ಪತಿ ಜೊತೆ ಗರ್ಭಿಣಿ ಅಮಲಾ ಪೌಲ್ ರೊಮ್ಯಾಂಟಿಕ್ ಡ್ಯಾನ್ಸ್, ಲಿಪ್‌ಲಾಕ್: ವಿಡಿಯೋ ವೈರಲ್

ಮಾಲಿವುಡ್ ನಟಿ ಅಮಲಾ ಪೌಲ್ ಇತ್ತೀಚೆಗೆ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ನವೆಂಬರ್ 5ರಂದು ಅಮಲಾ 2ನೇ ಮದುವೆ ಆಗಿದ್ದರು. ಅದಕ್ಕು ಮುನ್ನ ನಿರ್ದೇಶಕ ಎ. ಎಲ್ ವಿಜಯ್ ಜೊತೆ ಮದುವೆ ಆಗಿ ಡಿವೋರ್ಸ್ ಪಡೆದಿದ್ದರು. 2ನೇ ಮದುವೆಯಾದ 2 ತಿಂಗಳಿಗೆ ಅಮಲಾ ಗುಡ್ ನ್ಯೂಸ್ ಹೇಳಿದ್ದರು.

ನವೆಂಬರ್ 5ರಂದು ಜಗತ್ ದೇಸಾಯಿ ಜೊತೆ ಅಮಲಾ ಪೌಲ್ ಮದುವೆ ಆಗಿದ್ದರು. ಅದ್ಧೂರಿ ವಿವಾಹ ಮಹೋತ್ಸವದ ಫೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಜಗತ್ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿರುವುದಾಗಿ ಹೇಳಲಾಗಿತ್ತು. ಸದ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಇನ್‌ಸ್ಟಾಗ್ರಾಂನಲ್ಲಿ, "1+1 ನಿಮ್ಮೊಂದಿಗೆ 3 ಆಗಿದೆ ಎಂದು ಈಗ ನನಗೆ ತಿಳಿದಿದೆ!" ಎಂದು ವಾರದ ಹಿಂದೆ ತಿಳಿಸಿದ್ದರು.

Amala paul shares pregnancy photoshoot, Dance video with husband

ಸೋಶಿಯಲ್ ಮೀಡಿಯಾದಲ್ಲಿ ಅಮಲಾ ಪೌಲ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಬೋಲ್ಡ್ ಫೋಟೊಶೂಟ್‌ಗಳನ್ನು ಮಾಡಿಸಿ ಶೇರ್ ಮಾಡುತ್ತಿರುತ್ತಾರೆ. ಪ್ರವಾಸ, ಹಬ್ಬ ಹರಿದಿನಗಳಲ್ಲಿ ವಿಶೇಷ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಕೆಲವೊಮ್ಮೆ ಈ ಫೋಟೊಗಳಿಂದ ಟೀಕೆ ಎದುರಿಸಿದ್ದು ಇದೆ. ಇನ್ನು ಆಕೆ ಪ್ರೆಗ್ನೆನ್ಸಿ ಅನೌನ್ಸ್ ಅನೌನ್ಸ್ ಮಾಡಿದ್ದರ ಬಗ್ಗೆಯೂ ಕೆಲವರು ಕುಹಕವಾಡಿದ್ದರು. ಗರ್ಭಿಣಿ ಆದ ಬಳಿಕ ಜಗತ್ ದೇಸಾಯಿ ಜೊತೆ ಮದುವೆ ಆದ್ರಾ? ಎಂದು ಕಾಲೆಳೆದಿದ್ದರು.

ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ಗಾಗಿ ಅಮಲಾ ಸ್ಪೆಷಲ್ ಫೋಟೊಶೂಟ್ ಕೂಡ ಮಾಡಿಸಿದ್ದರು. ಬೀಚ್ ಬಳಿ ಪತಿ ಜಗತ್ ದೇಸಾಯಿ ಜೊತೆ ಬೇಬಿ ಬಂಪ್ ಪ್ರದರ್ಶಿಸುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿತ್ತು. ಅಭಿಮಾನಿಗಳು ಕೂಡ ದಂಪತಿಗೆ ಅಭಿನಂದನೆ ತಿಳಿಸಿದ್ದರು. ಇದೀಗ ಅದೇ ಫೋಟೊಶೂಟ್‌ನ ಮತ್ತೊಂದು ಸ್ಪೆಷಲ್ ವಿಡಿಯೋವನ್ನು ಹೆಬ್ಬುಲಿ ಬೆಡಗಿ ಹಂಚಿಕೊಂಡಿದ್ದಾರೆ.

