳ್ಳೆ ರೀತಿಯಲ್ಲಿ ಒಟ್ಟೆ ತೊಟ್ಟು ಹೋಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದೀಗ ತಮ್ಮ ಡ್ರೆಸ್ ಬಗ್ಗೆ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಸ್ವತಃ ಅಮಲಾ ಪೌಲ್ ಪ್ರತಿಕ್ರಿಯಿಸಿದ್ದಾರೆ. ಆ ಡ್ರೆಸ್ ನಲ್ಲಿ ತಾನು ತುಂಬಾ ಕಂಫರ್ಟಬಲ್ ಆಗಿದ್ದೆ ಎಂದು ಹೇಳಿದ್ದಾರೆ. "ಕಾಲೇಜಿನ ಈವೆಂಟ್‌ಗಾಗಿ ನಾನು ಧರಿಸಿದ್ದ ಡ್ರೆಸ್‌ನಲ್ಲಿ ನಾನು ಆರಾಮಾಗಿದ್ದೆ. ಆ ಕಾರ್ಯಕ್ರಮಕ್ಕೆ ಇಂತಹ ಕಾಸ್ಟ್ಯೂಮ್ ತೊಟ್ಟು ಹೋಗಿದ್ದು ತಪ್ಪೇನೂ ಅನಿಸಲಿಲ್ಲ. ನಿಜ ಹೇಳಬೇಕು ಅಂದ್ರೆ ನನ್ನ ಬಟ್ಟೆಗಿಂತ ಆ ಫೋಟೋ, ವೀಡಿಯೋಗಳನ್ನು ತೆಗೆದವರದ್ದೇ ನಿಜವಾದ ಸಮಸ್ಯೆ. ಅವರು ನನ್ನ ಫೋಟೋಗಳನ್ನು ಹೇಗೆ ಕ್ಲಿಕ್ಕಿಸಿದರು ಎಂಬುದರ ಬಗ್ಗೆ ಚರ್ಚೆ ಆಗಬೇಕು" ಎಂದಿದ್ದಾರೆ.
"ಆ ಉಡುಪಿನಲ್ಲಿ ನನ್ನನ್ನು ನೋಡಿದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ನಾನು ಮಾಡರ್ನ್ ಡ್ರೆಸ್ ಹಾಗೂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುತ್ತೇನೆ. ನಾನು ಆ ಡ್ರೆಸ್ ಧರಿಸಿ ಕಾಲೇಜಿಗೆ ಹೋಗುವುದರ ಹಿಂದಿನ ಉದ್ದೇಶ ವಿದ್ಯಾರ್ಥಿಗಳಲ್ಲಿ ಬಟ್ಟೆಗಳ ಆಯ್ಕೆಯಲ್ಲಿ ಆತ್ಮವಿಶ್ವಾಸ ತುಂಬುವುದು ಆಗಿತ್ತು" ಎಂದು ವಿವರಿಸಿದರು.
ಕಳೆದ ವರ್ಷ ತನ್ನ ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ಪೌಲ್ ಎರಡನೇ ಮದುವೆ ಆಗಿದ್ದರು. ಮದುವೆಯಾದ 2 ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಆಕೆ ನಟಿಸಿರುವ 'ಲೆವೆಲ್ ಕ್ರಾಸ್' ಇದೇ ಶುಕ್ರವಾರ ಥಿಯೇಟರ್‌ಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಟೀಸರ್, ಸಾಂಗ್ಸ್ ನಿರೀಕ್ಷೆ ಹೆಚ್ಚಿಸಿದೆ. ಅಮಲಾ ಪೌಲ್ ಕೊನೆಯದಾಗಿ ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಆಡು ಜೀವಿತಂ' ಚಿತ್ರದಲ್ಲಿ ನಟಿಸಿದ್ದರು.
ಮಾರ್ಚ್ 28ಕ್ಕೆ ತೆರೆಕಂಡ 'ಆಡು ಜೀವಿತಂ' ಇತ್ತೀಚೆಗೆ ಓಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರದಲ್ಲಿ ನಜೀಬ್ ಮೊಹಮ್ಮದ್(ಪೃಥ್ವಿರಾಜ್ ಸುಕುಮಾರನ್) ಪತ್ನಿ ಸಯಿನು ಆಗಿ ಅಮಲಾ ನಟಿಸಿದ್ದಾರೆ.


Click it and Unblock the Notifications











