For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ನಟಿ ಹಾಗು ಬಾಲಿವುಡ್‌ ನಿರ್ದೇಶಕನಿಗೆ ಕೊರೊನಾ ಪಾಸಿಟಿವ್

  |

  ಮಲಯಾಳಂ ನಟಿ ಅಹನಾ ಕೃಷ್ಣಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಸ್ವತಃ ಅಹನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

  ''ಎರಡು ದಿನಗಳ ಹಿಂದೆ ನನಗೆ ಕೊರೊನಾ ವೈರಸ್ ತಗುಲಿದೆ. ನನ್ನನ್ನು ನಾನೇ ಕ್ವಾರಂಟೈನ್ ಮಾಡಿಕೊಂಡಿದ್ದೇನೆ'' ಎಂದು ಬರೆದುಕೊಂಡು ಫೋಟೋ ಹಾಕಿದ್ದರು.

  ಕೊರೊನಾದಿಂದ ಗುಣಮುಖ: ಕಾಮಾಕ್ಷಿ ದೇವಿಯ ದರ್ಶನ ಪಡೆದ ಶರತ್ ಕುಮಾರ್ಕೊರೊನಾದಿಂದ ಗುಣಮುಖ: ಕಾಮಾಕ್ಷಿ ದೇವಿಯ ದರ್ಶನ ಪಡೆದ ಶರತ್ ಕುಮಾರ್

  ನಂತರ ಮತ್ತೊಂದು ಪೋಸ್ಟ್ ಹಾಕಿದ ನಟಿ ''ನಾನು ಆರೋಗ್ಯವಾಗಿದ್ದೇನೆ. ಆದಷ್ಟೂ ಬೇಗ ಕೊರೊನಾ ಪರೀಕ್ಷೆಯಲ್ಲಿ ನೆಗಿಟಿವ್ ಬರಲಿದೆ. ಆ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ'' ಎಂದಿದ್ದಾರೆ.

  ಅಹನಾ ಕೃಷ್ಣಗೆ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ''ಬೇಗ ಚೇತರಿಸಿಕೊಳ್ಳಿ'' ಎಂದು ಶುಭಕೋರುತ್ತಿದ್ದಾರೆ. ಜೋಸೆಫ್ ಮನು ಮತ್ತು ಜೋಸೆಫ್ ಪಿಡಿಕಿಟ್ಟಪುಲ್ಲಿ ನಿರ್ದೇಶನದ 'ನ್ಯಾನ್ಸಿ ರಾಣಿ' ಚಿತ್ರದಲ್ಲಿ ಅಹನಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಜಿಷ್ಣು ಶ್ರೀಕಂದನ್ ನಿರ್ಮಾಣ ಮಾಡುತ್ತಿದ್ದಾರೆ.

  Anand L Rai and Ahaana Krishna Tested positive For Covid 19

  ಬಾಲಿವುಡ್ ನಿರ್ದೇಶಕನಿಗೂ ಕೊರೊನಾ

  ಮತ್ತೊಂದೆಡೆ ಬಾಲಿವುಡ್ ಚಿತ್ರ ನಿರ್ದೇಶಕ ಆನಂದ್ ಎಲ್ ರೈಗೂ ಕೊರೊನಾ ಸೋಂಕು ತಗುಲಿದೆ. ಪ್ರಸ್ತುತ ಧನುಶ್, ಅಕ್ಷಯ್ ಕುಮಾರ್ ಹಾಗೂ ಸಾರಾ ಅಲಿ ಖಾನ್ ನಟನೆಯ 'ಅತ್ರಂಗಿ ರೇ' ನಿರ್ದೇಶಿಸುತ್ತಿದ್ದಾರೆ.

  ಕೊರೊನಾದಿಂದ ಗುಣಮುಖರಾಗುತ್ತಿದ್ದಂತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಕುಲ್ ಪ್ರೀತ್ ಸಿಂಗ್ಕೊರೊನಾದಿಂದ ಗುಣಮುಖರಾಗುತ್ತಿದ್ದಂತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಕುಲ್ ಪ್ರೀತ್ ಸಿಂಗ್

  Recommended Video

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಆನಂದ್ ಎಲ್ ರೈ ''ನನಗೆ ಕೊರೊನಾ ವೈರಸ್ ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದೇನೆ. ಆರೋಗ್ಯ ಅಧಿಕಾರಿಗಳು ಸೂಚನೆಯಂತೆ ನಾನು ಕ್ವಾರಂಟೈನ್ ಆಗಿದ್ದೇನೆ. ನನ್ನ ಜೊತೆ ಸಂಪರ್ಕ ಬಂದಿದ್ದವರಿಗೆ ಕ್ವಾರಂಟೈನ್ ಆಗಿ ಎಂದು ತಿಳಿಸುತ್ತಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

  English summary
  Malayalam actress Ahaana Krishna and Anand L Rai tested positive for Coronavirus.
  Thursday, December 31, 2020, 18:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X