ಗರ್ಭಿಣಿ ಆಗಿ ಸಿಕ್ಕಾಪಟ್ಟೆ ಜೋಶ್‌ನಲ್ಲಿರುವ ಅಮಲಾ, ಪತಿಯ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿ, ತುಟಿಗೆ ತುಟಿ ಸೇರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರೆಡ್ ಹಾಲ್ಟರ್ ನೆಕ್ ಕ್ರಾಪ್ ಟಾಪ್ ಹಾಗೂ ಅದಕ್ಕೆ ಹೊಂದಿಕೆಯಾಗುವ ಥೈ-ಹೈ ಸ್ಲಿಟ್ ಸ್ಕರ್ಟ್ ತೊಟ್ಟು ಮಿಂಚಿದ್ದಾರೆ.

Amala paul shares pregnancy photoshoot, Dance video with husband

ವೈಟ್ ಥೈ-ಹೈ ಸ್ಲಿಟ್ ಗೌನ್‌ನಲ್ಲಿ ಕೂಡ ಅಮಲಾ ಫೋಟೊಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರೌನ್ ಕಲರ್‌ನ ಮತ್ತೊಂದು ಕಾಸ್ಟ್ಯೂಮ್‌ನಲ್ಲಿ ಕೂಡ ಕೇರಳ ಕುಟ್ಟಿ ಮಿಂಚಿದ್ದಾರೆ. ಇಬ್ಬರೂ ಸಿಕ್ಕಾಪಟ್ಟೆ ಜೋಶ್‌ನಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು ಒಂದಷ್ಟು ಕ್ಯಾಂಡಿಡ್ ಕ್ಲಿಕ್‌ಗಳನ್ನು ನೋಡಬಹುದು.

ಕಳೆದ ವರ್ಷ 'ಭೋಲಾ' ಚಿತ್ರದಲ್ಲಿ ಕೊನೆಯದಾಗಿ ಅಮಲಾ ನಟಿಸಿದ್ದರು. 'ಆಡುಜೀವಿತಂ', 'ದ್ವಿಜ', 'ಲೆವೆಲ್ ಕ್ರಾಸ್' ಎನ್ನುವ ಮಲಯಾಳಂ ಸಿನಿಮಾಗಳಲ್ಲಿ ಮಾಲಿವುಡ್ ಬೆಡಗಿ ನಟಿಸುತ್ತಿದ್ದಾರೆ. ಇನ್ನು ಸುದೀಪ್ ಜೋಡಿಯಾಗಿ 'ಹೆಬ್ಬುಲಿ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೂ ಬಂದಿದ್ದರು.

ಬೋಲ್ಡ್ ಪಾತ್ರಗಳಲ್ಲಿ ಅಮಲಾ ಪೌಲ್ ನಟಿಸಿರುವುದೇ ಹೆಚ್ಚು. ಪಾತ್ರಕ್ಕಾಗಿ ಸಂಪೂರ್ಣ ಬೆತ್ತಲಾಗಿಯೂ ನಟಿಸಿದ್ದು ಇದೆ. 'ಆಡೈ' ಚಿತ್ರದಲ್ಲಿ ಅಂತಾದೊಂದು ಪ್ರಯತ್ನ ಮಾಡಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಕೂಡ ಅಮಲಾ ಕಾಣಿಸಿಕೊಂಡಿದ್ದಾರೆ.

2014ರಲ್ಲಿ ತಮಿಳು ನಿರ್ದೇಶಕ ಎ. ಎಲ್‌ ವಿಜಯ್‌ ಅವರನ್ನು ಅಮಲಾ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ 2017ರಲ್ಲಿ ಇಬ್ಬರು ದೂರಾಗಿದ್ದರು. ಕೆಲ ದಿನಗಳ ಹಿಂದೆ ಭವಿಂದರ್ ಸಿಂಗ್ ಎಂಬುವವರ ಜೊತೆ ಅಮಲಾ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇಬ್ಬರು ಮದುವೆ ಆಗಿರುವಂತೆ ಫೋಟೊಗಳು ವೈರಲ್ ಆಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಆಕೆ ಹೇಳಿದ್ದರು.

ಭವಿಂದರ್ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಅಮಲಾ ಪೌಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ನನಗೂ- ಅಮಲಾಗೂ ಮದುವೆ ಆಗಿದೆ ಎಂದು ಭವಿಂದರ್ ಹೇಳಿದ್ದಾಗಿ ವರದಿ ಆಗಿತ್ತು.

More from Filmibeat

English summary
Amala paul romantic dance with husband Jagat Desai video goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X